ಸುರೇಶ್ ರೈನಾ ನಿವೃತ್ತಿ ವಾಪಾಸ್ ಪಡೆಯಲು ಮನವಿ ಮಾಡಿದ ಮಾಜಿ ಕ್ರಿಕೆಟಿಗ

ಟೀಮ್ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಕಳೆದ ವಾರವಷ್ಟೇ ಮಾಜಿ ನಾಯಕ ಧೋನಿ ನಿವೃತ್ತಿ ಹೇಳಿದ ಕೆಲವೇ ಕ್ಷಣಗಳಲ್ಲಿ ನಿವೃತ್ತಿ ಘೋಷಿಸಿ ಅಚ್ಚರಿಯನ್ನು ಮೂಡಿಸಿದ್ದರು. ಕ್ರಿಕೆಟ್‌ನಲ್ಲಿ ಇನ್ನೂ ಸಾಕಷ್ಟು ಕಾಲ ಆಡುವ ಅವಕಾಶವನ್ನು ಹೊಂದಿರುವ 33 ವರ್ಷದ ಸುರೇಶ್ ರೈನಾ ನಿರ್ಧಾರ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿತ್ತು.
ಇದೀಗ ಸುರೇಶ್ ರೈನಾ ನಿವೃತ್ತಿ ವಾಪಾಸ್ ಪಡೆಯಲಿ ಎಂಬ ಮಾತುಗಳು ಕೇಳಿ ಬರುತ್ತಿದೆ. ಟೀಮ್ ಇಂಡಿಯಾದ ಮಾಜಿ ಆಟಗಾರ ಕಾಮೆಂಟೇಟರ್ ಆಕಾಶ್ ಚೋಪ್ರಾ ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ಲ್ಲಿ ಮಾತನಾಡಿದ್ದು ಕಮ್‌ಬ್ಯಾಕ್ ಮಾಡುವಂತೆ ಮನವಿ ಮಾಡಿದ್ದಾರೆ. ಪಾಕಿಸ್ತಾನದ ಆಟಗಾರ ಶಾಹಿದ್ ಅಫ್ರಿದಿ ಅವರಂತೆ ನಿವೃತ್ತಿ ವಾಪಾಸ್ ಪಡೆದು ತಂಡಕ್ಕೆ ಮರಳುವಂತೆ ಕೇಳಿಕೊಂಡಿದ್ದಾರೆ.
ಮುಂದಿನ ಟಿ20 ವಿಶ್ವಕಪ್‌ಗೆ ಮುನ್ನ ಸುರೇಶ್ ರೈನಾಗೆ ಸಾಕಷ್ಟು ಸಮಯಾವಕಾಶವಿದೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ ತಮ್ಮ ನಿರ್ಧಾರವನ್ನು ವಾಪಾಸ್ ಪಡೆದುಕೊಂಡು ತಂಡಕ್ಕೆ ಮರಳಿದಂತೆ ಕಮ್‌ಬ್ಯಾಕ್ ಮಾಡಿ ಎಂದು ಆಕಾಶ್ ಚೋಪ್ರ ಸುರೇಶ್ ರೈನಾಗೆ ಮನವಿಯನ್ನು ಮಾಡಿದ್ದಾರೆ.
2020 ಹಾಗೂ 2021ರ ಎರಡು ಅದ್ಭುತ ಐಪಿಎಲ್ ಆವೃತ್ತಿಗಳ ಮೂಲಕ ಸುರೇಶ್ ರೈನಾ ಅವರನ್ನು ವಿಶ್ವಕಪ್‌ನ ಭಾರತೀಯ ತಂಡದಲ್ಲಿ ನೋಡಲು ಸಾದ್ಯವಿದೆ. ಅದು ಸಾಧ್ಯವಿದೆ, ನಾನು ಅದನ್ನು ನಂಬುತ್ತೇನೆ , ಖಂಡಿತಾ ಇದು ಸಾಧ್ಯವಿದೆ ಎಂದು ಆಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್‌ನ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಖಂಡಿತವಾಗಿಯೂ ಸುರೇಶ್ ರೈನಾ ಇನ್ನೂ ಸಾಕಷ್ಟು ಕ್ರಿಕೆಟ್ ಆಡಬಹುದಾಗಿದೆ. ಅವರು ನಿವೃತ್ತಿ ಘೋಷಿಸುವ ಅಗತ್ಯವಿರಲಿಲ್ಲ. ಅವರಿಗಿನ್ನೂ 33 ವರ್ಷ. ಗಾಯದ ಸಮಸ್ಯೆಗಳು ಖಂಡಿಯಾ ಅವರಿಗೆ ಇತ್ತು. ಆದರೆ ಅದೆಲ್ಲಾ ಪ್ರತಿ ಆಟಗಾರನಿಗೂ ಇದ್ದೇ ಇರುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಈಗ ಅವರು ಫಿಟ್ ಆಗಿದ್ದಾರೆ, ಬಲಿಷ್ಠರಾಗಿದ್ದಾರೆ. ನನ್ನ ಪ್ರಕಾರ ಅವರು ಮೈದಾನಕ್ಕೆ ವಾಪಾಸಾಗಲು ಕಾತುರರಾಗಿದ್ದರು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications