ಕೆಲವು ಪಂದ್ಯ ಆಡದಿದ್ದರೆ ಜಗತ್ತು ಮುಳುಗಲ್ಲ: ಬುಮ್ರಾ ಐಪಿಎಲ್‌ನಲ್ಲಿ ಆಡುವ ಕುರಿತು ಮಾಜಿ ಕ್ರಿಕೆಟಿಗನ ಹೇಳಿಕೆ!

ಭಾರತದ ಪ್ರಮುಖ ವೇಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳ ಸರಣಿಗೆ ಅಲಭ್ಯರಾಗಿದ್ದು, ಐಪಿಎಲ್‌ನಲ್ಲಿ ಆಡಲು ಸಜ್ಜಾಗಿದ್ದಾರೆ. ಬುಮ್ರಾ ದೇಶಕ್ಕಾಗಿ ಆಡುವುದಕ್ಕಿಂತ ಹೆಚ್ಚಾಗಿ ಐಪಿಎಲ್‌ನಲ್ಲಿ ಆಡಲು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡಿದ್ದಾರೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜಸ್ಪ್ರೀತ್ ಬುಮ್ರಾ ಐಪಿಎಲ್‌ನಲ್ಲಿ ಆಡುವುದಕ್ಕಿಂತ ದೇಶಕ್ಕಾಗಿ ಆಡುವ ಬಗ್ಗೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದ್ದಾರೆ. ಈ ಬಾರಿ ಐಪಿಎಲ್ ಪಂದ್ಯಾವಳಿಯಲ್ಲ ಬುಮ್ರಾರಿಗೆ ಕೆಲವು ಪಂದ್ಯಗಳಿಂದ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂಚನೆ ನೀಡಬೇಕು ಎಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಬುಮ್ರಾ ಭಾರತಕ್ಕೆ ಮುಖ್ಯಾವಾಗಿರುವುದರಿಂದ ಅವರ ವಿಚಾರದಲ್ಲಿ ಬಿಸಿಸಿಐ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಆಕಾಶ್ ಚೋಪ್ರಾ ಕೇಳಿಕೊಂಡಿದ್ದಾರೆ. "ಬುಮ್ರಾ ಮೊದಲು ಭಾರತೀಯ ಆಟಗಾರ. ಮೊದಲು ದೇಶಕ್ಕಾಗಿ ಆಡಬೇಕು ನಂತರ ಫ್ರಾಂಚೈಸಿಗಾಗಿ ಆಡಬೇಕು. ಬುಮ್ರಾಗೆ ಯಾವುದೇ ಸಮಸ್ಯೆಯಾದರೆ ಬಿಸಿಸಿಐ ಕೂಡಲೇ ಮಧ್ಯಪ್ರವೇಶಿಸಬೇಕು. ಜೋಫ್ರಾ ಆರ್ಚರ್ ಜೊತೆ 7 ಪಂದ್ಯಗಳನ್ನು ಆಡದಿದ್ದರೆ, ಈ ಜಗತ್ತೇನು ಕೊನೆಗೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಕೂಡ ಗಮನಿಸುತ್ತದೆ ಎಂದುಕೊಂಡಿದ್ದೇನೆ
ಫಿಟ್ ಆಗಿರುವಾದ ಆಟವನ್ನು ಮುಂದುವರೆಸು ಬಯಸುತ್ತೀರಿ ಅದು ನಿಮ್ಮನ್ನು ಉತ್ತಮಗೊಳಿಸುತ್ತದೆ. ಬಿಸಿಸಿಐ ಸೂಚನೆ ನೀಡಿದರೆ, ಮುಂಬೈ ಇಂಡಿಯನ್ಸ್ ಅದನ್ನು ಗಮನಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಬುಮ್ರಾ ದೇಶದ ಆಸ್ತಿ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಮುನ್ನ ರಣಜಿಯಲ್ಲಿ ಆಡಿದ್ದರ ಬಗ್ಗೆ ಆಕಾಶ್ ಚೋಪ್ರಾ ಪ್ರಸ್ತಾಪ ಮಾಡಿದ್ದಾರೆ. ಸೌರಾಷ್ಟ್ರ ಪರವಾಗಿ ಆಡಿದ ಒಂದು ಪ್ರಥಮ ದರ್ಜೆ ಪಂದ್ಯ ಅವರ ಲಯವನ್ನು ಕಂಡುಕೊಳ್ಳಲು ಯಶಸ್ವಿಯಾಯಿತು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಮುಖ್ಯ
ಜಸ್ಪ್ರೀತ್ ಬುಮ್ರಾ ಕೂಡ ಗಾಯದಿಂದ ಚೇತರಿಸಿಕೊಂಡ ನಂತರ ಇರಾನಿ ಟ್ರೋಫಿ ಅಥವಾ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಆಕಾಶ್ ಚೋಪ್ರಾ, "ಬುಮ್ರಾ ಫಿಟ್ ಆಗಿದ್ದರೆ ಇರಾನಿ ಟ್ರೋಫಿ ಮತ್ತು ಕೌಂಟಿ ಕ್ರಿಕೆಟ್ ಆಡುತ್ತಾರೆ. ಐಪಿಎಲ್ ಆರಂಭಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇನ್ನೂ 3 ತಿಂಗಳಿದೆ, ಈಗಲೇ ಯಾವುದನ್ನೂ ಹೇಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಇನ್ನೂ ಒಂದು ಪಂದ್ಯವನ್ನು ಗೆದ್ದರೂ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲಿದೆ. ಜೂನ್ 7-11 ರವರೆಗೆ ಲಂಡನ್‌ನ ಓವಲ್‌ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಬುಮ್ರಾ ಆಡುವುದು ಭಾರತಕ್ಕೆ ಮುಖ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications