ರಾಹುಲ್ ಫಾರ್ಮ್‌ಗೆ ಮರಳಲು ಇದುವೇ ದಾರಿ: ಸಾಕ್ಷ್ಯ ಸಹಿತ ವಿವರಿಸಿದ ಆಕಾಶ್ ಚೋಪ್ರ

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗ 1-2 ಅಂತರದಿಂದ ಹಿನ್ನಡೆಯಲ್ಲಿದೆ. ನಾಲ್ಕನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರಷ್ಟೇ ಸರಣಿ ಜೀವಂತವಾಗುಳಿಯಲು ಸಾಧ್ಯ. ಈ ಮಧ್ಯೆ ಭಾರತಕ್ಕೆ ಆರಂಭಿಕ ಆಟಗಾರ ಕೆಎಲ್ ರಾಹುಲ್ ಫಾರ್ಮ್ ಕೊರತೆ ಸಾಕಷ್ಟು ಕಾಡುತ್ತಿದೆ. ಇದಕ್ಕೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಸಲಹೆಯೊಂದನ್ನು ನೀಡಿದ್ದು ಇದು ಈ ಹಿಂದೆ ಕೆಲಸ ಮಾಡಿದೆ ಎಂಬುದನ್ನು ಸಾಕ್ಷ್ಯ ಸಹಿತ ವಿವರಿಸಿದ್ದಾರೆ.
ಹಿಂದೆ 2014ರಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಕಳಪೆ ಫಾರ್ಮ್‌ನಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದರು. ಈ ಸರಣಿಯ ಮುಕ್ತಾಯದ ಬಳಿಕ ಮುಂದಿನ ಸರಣಿಯಲ್ಲಿ ನಾಯಕ ಎಂಎಸ್ ಧೋನಿ ವಿರಾಟ್ ಬೆಂಬಲಕ್ಕೆ ನಿಂತು ಬದಲಾವಣೆಯೊಂದನ್ನು ಮಾಡಿದ್ದರು. ಇದಲ್ಲಿ ವಿರಾಟ್ ಕೊಹ್ಲಿ ಯಶಸ್ಸು ಸಾಧಿಸಿ ಬಳಿಕ ಫಾರ್ಮ್‌ಗೆ ಮರಳಲು ಸಾದ್ಯವಾಯಿತು. ಇದೇ ತಂತ್ರವನ್ನು ರಾಹುಲ್‌ಗೆ ಅನ್ವಯಿಸಲಿ ಎಂದು ಆಕಾಶ್ ಚೋಪ್ರ ವಿವರಿಸಿದ್ದಾರೆ.

ಕ್ರಮಾಂಕದಲ್ಲಿ ಬದಲಾವಣೆ ಮಾಡಲಿ
ಕೆಎಲ್ ರಾಹುಲ್ ಫಾರ್ಮ್ ಕಳೆದುಕೊಂಡಿರುವ ಕಾರಣ ಮತ್ತೆ ಫಾರ್ಮ್‌ಗೆ ಮರಳಲು ಕೆಲವೊಮ್ಮೆ ಸಣ್ಣ ಬದಲಾವಣೆಗಳು ಮಾಡಿಕೊಂಡರೆ ಸಾಕಾಗುತ್ತದೆ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ. "ಇಶಾನ್ ಕಿಶಣ್ ರಾಹೂ ರೋಹಿತ್ ಶರ್ಮಾ ಆರಂಬಿಕರಾಗಿ ಕಣಕ್ಕಿಳಿಯಲಿ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಹಾಗೂ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿ. ಈ ಸಣ್ಣ ಬದಲಾವನೆಯಿಂದ ರಾಹುಲ್ ಫಾರ್ಮ್‌ಗೆ ಮರಳಬಹುದು" ಎಂದು ಚೋಪ್ರ ಹೇಳಿದ್ದಾರೆ.

ಕೊಹ್ಲಿಯೂ ಎದುರಿಸಿದ್ದರು ಇಂತಾದ್ದೇ ಸ್ಥಿತಿ
ಇನ್ನು ಆಕಾಶ್ ಚೋಪ್ರ ಹಾಲಿ ನಾಯಕ ವಿರಾಟ್ ಕೊಹ್ಲಿ ಈ ಹಿಂದೆ 2014ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದು ಸತತವಾಗಿ ವೈಫಲ್ಯವನ್ನು ಅನುಭವಿಸಿದ್ದರು. ಹಿಂದೆಂದೂ ಕಾಣದ ಕಳಪೆ ಪ್ರದರ್ಶನದ ನಂತರ ಮುಂದೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿಗೆ ನಾಯಕ ಧೋನಿ ಬೆಂಬಲವಾಗಿ ನಿಂತಿದ್ದರು. ವಿಂಡೀಸ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ 2 ರನ್‌ಗಳಿಸಿ ಕೊಹ್ಲಿ ವಿಕೆಟ್ ಒಪ್ಪಿಸಿದ್ದರು.

ಬದಲಾವಣೆ ಮಾಡಿದ ನಾಯಕ ಧೋನಿ
ಆದರೆ ಎರಡನೇ ಪಂದ್ಯದಲ್ಲಿ ನಾಯಕ ಎಂಎಸ್ ಧೋನಿ ಬದಲಾವಣೆಯೊಂದನ್ನು ಮಾಡಿದರು. ಅಂಬಾಟಿ ರಾಯುಡು ಅವರನ್ನು 3ನೇ ಕ್ರಮಾಂದಲ್ಲಿ ಇಳಿಸಿ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿಯನ್ನು ನಾಲ್ಕನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಹೊಸ ಕ್ರಮಂಕದಲ್ಲಿ ಕೊಹ್ಲಿ 62 ರನ್ ಬಾರಿಸಿ ಫಾರ್ಮ್‌ಗೆ ಮರಳಿದ್ದರು. ಅದಾದ ನಂತರದ ಪಂದ್ಯದಲ್ಲಿ ಕೊಹ್ಲಿಯನ್ನು ಅವರನ್ನು ಎಂದಿನಂತೆ 3ನೇ ಕ್ರಮಾಂಕದಲ್ಲೇ ಮತ್ತೆ ಕಣಕ್ಕಿಳಿಸಿದ್ದರು. ಧರ್ಮಶಾಲಾದಲ್ಲಿ ನಡೆದ ಆ ಪಂದ್ಯದಲ್ಲಿ ಕೊಹ್ಲಿ 114 ರನ್‌ಗಳನ್ನು ಗಳಿಸಿದ್ದರು.

ಕೊಹ್ಲಿಗೆ ಮಾಡಿದ ಕ್ರಮವನ್ನೇ ಅನುಸರಿಸಲಿ
ಕೆಎಲ್ ರಾಹುಲ್ ಅವರನ್ನು ತಂಡದಿಂದ ಹೊರಗಿಡುವುದನ್ನು ನಾನು ಬಯಸುವುದಿಲ್ಲ ಎಂದು ಹೇಳಿದ ಆಕಾಶ್ ಚೋಪ್ರ ಮಾಜಿ ನಾಯಕ ಎಂಎಸ್ ಧೋನಿ ಅವರು ವಿರಾಟ್ ಕೊಹ್ಲಿಗೆ ಅನುಸರಿಸದ ಕ್ರಮವನ್ನೇ ಕೆಎಲ್ ರಾಹುಲ್‌ಗೂ ಕೊಹ್ಲಿ ಅನ್ವಯಿಸಲಿ ಎಂದಿದ್ದಾರೆ. ಆರಂಭಿಕರಾಗಿ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್ ನಡೆಸಿದರೆ ನಂತರ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಹಾಗೂ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿ. ಫಾರ್ಮ್‌ಗೆ ಮರಳಿದ ಬಳಿಕ ಆರಂಭಿಕ ಸ್ಥಾನಕ್ಕೆ ಮರಳಬಹುದು ಎಂದು ಆಕಾಶ್ ಚೋಪ್ರಾ ಸಲಹೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications