ಸಾರ್ವಕಾಲಿಕ ಶ್ರೇಷ್ಠ ಆರ್‌ಸಿಬಿ ತಂಡದಲ್ಲಿ ನಾಲ್ವರು ಕನ್ನಡಿಗರಿಗೆ ಸ್ಥಾನ

ಐಪಿಎಲ್‌ನಲ್ಲಿ ಆರ್‌ಸಿಬಿ ಈವರೆಗೂ ಒಂದೂ ಕಪ್ ಗೆಲ್ಲದಿರಬಹುದು. ಆದರೆ ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡವನ್ನು ಯಾವತ್ತಿಗೂ ಬಿಟ್ಟುಕೊಟ್ಟಿಲ್ಲ. ಕಳೆದ 12 ಆವೃತ್ತಿಗಳಲ್ಲೂ ಅಭಿಮಾನಿಗಳು ಅಭೂತಪೂರ್ವವಾಗಿ ಆರ್‌ಸಿಬಿ ತಂಡಕ್ಕೆ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. ಆದರೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮಾತ್ರ ಕನ್ನಡಿಗ ಆಟಗಾರರಿಗೆ ಹೆಚ್ಚಿನ ಮಣೆಹಾಕದಿರುವುದು ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ.
ಹಾಗಿದ್ದರೂ ಕೂಡ ಆರ್‌ಸಿಬಿ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಹೆಸರಿಸಿದಾಗ ಕನ್ನಡಿಗ ಆಟಗಾರರೇ ಎದ್ದುಕಾಣುತ್ತಾರೆ. ಟೀಮ್ ಇಂಡಿಯಾದ ಮಾಜಿ ಆಟಗಾರ ಕಾಮೆಂಟೇಟರ್ ಆಕಾಶ್ ಚೋಪ್ರಾ ಸಾರ್ವಕಾಲಿಕ ಶ್ರೇಷ್ಠ ಆರ್‌ಸಿಬಿ ತಂಡವನ್ನು ಪ್ರಕಟಿಸಿದ್ದು ಇದರಲ್ಲಿ ನಾಲ್ವರು ಕನ್ನಡಿಗರು ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಹಾಗಾದರೆ ಆಕಾಶ್ ಚೋಪ್ರಾ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ತಂಡ ಹೇಗಿದೆ ನೋಡೋಣ..

ವಿರಾಟ್ ಕೊಹ್ಲಿಯೇ ನಾಯಕ
ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿಗೂ ಮುನ್ನ ದಿಗ್ಗಜ ಆಟಗಾರರು ಮುನ್ನಡೆಸಿದ್ದಾರೆ. ರಾಹುಲ್ ದ್ರಾವಿಡ್, ಕೆವಿನ್ ಪೀಟರ್‌ಸನ್, ಅನಿಲ್ ಕುಂಬ್ಳೆ, ವೆಟ್ಟೋರಿಯಂತಾ ಆಟಗಾರರು ನಾಯಕರಾಗಿದ್ದಾರೆ. ಆದರೆ ಯಾರಿಂದಲೂ ಅಂತಾ ಪ್ರದರ್ಶನ ಕಂಡಬಂದಿಲ್ಲ. 2013ರರಲ್ಲಿ ವಿರಾಟ್ ಕೊಹ್ಲಿ ನಾಯಕನಾದ ನಂತರ ನಾಯಕತ್ವದಲ್ಲಿ ಯಾವಿದೇ ಬದಲಾವಣೆಯಾಗಿಲ್ಲ. ಐಪಿಎಲ್ ಚಾಂಪಿಯನ್ ಎನಿಸಲು ಸಾಧ್ಯವಾಗದಿದ್ದರೂ ಗಮನಾರ್ಹ ಪ್ರದರ್ಶನ ಕಂಡಬರುತ್ತಿದೆ.

ನಾಲ್ವರು ಕನ್ನಡಿಗರು
ಈ ತಂಡದಲ್ಲಿ ನಾಲ್ವರು ಕನ್ನಡಿಗರು ಇರುವುದು ಆರ್‌ಸಿಬಿ ಅಭಿಮಾನಿಗಳಿಗೆ ನಿಜಕ್ಕೂ ಖುಷಿಯ ಸಂಗತಿ. ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೆಎಲ್ ರಾಹುಲ್‌ಗೆ ವಹಿಸಲಾಗಿದೆ. ರಾಬಿನ್ ಉತ್ತಮ ಮಧ್ಯಮ ಕ್ರಮಾಂಕದಲ್ಲಿ ಸ್ಥಾನವನ್ನು ಪಡೆದುಕೊಂಡರೆ ಸ್ಪಿನ್ ಬೌಲಿಂಗ್‌ನಲ್ಲಿ ದಿಗ್ಗಜ ಅನಿಲ್ ಕುಂಬ್ಳೆ ಮತ್ತು ವೇಗದ ಬೌಲಿಂಗ್ ವಿಭಾಗದಲ್ಲಿ ವಿನಯ್ ಕುಮಾರ್ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ವಿದೇಶಿ ಆಟಗಾರರು ಯಾರು?
ನಾಲ್ವರು ವಿದೇಶಿ ಆಟಗಾರರನ್ನು ಈ ತಂಡದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ಪೋಟಕ ಆಟಗಾರ ಕ್ರೀಸ್ ಗೇಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆರ್‌ಸಿಬಿಯ ಅವಿಭಾಜ್ಯ ಅಂಗವಾಗಿರುವ ಎಬಿ ಡಿ ವಿಲಿಯರ್ಸ್ ಮತ್ತು ಆರಂಭಿಕ ಆವೃತ್ತಿಯಲ್ಲಿ ಮಿಂಚಿದ್ದ ನ್ಯೂಜಿಲೆಂಡ್‌ನ ರಾಸ್ ಟೇಲರ್ ಮಧ್ಯಮ ಕ್ರಮಾಂಕದಲ್ಲಿ ಹೆಸರಿಸಲಾಗಿದೆ. ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್ ವಿದೇಶಿ ಆಟಗಾರರ ಕೋಟಾದಲ್ಲಿ ಹೆಸರಿಸಲ್ಪಟ್ಟಿದ್ದಾರೆ.

ಚಾಹಲ್ ಮತ್ತು ಜಹೀರ್‌ಗೂ ಅವಕಾಶ
ಆರ್‌ಸಿಬಿಯ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ವೇಗಿ ಜಹೀರ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. ಬೌಲಿಂಗ್ ವಿಭಾಗದ ನೇತೃತ್ವವನ್ನು ಜಹೀರ್ ವಹಿಸಿಕೊಳ್ಳುತ್ತಿದ್ದು ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಯುವ ಆಟಗಾರ ಯುಜುವೇಂದ್ರ ಚಾಹಲ್ ಕೂಡ ಅವಕಾಶವ ನ್ನು ಗಿಟ್ಟಿಸಿಕೊಂಡಿದ್ದಾರೆ.

ಆಕಾಶ್ ಚೋಪ್ರಾ ಹೆಸರಿಸಿದ ಆರ್‌ಸಿಬಿ
ವಿರಾಟ್ ಕೊಹ್ಲಿ(ನಾಯಕ) ಕ್ರಿಸ್ ಗೇಲ್, ಕೆ.ಎಲ್. ರಾಹುಲ್(ವಿಕೆಟ್ ಕೀಪರ್) ಎಬಿ ಡಿ ವಿಲಿಯರ್ಸ್, ರಾಸ್ ಟೇಲರ್, ರಾಬಿನ್ ಉತ್ತಪ್ಪ, ಮಿಚೆಲ್ ಸ್ಟಾರ್ಕ್, ಅನಿಲ್ ಕುಂಬ್ಳೆ, ಯುಜುವೇಂದ್ರ ಚಾಹಲ್, ಆರ್. ವಿನಯ್ ಕುಮಾರ್, ಜಹೀರ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications