Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾ ಗೆಲುವಿಗೆ WWE ದಂತಕತೆ ಟ್ರಿಪಲ್ ಎಚ್‌ ಶ್ಲಾಘನೆ

A WWE star wrestler Triple H lauds Team Indias win in Australia

ವಾಷಿಂಗ್ಟನ್: ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಇನ್ನಿಂಗ್ಸ್‌ ಮುಗಿಸಿ ಪಂದ್ಯವನ್ನು ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಆ ಬಳಿಕ ಟೆಸ್ಟ್ ಸರಣಿ ಗೆದ್ದಿದ್ದೇ ಒಂದು ಇತಿಹಾಸವೆನಿಸಿದೆ. ಭಾರತೀಯರ ಈ ಸಾಧನೆ ಭಾರತದ ಕ್ರಿಕೆಟ್‌ ಇತಿಹಾಸದಲ್ಲಿ ಎಂದಿಗೂ ಚಿರಸ್ಮರಣೀಯವಾಗಿ ಉಳಿಯಲಿದೆ.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದಿರುವ ಅಜಿಂಕ್ಯ ರಹಾನೆ ಪಡೆಯ ಸಾಧನೆಯನ್ನು ಬರೀ ಭಾರತೀಯರಷ್ಟೇ ಹೊಗಳುತ್ತಿಲ್ಲ. ಕ್ರಿಕೆಟ್ ರಂಗದ ದಿಗ್ಗಜರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಬರೀ ಕ್ರಿಕೆಟ್ ಅಷ್ಟೇ ಅಲ್ಲ, ಫುಟ್ಬಾಲ್, ರಸ್ಲಿಂಗ್‌ನಂತ ಕ್ರೀಡಾಪಟುಗಳೂ ಭಾರತ ತಂಡದ ಬಗ್ಗೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ವರ್ಲ್ಡ್ ರಸ್ಲಿಂಗ್‌ ಎಂಟರ್‌ಟೇನ್ಮೆಂಟ್‌ (ಡಬ್ಲ್ಯೂಡಬ್ಲ್ಯೂಇ) ದಂತಕತೆ, ಅಮೆರಿಕಾದ ಟ್ರಿಪಲ್ ಎಚ್‌ ಕೂಡ ಆಸ್ಟ್ರೇಲಿಯಾ ವಿರುದ್ಧದ ಟೀಮ್ ಇಂಡಿಯಾದ ಸಾಧನೆಯನ್ನು ಕೊಂಡಾಡಿದ್ದಾರೆ. ಹಿಂದುಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ ಟ್ರಿಪಲ್ ಎಚ್‌, ಜನವರಿ 26ರಂದು ನಡೆಯುವ ಸೂಪರ್‌ಸ್ಟಾರ್ ಸ್ಪೆಕ್ಟ್ಯಾಕಲ್ ಪಂದ್ಯ ವೀಕ್ಷಿಸಲು ನಾನು ಭಾರತ ತಂಡವನ್ನು ವೈಯಕ್ತಿಕವಾಗಿ ಆಹ್ವಾನಿಸುತ್ತಿದ್ದೇನೆ ಎಂದಿದ್ದಾರೆ.

'WWE ಸ್ಕ್ರಿಪ್ಟ್ ರೀತಿಯಲ್ಲೇ ಭಾರತ ಕಮ್‌ಬ್ಯಾಕ್‌ ಮಾಡಿತು, ಅದ್ಭುತ ರೀತಿಯಲ್ಲಿ ಟೆಸ್ಟ್ ಸರಣಿ ಗೆದ್ದಿತು. ಆ ಗೆಲುವು ಅದ್ಭುತ, ಸರಣಿಯಲ್ಲಿ ಪಾಲ್ಗೊಂಡ ಎಲ್ಲರ ಬಗ್ಗೆಯೂ ಹೆಮ್ಮೆಯೆನಿಸುತ್ತದೆ. ಎಲ್ಲರೂ ಅಲ್ಲಿ ಇನ್ನೂ ಸಂಭ್ರಮಾಚರಿಸುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ತಂಡವನ್ನು ಇಲ್ಲಿಗೆ ನಾನು ವೈಯಕ್ತಿಕವಾಗಿ ಆಹ್ವಾನಿಸುತ್ತಿದ್ದೇನೆ. ಸೂಪರ್‌ಸ್ಟಾರ್ ಸ್ಪೆಕ್ಟ್ಯಾಕಲ್‌ನ ಭಾಗವಾಗಿ. ಇಲ್ಲೂ ಸಂಭ್ರಮ ಮುಂದುವರೆಸಿ,' ಎಂದು ಟ್ರಿಪಲ್ ಎಚ್‌ ಹೇಳಿದ್ದಾರೆ.

Story first published: Friday, January 22, 2021, 20:41 [IST]
Other articles published on Jan 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+