ಆತನಿಗೆ ಇನ್ನೂ ಎಷ್ಟು ಅಂತ ಅವಕಾಶ ನೀಡುತ್ತೀರಾ? ಮ್ಯಾನೇಜ್‌ಮೆಂಟ್ ವಿರುದ್ಧ ಮಾಜಿ ಕ್ರಿಕೆಟಿಗನ ಪ್ರಶ್ನೆ

ಪದೇ ಪದೇ ರನ್ ಗಳಿಸಲು ವಿಫಲವಾಗುತ್ತಿದ್ದರೂ ರಿಷಬ್ ಪಂತ್‌ಗೆ ಮತ್ತೆ ಮತ್ತೆ ತಂಡದಲ್ಲಿ ಅವಕಾಶ ಕೊಡುತ್ತಿರುವ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಿಷಬ್ ಪಂತ್ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆದರು. ರನ್ ಗಳಿಸಲು ವಿಫಲರಾದರೂ ಕೂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಲು ಅವಕಾಶ ನೀಡಲಾಯಿತು, ಅಲ್ಲಿಯೂ ಕೂಡ ಪಂತ್ ರನ್ ಗಳಿಸಲಿಲ್ಲ.
ಆದರೂ, ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಪಂತ್ ಆಯ್ಕೆಯಾದರು. ಮಾತ್ರವಲ್ಲದೆ, ಪಂತ್ ಅವರನ್ನು ಉಪನಾಯಕನನ್ನಾಗಿ ಮಾಡಲಾಯಿತು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಪಂತ್ ಎರಡೂ ಪಂದ್ಯಗಳಲ್ಲಿ ಮತ್ತೆ ವಿಫಲರಾದರು.
ಮೂರನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕೆಂದು ಸಾಕಷ್ಟು ಒತ್ತಾಯ ಕೇಳಿಬಂದರೂ ತಂಡದ ಮ್ಯಾನೇಜ್‌ಮೆಂಟ್ ಮಾತ್ರ ಪಂತ್‌ಗೆ ಮಣೆ ಹಾಕಿತು, ಇದರ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಆತನಿಗೆ ಅವಕಾಶ ನೀಡುತ್ತಿರುವ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್ ಅನ್ನು ಪ್ರಶ್ನೆ ಮಾಡಿದ್ದಾರೆ.

ಪಂತ್ ಔಟ್ ಆದ ರೀತಿಗೆ ಅಸಮಾಧಾನ
ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ರಿಷಬ್ ಪಂತ್ 11 ರನ್ ಗಳಿಸಿದ ನಂತರ ಬೇಡದ ಹೊಡೆತ ಆಡಲು ಯತ್ನಿಸಿ ಔಟಾದರು. ಎರಡನೇ ಟಿ20 ಪಂದ್ಯದಲ್ಲಿ ಕೂಡ 6 ರನ್ ಗಳಿಸಿದ್ದಾಗ ಇದೇ ರೀತಿ ಬೇಜವಾಬ್ದಾರಿ ಹೊಡೆತಕ್ಕೆ ಔಟ್ ಆಗಿದ್ದರು.
ರಿಷಬ್ ಪಂತ್ ಔಟ್ ಆದ ರೀತಿ ಬಗ್ಗೆ ಆಕಾಶ್ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆತ ಸಾಮಾನ್ಯ ಕ್ರಿಕೆಟಿಗರಂತೆ ವಿಕೆಟ್ ಒಪ್ಪಿಸಿದ. ಆತನನ್ನುಆರಂಭಿಕನಾಗಿ ಕಣಕ್ಕಿಳಿಸುವ ಅಗತ್ಯವಿದೆಯಾ? ಆತ ನಿಜಕ್ಕೂ ಟಿ20 ಕ್ರಿಕೆಟ್‌ನಲ್ಲಿ ಸ್ಥಾನ ಪಡೆಯಲು ಅರ್ಹ ಆಟಗಾರನ? ಆತನ ಪ್ರತಿಭೆ ವ್ಯರ್ಥವಾಗುತ್ತದೆ ಎಂದು ಆತನಿಗೆ ಆರಂಭಿಕನಾಗಿ ಕಣಕ್ಕಿಳಿಯಲು ಅವಕಾಶ ಕೊಟ್ಟಿದ್ದೀರಾ ಎಂದು ತಂಡದ ಮ್ಯಾನೇಜ್‌ಮೆಂಟ್ ಅನ್ನು ಪ್ರಶ್ನೆ ಮಾಡಿದ್ದಾರೆ.
IND Vs NZ: ಆಕ್ಲೆಂಡ್ ತಲುಪಿದ ಟೀಂ ಇಂಡಿಯಾ, ಏಕದಿನ ಸರಣಿಯಲ್ಲೂ ಗೆಲ್ಲುವ ವಿಶ್ವಾಸ

ಆತನಿಗೆ ಉಪನಾಯಕನ ಪಟ್ಟ ಬೇರೆ
"ತಂಡಕ್ಕೆ ಆತನನ್ನು ಆಯ್ಕೆ ಮಾಡುವುದಲ್ಲದೆ, ಉಪನಾಯಕನನ್ನಾಗಿ ಬೇರೆ ಮಾಡಿದ್ದಾರೆ. ಅಂದರೆ, ಆತ ಯಾವಾಗಲೂ ತಂಡದಲ್ಲಿ ಸ್ಥಾನ ಪಡೆಯಬೇಕು ಎನ್ನುವ ಉದ್ದೇಶವಾ? ಅವನು ತಂಡದಲ್ಲಿದ್ದರೆ, ಯಾವ ಕ್ರಮಾಂಕದಲ್ಲಿ ಆತ ಬ್ಯಾಟಿಂಗ್ ಮಾಡಬೇಕು? ರಿಷಬ್ ಪಂತ್‌ನಲ್ಲಿರುವ ಪ್ರತಿಭೆಯನ್ನು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮತ್ತು ಆಯ್ಕೆದಾರರು ಅದ್ಯಾವಾಗ ಹೊರಗೆ ತೆಗೆಯುತ್ತೀರಿ" ಎಂದು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.
ಸಂಜು ಸ್ಯಾಮ್ಸನ್, ಶುಭಮನ್ ಗಿಲ್‌ರಂತಹ ಪ್ರತಿಭಾವಂತ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುವಾಗ ಪಂತ್ ಮಾತ್ರ ಯಾವುದೇ ಪ್ರದರ್ಶನ ನೀಡದಿದ್ದರೂ ತಂಡದಲ್ಲಿ ಸತತವಾಗಿ ಸ್ಥಾನ ಪಡೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಟಿ20 ಮಾದರಿಯಲ್ಲಿ ಪಂತ್ ಅಂಕಿ-ಅಂಶ
2017ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಿಷಬ್ ಪಂತ್ ಅಂದಿನಿಂದಲೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 66 ಟಿ20 ಪಂದ್ಯಗಳನ್ನು ಆಡಿರುವ ಪಂತ್ 22.43 ಸರಾಸರಿಯಲ್ಲಿ ಮತ್ತು 126.37 ಸ್ಟ್ರೈಕ್‌ರೇಟ್‌ನಲ್ಲಿ 987 ರನ್ ಗಳಿಸಿದ್ದಾರೆ. ಆತ ಭಾರತ ತಂಡಕ್ಕಾಗಿ ಆರಂಭಿಕನಾಗಿ 5 ಪಂದ್ಯಗಳನ್ನಾಡಿದ್ದು, 14.20 ಸರಾಸರಿಯಲ್ಲಿ ಕೇವಲ 71 ರನ್ ಗಳಿಸಿದ್ದಾರೆ.
ಆರಂಭಿಕನಾಗಿ ಪದೇ ಪದೇ ವಿಫಲರಾಗಿದ್ದರೂ, ರಿಷಬ್ ಪಂತ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಇದು ಆವರ ಪ್ರದರ್ಶನದ ಮೇಲೂ ಭಾರಿ ಪರಿಣಾಮ ಬೀರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications