Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸದ್ಯಕ್ಕೆ ಐಪಿಎಲ್ ಇಲ್ಲ; ಕಾರಣ ಸಮೇತ ವಿವರಣೆ ನೀಡಿದ ಮಾಜಿ ಕ್ರಿಕೆಟಿಗ

Aakash Chopra explains Why ICC Might Have An Issue If IPL 2021 Returns To The UAE

ಈ ಬಾರಿಯ ಐಪಿಎಲ್ ಟೂರ್ನಿ ಕೊರೊನಾವೈರಸ್ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡು ಮುಂದೂಡಲ್ಪಟ್ಟಿರುವ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ. ಹೀಗೆ ಮುಂದೂಡಲ್ಪಟ್ಟಿರುವ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ 19ರಿಂದ ಪುನರಾರಂಭಿಸಲಾಗುವುದು ಎಂಬ ಸುದ್ದಿ ಕೆಲ ದಿನಗಳ ಹಿಂದಷ್ಟೇ ಹರಿದಾಡಿತ್ತು.

ಇಂಗ್ಲೆಂಡ್, ಪಾಕಿಸ್ತಾನ ಅಲ್ಲ ಈ ತಂಡ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲಲಿದೆ ಎಂದ ವಾಸಿಮ್ ಅಕ್ರಮ್

ಹೌದು ಸೆಪ್ಟೆಂಬರ್ 19ರಿಂದ ಅಕ್ಟೋಬರ್ 10ರವರೆಗೆ ಯುಎಇಯಲ್ಲಿ ಉಳಿದಿರುವ 31 ಐಪಿಎಲ್ ಪಂದ್ಯಗಳನ್ನು ನಡೆಸಲಾಗುವುದು ಎಂಬ ಸುದ್ದಿ ಹರಿದಾಡಿತ್ತು. ಟಿ ಟ್ವೆಂಟಿ ವಿಶ್ವಕಪ್‌ಗೂ ಮುನ್ನವೇ ಯುಎಇಯಲ್ಲಿ ಐಪಿಎಲ್ ಟೂರ್ನಿಯನ್ನು ಮುಗಿಸುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿದೆ ಎನ್ನಲಾಗುತ್ತಿದೆ. ಆದರೆ ಈ ಎಲ್ಲಾ ಸುದ್ದಿಗಳ ಕುರಿತು ಇದೀಗ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರತಿಕ್ರಿಯಿಸಿದ್ದು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೂ ಮುನ್ನವೇ ಯುಎಇಯಲ್ಲಿ ಐಪಿಎಲ್ ನಡೆಸಲು ಯಾವುದೇ ಕಾರಣಕ್ಕೂ ಐಸಿಸಿ ಒಪ್ಪುವುದಿಲ್ಲ ಎಂದಿದ್ದಾರೆ.

'ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಈ ವರ್ಷ ನಡೆಯಬೇಕಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಯುಎಇಯಲ್ಲಿ ನಡೆಸುವ ಸಾಧ್ಯತೆಯಿದೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ಯುಎಇಯಲ್ಲಿ ಟಿ ಟ್ವೆಂಟಿ ವಿಶ್ವಕಪ್ ನಡೆಯುವ ಕಾರಣ ಸೆಪ್ಟೆಂಬರ್ ತಿಂಗಳಿನಲ್ಲಿ ಯಾವುದೇ ಕಾರಣಕ್ಕೂ ಐಪಿಎಲ್ ನಡೆಸಲು ಅನುಮತಿ ನೀಡುವುದಿಲ್ಲ. ಏಕೆಂದರೆ ಯುಎಇಯ 3 ಪಿಚ್‌ಗಳಲ್ಲಿ 31 ಐಪಿಎಲ್ ಪಂದ್ಯಗಳನ್ನು ನಡೆಸಿದರೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಬೇಕಾದ ಪಿಚ್ ಗುಣಮಟ್ಟತೆ ಇರುವುದಿಲ್ಲ. ಹೀಗಾಗಿ ಐಸಿಸಿ ಯುಎಇಯಲ್ಲಿ ಐಪಿಎಲ್ ನಡೆಸುವುದನ್ನು ಇಷ್ಟಪಡುವುದಿಲ್ಲ' ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

Story first published: Friday, May 28, 2021, 16:13 [IST]
Other articles published on May 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+