Sam Konstas: ಕಾನ್‌ಸ್ಟಾಸ್‌ಗೆ ಭಾರತ ಪ್ರವಾಸ ಕೈಗೊಳ್ಳುವಂತೆ ಸವಾಲಾಕಿದ ಮಾಜಿ ಕ್ರಿಕೆಟಿಗ
ಕಳೆದ ಒಂದು ವಾರದಿಂದ ಸ್ಯಾಮ್ ಕಾನ್‌ಸ್ಟಾಸ್ ಹೆಸರು ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ. ಆಸ್ಟ್ರೇಲಿಯಾದ 19 ವರ್ಷದ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅಬ್ಬರಿಸುತ್ತಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರೊಂದಿಗೆ ವಾಗ್ವಾದ ನಡೆಸುವ ಮೂಲಕ ಸುದ್ದಿಯಾಗಿದ್ದಾರೆ. ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಮತ್ತು ಈಗ ನಾಯಕ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಸ್ಯಾಮ್ ಘರ್ಷಣೆ ಮಾಡಿಕೊಂಡಿದ್ದಾರೆ. ಇದನ್ನು ಕಂಡ ಭಾರತ ತಂಡದ ಮಾಜಿ ಕ್ರಿಕೆಟಿಗ ಕಾನ್‌ಸ್ಟಾಸ್‌ಗೆ ಭಾರತ ಪ್ರವಾಸ ಕೈಗೊಳ್ಳುವಂತೆ ಸವಾಲಾಕಿದ್ದಾರೆ.
ಮೆಲ್ಬೋರ್ನ್‌ನಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಕಾನ್‌ಸ್ಟಾಸ್ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಕೊಹ್ಲಿ ಅವರು ಕಾನ್‌ಸ್ಟಾಸ್ ಭುಜಕ್ಕೆ ಭುಜ ಡಿಕ್ಕಿ ಹೊಡೆದಿದ್ದರು. ಹೀಗಾಗಿ ಕೊಹ್ಲಿಗೆ ಪಂದ್ಯದ ಶುಲ್ಕದ 20 ಪ್ರತಿಶತದಷ್ಟು ದಂಡವನ್ನು ಐಸಿಸಿ ವಿಧಿಸಿತ್ತು. ಅಷ್ಟೇ ಅಲ್ಲ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಮಾಡುವಾಗ ಕಾನ್‌ಸ್ಟಾಸ್ ಕೆಣಕಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಈಗ ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ದಿನ, ಕಾನ್‌ಸ್ಟಾಸ್ ಅನುಭವಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಜಗಳವಾಡಿದರು. ಆದರೆ, ಅಂಪೈರ್ ವಿಷಯವನ್ನು ತಣ್ಣಗಾಗಿಸಿದರು. ಇದು ಹಲವರನ್ನು ಕೆರಳುವಂತೆ ಮಾಡಿದೆ.

ಚೋಪ್ರಾ ಸವಾಲು
ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಕಾನ್‌ಸ್ಟಾಸ್ ವಾಗ್ವಾದ ನಡೆಸಿದ ನಂತರ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಕೆರಳಿದಿದ್ದಾರೆ. ಆಕಾಶ್ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಭಾರತ ಪ್ರವಾಸ ಕೈಗೊಳ್ಳುವಂತೆ ಕಾನ್‌ಸ್ಟಾಸ್‌ಗೆ ಸವಾಲಾಕಿದ್ದಾರೆ. ಆಕಾಶ್ ಚೋಪ್ರಾ ಯುವಕರನ್ನು ಗೇಲಿ ಮಾಡುತ್ತಾ, 'ಕಾನ್‌ಸ್ಟಾಸ್‌ಗೆ ಭಾರತದ ಟೆಸ್ಟ್ ಟೂರ್ ಮಾಡುವಂತೆ ಮಾಡಿ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಟೀಮ್ ಇಂಡಿಯಾ ಬೆಂಬಲಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸದಾ ನಿಂತಿದ್ದಾರೆ. ಹೀಗಾಗಿ ಮುಂದಿನ ಬಾರಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡರೆ ಸ್ಯಾಮ್ ಕಾನ್‌ಸ್ಟಾಸ್ ಅವರನ್ನು ಕಳುಹಿಸುವಂತೆ ಆಕಾಶ ಚೋಫ್ರಾ ಹೇಳಿದ್ದಾರೆ. ಈಗ ತವರಿನಲ್ಲಿ ಸ್ಯಾಮ್ ಸದ್ದು ಮಾಡುತ್ತಿರಬಹುದು. ಆದರೆ ತವರಿನಲ್ಲಿ ಭಾರತ ತಂಡಕ್ಕೆ ಅವಮಾನವಾದರೆ ಇಲ್ಲಿನ ಅಭಿಮಾನಿಗಳು ಸುಮ್ಮನೆ ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ಸ್ಯಾಮ್ ಒತ್ತಡಕ್ಕೆ ಸಿಲುಕಿಕೊಳ್ಳಬಹುದು. ಹೀಗಾಗಿ ಭಾರತ ಪ್ರವಾಸ ಕೈಗೊಳ್ಳುವಂತೆ ಸವಾಲಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications