ಆತನಲ್ಲಿ ವೈರಸ್ ಈಗ ತೆಗೆಯಲ್ಪಟ್ಟಿದೆ: ಆಟಗಾರನ ಶ್ಲಾಘಿಸಿದ ಜಡೇಜಾ

ನವದೆಹಲಿ: ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಬ್ಯಾಟಿಂಗ್ ವೈಫಲ್ಯ ತೋರಿಕೊಂಡಿದ್ದರು. ಬಾರ್ಡರ್-ಗಾವಸ್ಕರ್ ಟ್ರೋಫಿ ಮೊದಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಕ್ರಮವಾಗಿ 0, 2 ರನ್ ಗಳಿಸಿದ ಬಳಿಕ ಅವರ ಬ್ಯಾಟಿಂಗ್ ಕೌಶಲವನ್ನು ಮೊನಚುಗೊಳಿಸಲಾಗಿತ್ತು.
ಆಸ್ಟ್ರೇಲಿಯಾದಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶಿಸಿ ಭಾರತಕ್ಕೆ ವಾಪಸ್ಸಾಗಿದ್ದ ಪೃಥ್ವಿ, ಬ್ಯಾಟಿಂಗ್ ಅಭ್ಯಾಸ ನಡೆಸಿ ತಯಾರಾಗಿದ್ದರು. ಆಮೇಲೆ ವಿಜಯ್ ಹಜಾರೆಯಲ್ಲಿ ಆಡಿದ್ದ ಪೃಥ್ವಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ವಿಜಯ್ ಹಜಾರೆ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ 800+ ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಕೂಡ ನಿರ್ಮಿಸಿದರು.
ದೇಸಿ ಕ್ರಿಕೆಟ್‌ನ ಫಾರ್ಮ್ ಅನ್ನು ಶಾ ಐಪಿಎಲ್‌ಗೂ ತಂದರು. 14ನೇ ಆವೃತ್ತಿಯ ಐಪಿಎಲ್ ಕೋವಿಡ್-19ನಿಂದಾಗಿ ಅಮಾನತಾಗುವಾಗ ಪೃಥ್ವಿ 8 ಪಂದ್ಯಗಳಲ್ಲಿ 308 ರನ್ ಕಲೆ ಹಾಕಿದ್ದರು. ಹೀಗಾಗಿ ಯುವ ಬ್ಯಾಟ್ಸ್‌ಮನ್ ಫಾರ್ಮ್‌ಗೆ ಮರಳಿದ್ದನ್ನು ಭಾರತದ ಮಾಜಿ ಆಟಗಾರ ಅಜಯ್ ಜಡೇಜಾ ಶ್ಲಾಘಿಸಿದ್ದಾರೆ.
'ವೈರಸ್ ಇರುವ ಕಂಪ್ಯೂಟರ್‌ನಂತೆ ಇದ್ದರು. ಈಗ ವೈರಸ್ ತೆಗೆದ ಕಂಪ್ಯೂಟರ್‌ನಂತೆ ಪೃಥ್ವಿ ಆಗಿದ್ದಾರೆ. ಕಳೆದ ವರ್ಷ ಅವರ ತಲೆಗೋ ಅಥವಾ ಕೌಶಲಕ್ಕೋ ವೈರಸ್ ಬಡಿದಿತ್ತು. ಆದರೆ ಈಗ ಎಚ್ಚೆತ್ತುಕೊಂಡಿರುವ ಆಟಗಾರ ಅಸಾಮಾನ್ಯ ಪ್ರತಿಭೆ ತೋರುತ್ತಿದ್ದಾರೆ. ಶಾ ಈಗ ಎಲ್ಲಾ ಆಟಗಾರರನ್ನು ಹಿಂದಿಕ್ಕಿ ಮುಂದೆ ಸಾಗುವ ಪ್ರದರ್ಶನ ನೀಡುತ್ತಿದ್ದಾರೆ,' ಎಂದು ಜಡೇಜಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications