Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ಬಾರಿಯ ವಿಶ್ವಕಪ್ ಟೂರ್ನಿ ಭಾರತದ ಈ ಯುವ ಕ್ರಿಕೆಟಿಗನಿಗೆ ಸೇರಿದ್ದು: ಆಕಾಶ್ ಚೋಪ್ರ

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಯಾರಿಂದ ಅತ್ಯುತ್ತಮ ಪ್ರದರ್ಶನ ಬರಬಹುದು ಎನ್ನುವ ಬಗ್ಗೆ ಹಲವು ಕ್ರಿಕೆಟ್ ವಿಶ್ಲೇಷಕರು ತಮ್ಮದೇ ಆದ ಉತ್ತರಗಳನ್ನು ನೀಡಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಈ ಬಾರಿಯ ಮೆಗಾ ಟೂರ್ನಿಯಲ್ಲಿ ಭಾರತದ ಪರವಾಗಿ ಯಾರಿಂದ ಅದ್ಭುತ ಪ್ರದರ್ಶನ ಬರಬಹುದು ಎನ್ನುವ ಕಾತರವೂ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದು ವಿಶ್ವಕಪ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡುವ ಆಟಗಾರ ಯಾರು ಎನ್ನುವ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಬಗ್ಗೆ ಆಕಾಶ್ ಚೋಪ್ರ ಭಾರೀ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಮದರ್ಭದಲ್ಲಿ ಅವರು ಈ ಬಾರಿಯ ವಿಶ್ವಕಪ್ ಟೂರ್ನಿ ಸಂಪೂರ್ಣವಾಗಿ ಶುಬ್ಮನ್ ಗಿಲ್ ಅವರ ಪರವಾಗಿಯೇ ಇರುವ ಸಾಧ್ಯತೆಯಿದೆ ಎಂದಿದ್ದಾರೆ. ಇನ್ನು ತಮ್ಮ ಈ ಅಭಿಪ್ರಾಕ್ಕೆ ಮಾಜಿ ಕ್ರಿಕೆಟಿಗ ಗಟ್ಟಿಯಾದ ಕಾರಣವನ್ನು ಕೂಡ ವಿವರಿಸಿದ್ದಾರೆ.

Aakash Chopra Special praise on Shubman Gill said This World Cup could belong to young opener

ಶುಬ್ಮನ್ ಗಿಲ್ ಈ ವರ್ಷ ಅತ್ಯುದ್ಣುತ ಫಾರ್ಮ್‌ನಲ್ಲಿದ್ದು ಎಲ್ಲಾ ಮಾದರಿಯಲ್ಲಿಯೂ ರನ್ ಮಳೆ ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವಕಪ್ ಟೂರ್ನಿಗೂ ಮುನ್ನವೂ ಗಿಲ್ ಏಷ್ಯಾಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭರ್ಜತಿ ಫಾರ್ಮ್ ಪ್ರದರ್ಶಿಸಿದ್ದರು. ಇದೀಗ ಏಕದಿನ ಶ್ರೇಯಾಂಕ ಪಟ್ಟೊಯಲ್ಲಿ ಮೊದಲ ಸ್ಥಾನಕ್ಕೇರುವ ಸನಿಹಕ್ಕೆ ತಲುಪಿದ್ದಾರೆ ಭಾರತದ ಯುವ ಬ್ಯಾಟರ್ ಶುಬ್ಮನ್ ಗಿಲ್.

ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಶುಬ್ಮನ್ ಗಿಲ್ ಈವರೆಗೆ 35 ಪಂದ್ಯಗಳನ್ನು ಆಡಿದ್ದು ಇದರಲ್ಲಿ 66.10ಯಷ್ಟು ಅದ್ಭುತವಾದ ಸರಾಸರಿಯಲ್ಲಿ 1917 ರನ್‌ಗಳನ್ನು ಗಳಿಸಿದ್ದಾರೆ. ಆರು ಶತಕಗಳನ್ನು ಬಾರಿಸಿರುವ ಗಿಲ್ ಒಂದು ದ್ವಿಶತಕವನ್ನು ಕೂಡ ಹೊಂದಿದ್ದಾರೆ. ಇನ್ನು ಈ ವರ್ಷದಲ್ಲಿಯೇ ಗಿಲ್ 20 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು 1230 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಐದು ಶತಕ ಹಾಗೂ ಐದು ಶತಕಗಳಿದೆ. 72ಕ್ಕೂ ಅಧಿಕ ಸರಾಸರಿಯಲ್ಲಿ ಶುಬ್ಮನ್ ಗಿಲ್ ಈ ವರ್ಷ ಏಕದಿನ ಮಾದರಿಯಲ್ಲಿ ರನ್ ಬಾರಿಸಿದ್ದಾರೆ.

ವಿಶ್ವಕಪ್ ಟೂರ್ನಿಗೆ ಹೆಜ್ಜೆಯಿಡುತ್ತಿರುವ ಈ ಸಂದರ್ಭದಲ್ಲಿ ಶುಬ್ಮನ್ ಗಿಲ್ ಅದ್ಭುತವಾದ ಫಾರ್ಮ್‌ ಮುಂದುವರಿಸಿದ್ದಾರೆ. ಇದೇ ಕಾರಣದಿಂದಾಗಿ ಆಕಾಶ್ ಚೋಪ್ರ ಶುಬ್ಮನ್ ಗಿಲ್ ವಿಚಾರಚಾಗಿ ಭಾರೀಊ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ದೊಡ್ಡ ಮೊತ್ತಗಳನ್ನು ಭಾರಿಸುವ ಸಾಮರ್ಥ್ಯ, ಒತ್ತಡವನ್ನು ನಿಭಾಯಿಸುವ ರೀತಿಯಿಂದಾಗಿ ಗಿಲ್ ಟೂರ್ನಿಯಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ ಎಂದಿದ್ದಾರೆ ಆಕಾಶ್ ಚೋಪ್ರ.

"ನಹುಶಃ ಈ ಬಾರಿಯ ವಿಶ್ವಕಪ್ ಟೂರ್ನಿ ಬಹುಶಃ ಶುಬ್ಮನ್ ಗಿಲ್ ಅವರಿಗೆ ಸೇರಿದ್ದು. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡಾಗ ಟೂರ್ನಮೆಂಡ್ ಅಗ್ರ ಮೂರು ಬ್ಯಾಟರ್‌ಗಳಿಗೆ ಸೇರಿದೆ. ಇಲ್ಲಿ ಉತ್ತಮವಾಗಿರುವವರು ಸಾಕಷ್ಟು ದಾಖಲೆಗಳನ್ನು ಮಾಡಲಿದ್ದಾರೆ. ಶುಬ್ಮನ್ ಗಿಲ್ ಸಾಕಷ್ಟು ರನ್ ಗಳಿಸಲಿದ್ದಾರೆ. ಅವರು ಕನಿಷ್ಠ ಶತಕಗಳನ್ನು ಅವರು ಈ ವಿಶ್ವಕಪ್ ಟೂರ್ನಿಯಲ್ಲಿ ಭಾರಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಮೂರು ಶತಕ ಬಾರಿಸಿದರೂ ನನಗೆ ಅಚ್ಚರಿಯಾಗುವುದಿಲ್ಲ. ಗಿಲ್ ಒರ್ವ ಗುಣಮಟ್ಟದ ಆಟಗಾರನಾಗಿದ್ದು ಈ ವಿಶ್ವಕಪ್ ಸಂಪೂರ್ಣವಾಗಿ ಆತನದ್ದು ಆಗಿರುವ ಸಾಧ್ಯತೆಯಿದೆ" ಎಂದಿದ್ದಾರೆ ಆಕಾಶ್ ಚೋಪ್ರ.

"ಒಂದು ಹಂತದಲ್ಲಿ ಶುಬ್ಮನ್ ಗಿಲ್ ಎಡಗೈ ಸ್ಪಿನ್ನರ್‌ಗಳಿಗೆ ಸುಲಭ ಸುತ್ತಾಗುತ್ತಾರೆ ಎನಿಸಿತ್ತು. ಆದರೆ ಕಳೆ ಏಷ್ಯಾಕಪ್‌ನಲ್ಲಿ ತಮ್ಮ ಕೊನೆಯ ಶತಕವನ್ನು ಬಾರಿಸಿದಾಗ ಅದನ್ನು ಕೂಡ ಸಮರ್ಥವಾಗಿ ನಿಭಾಯಿಸಬಲ್ಲೆ ಎನ್ನುವ ಸೂಚನೆ ನೀಡಿದ್ದಾರೆ. ನನ್ನ ಪ್ರಕಾರ ಅದು ಅವರ ಅತ್ಯುತ್ತಮ ಶತಕವಾಗಿದೆ" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ.

Story first published: Monday, October 2, 2023, 15:07 [IST]
Other articles published on Oct 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+