Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC Finalಗೆ ಬಲಿಷ್ಠ ಭಾರತ ತಂಡ ಪ್ರಕಟಿಸಿದ ಆಕಾಶ್ ಚೋಪ್ರಾ

Aakash Chopra picked his Indias XI for the WTC Final against New Zealand

ನವದೆಹಲಿ: ಜೂನ್ 18-22ರ ವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಇದು ಟೆಸ್ಟ್‌ ಚಾಂಪಿಯನ್‌ಶಿಪ್‌ ಚೊಚ್ಚಲ ಆವೃತ್ತಿಯಾಗಿರುವುದರಿಂದ ಕ್ರಿಕೆಟ್ ಜಗತ್ತು ಚಾಂಪಿಯನ್ಸ್ ಯಾರಾಗಲಿದ್ದಾರೆ ಎಂದು ಕುತೂಹಲದಿಂದ ಕಾಯುತ್ತಿದೆ.

ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದ್ದು, ಭಾರತೀಯ ಕಾಲಮಾನ 3:30 PMಗೆ ಪಂದ್ಯ ಆರಂಭಗೊಳ್ಳಲಿದೆ. ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಪಡೆ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಸಜ್ಜಾಗಿವೆ.

ಟೀಮ್ ಇಂಡಿಯಾದ ಮಾಜಿ ಆಟಗಾರ, ಈಗ ಕಾಮೆಂಟೇಟರ್ ಆಗಿರುವ ಆಕಾಶ್ ಚೋಪ್ರಾ ನ್ಯೂಜಿಲೆಂಡ್ ವಿರುದ್ಧದ WTC ಫೈನಲ್ ಪಂದ್ಯಕ್ಕೆ ತನ್ನ ನೆಚ್ಚಿನ ತಂಡ ಪ್ರಕಟಿಸಿದ್ದಾರೆ. ಈ ತಂಡ ಬಲಿಷ್ಠವಾಗಿಯೂ ತಮತೋಲಿತವಾಗಿಯೂ ಇದೆ. ಮೂವರು ವೇಗಿ, ಇಬ್ಬರು ಸ್ಪಿನ್ನರ್‌ಗಳನ್ನು ಚೋಪ್ರಾ ತನ್ನ ತಂಡದಲ್ಲಿ ಹೆಸರಿಸಿದ್ದಾರೆ.

WTC ಫೈನಲ್‌ಗೆ ಆಕಾಶ್ ಚೋಪ್ರಾ ನೆಚ್ಚಿನ ಭಾರತ ತಂಡ
1. ಶುಬ್ಮನ್ ಗಿಲ್, 2. ರೋಹಿತ್ ಶರ್ಮಾ, 3. ಚೇತೇಶ್ವರ ಪೂಜಾರ, 4. ವಿರಾಟ್ ಕೊಹ್ಲಿ (ಸಿ), 5. ಅಜಿಂಕ್ಯ ರಹಾನೆ, 6. ರಿಷಭ್ ಪಂತ್ (ಡಬ್ಲ್ಯೂಕೆ), 7. ರವೀಂದ್ರ ಜಡೇಜಾ, 8. ಆರ್‌ ಅಶ್ವಿನ್, 9. ಜಸ್ಪ್ರೀತ್ ಬೂಮ್ರಾ.
10. ಮೊಹಮ್ಮದ್ ಶಮಿ, 11. ಇಶಾಂತ್ ಶರ್ಮಾ.

Story first published: Tuesday, June 15, 2021, 14:36 [IST]
Other articles published on Jun 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+