ಕ್ವಾಲಿಫೈಯರ್ 1ರಲ್ಲಿ ಸೋತ ಪಂಜಾಬ್‌ಗೆ ಪ್ರಶಸ್ತಿ ಗೆಲ್ಲುವ ಅವಕಾಶ ಇದೆಯಾ?
ನ್ಯೂ ಚಂಡೀಗಢ ಅಂಗಳದಲ್ಲಿ ನಡೆದ 18ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳು ಫೈಟ್ ನಡೆಸಿದವು. ಗುರುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಪಂಜಾಬ್ ತಂಡವನ್ನು ಮಣಿಸಿ, ನೇರವಾಗಿ 2025ರ ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಪಂಜಾಬ್ ಕಿಂಗ್ಸ್ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್‌ನಲ್ಲಿ ಪಂದ್ಯ ಗೆದ್ದ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯ ಜೂನ್ 1 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ. ಕ್ವಾಲಿಫೈಯರ್ ಎರಡರಲ್ಲಿ ಗೆದ್ದ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ.
ಆರ್‌ಸಿಬಿ ವಿರುದ್ಧದ ಸೋತ ಬಳಿಕ ಪಂಜಾಬ್ ಕಿಂಗ್ಸ್ ನಿರಾಸೆ ಅನುಭವಿಸಿದೆ. ಆದರೆ ಪಂಜಾಬ್ ಫೈನಲ್ ತಲುಪಿಲ್ಲ ಎಂಬ ನಿರಾಸೆ ಅಷ್ಟೇ ಇದೆ ಆದರೆ, ಕಪ್ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಹತಾಶೇ ಇಲ್ಲ. ಮತ್ತೊಂದು ಅವಕಾಶ ಪಂಜಾಬ್ ತಂಡವನ್ನು ಹುಡುಕಿಕೊಂಡು ಬರಲಿದೆ. ಜೂನ್ 1 ರಂದು ಪಂಜಾಬ್ ಅಹಮದಬಾದ್‌ನಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದ ವಿರುದ್ಧ ಪಂದ್ಯವನ್ನು ಆಡಲಿದೆ. ಹಾಗಿದ್ದರೆ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಐಪಿಎಲ್ ಟ್ರೋಫಿ ಗೆಲ್ಲುವುದಿಲ್ಲವೇ ಎಂಬ ಸಂಶಯಗಳು ನಿಮ್ಮ ಮನದಲ್ಲಿ ಮೂಡಬಹುದು. ಇದಕ್ಕೆ ಅಂಕಿ ಅಂಶಗಳು ನೀಡಿರುವ ಉತ್ತರ ಏನು ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಮುಂಬೈ ಡಬಲ್ ಧಮಾಕಾ..
ಕ್ವಾಲಿಫೈಯರ್ ಮೊದಲರಲ್ಲಿ ಸೋತು ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಹೆಗ್ಗಳಿಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾತ್ರ ಸಲ್ಲುತ್ತದೆ. ಮುಂಬೈ ಇಂಡಿಯನ್ಸ್ ಈ ಸಾಧನೆಯನ್ನು ಎರಡು ಬಾರಿ ಮಾಡಿದೆ. ಮುಂಬೈ 2013 ಮತ್ತು 2017 ರಲ್ಲಿ ಈ ಸಾಧನೆ ಮಾಡಿತ್ತು. ಮುಂಬೈ 2013ರಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ವಿರುದ್ಧದ ಸೋತು ನಿರಾಸೆಯನ್ನು ಅನುಭವಿಸಿತ್ತು. ಆದರೆ ಈ ಸೋಲಿನ ನೋವನ್ನು ಆ ತಂಡಕ್ಕೆ ಬಹುವಾಗಿ ಕಾಡಲಿಲ್ಲ. ಕಾರಣ ಮುಂಬೈ ಇಂಡಿಯನ್ಸ್ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಅಬ್ಬರಿಸಿತ್ತು.

ಮುಂಬೈ ಇಂಡಿಯನ್ಸ್ 2017ರಲ್ಲೂ ಇಂತಹದ್ದೇ ಸಾಧನೆಯನ್ನು ಮಾಡಿತ್ತು. ಮುಂಬೈ ಈ ಆವೃತ್ತಿಯ ಮೊದಲ ಕ್ವಾಲಿಫೈಯರ್‌ನಲ್ಲಿ ರೈಸಿಂಗ್ ಪುಣೇ ಸೂಪರ್ ಜೈಂಟ್ಸ್ ವಿರುದ್ಧ ಸೋಲು ಕಂಡಿತ್ತು. ಆದರೆ ಫೈನಲ್‌ನಲ್ಲಿ ಇದೇ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕಟ್ಟಿ ಹಾಕಿ ಟ್ರೋಫಿಗೆ ಮುತ್ತಿಟ್ಟಿತು. ಈ ಸಾಧನೆಯನ್ನು ಮಾಡಲು ಪಂಜಾಬ್ ಪ್ಲ್ಯಾನ್ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications