Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Chhaava: ಛಾವಾ ಸಿನಿಮಾ ನೋಡಿ ವಿವಾದ ಕಿಡಿ ಹಚ್ಚಿದ ಟೀಮ್ ಇಂಡಿಯಾ ಮಾಜಿ ಆಟಗಾರ

ಮರಾಠರ ಹೆಮ್ಮೆಯ ಸಿನಿಮಾ 'ಛಾವಾ' ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. 'ಛಾವಾ' ಸಿನಿಮಾ 2025ರ ಬಾಲಿವುಡ್‌ನ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾ ಆಗುವ ನಿರೀಕ್ಷೆಯಿದೆ. ಈ ಚಿತ್ರವು ಮರಾಠಾ ಸಾಮ್ರಾಜ್ಯದ ಎರಡನೇ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಮೊಘಲ್ ದೊರೆ ಔರಂಗಜೇಬನ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಸಂಭಾಜಿ ಮಹಾರಾಜ್ ಛತ್ರಪತಿ ಶಿವಾಜಿಯ ಪುತ್ರ. 'ಛಾವಾ' ಸಿನಿಮಾದಲ್ಲಿ ಸಂಭಾಜಿ ಮಹಾರಾಜ್ ಪಾತ್ರಕ್ಕೆ ವಿಕ್ಕಿ ಕೌಶಲ್ ಬಣ್ಣ ಹಚ್ಚಿದ್ದಾರೆ. ಬೆಳ್ಳಿ ತೆರೆ ಮೇಲೆ ವಿಕ್ಕಿ ಅಭಿನಯಕ್ಕೆ ಪ್ರೇಕ್ಷಕರು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಕ್ಕಿ ನಟನೆಗೆ ಉತ್ತಮ ಪ್ರತ್ರಿಕ್ರಿಯೆ ವ್ಯಕ್ತವಾಗುತ್ತಿದೆ. 44

ಛಾವಾ ಸಿನಿಮಾ ನೋಡಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಕೂಡ ಭಾವುಕರಾಗಿದ್ದಾರೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಛಾವಾ ಸಿನಿಮಾನವನ್ನು ಹೊಗಳಿದ್ದು, ಕೆಲವು ಪ್ರಶ್ನೆಗಳನ್ನು ಸಹ ಎತ್ತಿದ್ದಾರೆ.

Aakash Chopra sparks controversy after watching the movie Chhaaava

ಆಕಾಶ್ ಚೋಪ್ರಾ ಹೇಳಿದ್ದೇನು?

ಆಕಾಶ್ ಚೋಪ್ರಾ 'ಛಾಬಾ' ಸಿನಿಮಾ ನೋಡಿ ಮನ ಸೋತಿದ್ದಾರೆ. ಸಿನಿಮಾ ನೋಡಿದ ಮೇಲೆ ಟ್ವೀಟ್ ಮಾಡಿರುವ ಅವರು, ಶಾಲೆಗಳಲ್ಲಿ ಸಂಭಾಜಿ ಮಹಾರಾಜರ ಬಗ್ಗೆ ಏಕೆ ಕಲಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. 'ಇಂದು ಛಾವಾ ನೋಡಿದೆ. ಸಂಭಾಜಿ ಮಹಾರಾಜರ ಧೈರ್ಯ, ನಿಸ್ವಾರ್ಥತೆ ಮತ್ತು ಕರ್ತವ್ಯ ಪ್ರಜ್ಞೆಯ ಅದ್ಭುತ ಕಥೆ. ನಿಜವಾದ ಪ್ರಶ್ನೆ ಏನೆಂದರೆ ಶಾಲೆಯಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಬಗ್ಗೆ ನಮಗೆ ಏಕೆ ಕಲಿಸಲಿಲ್ಲ? ಅವರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಅಕ್ಬರ್ ಒಬ್ಬ ಮಹಾನ್ ಮತ್ತು ನ್ಯಾಯಯುತ ಚಕ್ರವರ್ತಿ ಎಂದು ನಮಗೆ ತಿಳಿದುಬಂದಿತು. ದೆಹಲಿಯಲ್ಲಿ ಔರಂಗಜೇಬ್ ರಸ್ತೆ ಎಂಬ ಹೆಸರಿನ ಒಂದು ಪ್ರಮುಖ ರಸ್ತೆಯೂ ಇದೆ. ಇದು ಏಕೆ ನಡೆದಿದೆ ಎಂದು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ. ಇದಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಆಕಾಶ್ ಚೋಪ್ರಾ ಅವರು ವಿವಾದ ಕಿಡಿ ಹಚ್ಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಭರ್ಜರಿ ಕಲೆಕ್ಷನ್

'ಛಾವಾ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಐದನೇ ದಿನಕ್ಕೆ ಕಾಲಿಟ್ಟಿದೆ. ವರದಿಗಳ ಪ್ರಕಾರ, 130 ಕೋಟಿ ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ 'ಛಾವಾ' ಸಿನಿಮಾ ಈಗಾಗಲೇ ಭಾರತದಲ್ಲಿ 140.5 ಕೋಟಿ ರೂ. ಗಳಿಸಿದೆ. ವಿಶ್ವಾದ್ಯಂತ 164.75 ಕೋಟಿ ರೂ. ಗಳನ್ನು ಗಳಿಸಿದೆ. ಫೆಬ್ರವರಿ 14 ರಂದು ಬಿಡುಗಡೆಯಾದ ನಂತರ, ಸಿನಿಮಾವು ಮೊದಲ ದಿನವೇ 31 ಕೋಟಿ ರೂ.ಗಳನ್ನು ಗಳಿಸಿತು. ಮೊದಲ ದಿನವೇ ವಿಶ್ವಾದ್ಯಂತ 50 ಕೋಟಿ ರೂ.ಗಳ ಗಳಿಕೆಯನ್ನು ದಾಟಿತು. ಶನಿವಾರ ಅದು 36.5 ಕೋಟಿ ರೂ. ಗಳಿಸಿದೆ. ಆದರೆ ಭಾನುವಾರ 48.5 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ.

ಛಾವಾ ಸಿನಿಮಾವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ನಾಯಕ ನಟ ವಿಕ್ಕಿ ಕೌಶಲ್, ನಾಯಕಿ ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ, ಅಶುತೋಷ್ ರಾಣಾ ಸೇರಿದಂತೆ ಹಲವು ಹಿರಿಯ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.

Story first published: Tuesday, February 18, 2025, 14:29 [IST]
Other articles published on Feb 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+