For Quick Alerts
ALLOW NOTIFICATIONS  
For Daily Alerts
 

ಆಸಿಸ್ ನಾಯಕ ಫಿಂಚ್‌ಗೆ ಭಾರತದ ಬೌಲರ್‌ಗಳಲ್ಲಿ ಈತನೇ ಫೇವರೀಟ್

Aaron Finch Picks Harbhajan Singh As His Favourite Indian Bowler

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಕ್ರಿಕೆಟಿಗರೂ ತಮ್ಮ ತಮ್ಮ ಮನೆಯೊಳಗೇ ಬಂಧಿಗಳಾಗಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳ ಜೊತೆಗೆ ಸಾಮಾಜಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಚರ್ಚೆಯನ್ನು ನಡೆಸಿಕೊಂಡು ಅಭಿಮಾನಿಗಳ ಜೊತೆಗೆ ಸಂವಹನದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ತಂಡದ ನಾಯಕ ಆರೋನ್ ಫಿಂಚ್ ಅಭಿಮಾನಿಗಳ ಜೊತೆಗೆ ಸಂವಹನವನ್ನು ನಡೆಸಿದ್ದಾರೆ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಿದ್ದಾರೆ. ಈ ವೇಳೆ ಫಿಂಚ್‌ಗೆ ಭಾರತೀಯ ಬೌಲರ್‌ಗಳ ಪೈಕಿ ಯಾರು ತಮ್ಮ ಫೇವರೀಟ್ ಬೌಲರ್ ಎಂಬ ಪ್ರಶ್ನೆ ಎದುರಾಗಿತ್ತು.

ಈ ಪ್ರಶ್ನೆಗೆ ಅರೋನ್ ಫಿಂಚ್ ಉತ್ತರವನ್ನು ನೀಡಿದ್ದಾರೆ. ಹಾಗಾದರೆ ಫಿಂಚ್ ಫೇವರೀಟ್ ಬೌಲರ್ ಯಾರು ಮುಂದೆ ಓದಿ

ಟೀಮ್ ಇಂಡಿಯಾದ ಸ್ಪಿನ್ನರ್

ಟೀಮ್ ಇಂಡಿಯಾದ ಸ್ಪಿನ್ನರ್

ಆರೋನ್ ಫಿಂಚ್ ಟ್ವಿಟ್ಟರ್‌ನಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ನೀಡಿದ ಉತ್ತರ ಓರ್ವ ಸ್ಪಿನ್ನರ್‌ನ ಹೆಸರು. ಟೀಮ್ ಇಂಡಿಯಾದಲ್ಲಿ ದಶಕಕ್ಕೂ ಹೆಚ್ಚು ಕಾಲ ಅದ್ಭುತ ಪ್ರದರ್ಶನವನ್ನು ನೀಡಿ ಭಾರತದ ಅನೇಕ ಗೆಲುವಿಗೆ ಕಾರಣವಾಗಿದ್ದ ಬೌಲರ್‌ನ್ನು ಫಿಂಚ್ ಹೆಸರಿಸಿದ್ದಾರೆ.

ಯಾರು ಆ ಬೌಲರ್

ಯಾರು ಆ ಬೌಲರ್

ಆರೋನ್ ಫಿಂಚ್ ಹೆಸರಿಸಿದ ಆ ಬೌಲರ್ ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಟರ್ಬನೇಟರ್ ಹರ್ಭಜನ್ ಸಿಂಗ್. ಫಿಂಚ್‌ಗೆ ಟೀಮ್ ಇಂಡಿಯಾದ ಬೌಲರ್‌ಗಳ ಪೈಕಿ ಭಜ್ಜಿ ಅಚ್ಚುಮೆಚ್ಚು ಎಂದು ಭಾರತದ ಅಭಿಮಾನಿಯೋರ್ವ ಟ್ವಿಟ್ಟರ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

2016ರ ಬಳಿಕ ಭಜ್ಜಿ ಟೀಮ್ ಇಂಡಿಯಾದಿಂದ ದೂರ

2016ರ ಬಳಿಕ ಭಜ್ಜಿ ಟೀಮ್ ಇಂಡಿಯಾದಿಂದ ದೂರ

ಟೀಮ್ ಇಂಡಿಯಾದ ಪ್ರಮುಖ ಬೌಲರ್‌ ಆಗಿ ಮೆರೆದಾಡಿದ ಹರ್ಭಜನ್ ಸಿಂಗ್ 2016ರ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಪ್ರದರ್ಶನದಲ್ಲಿ ಇಳಿಮುಖವನ್ನು ಕಂಡ ಭಜ್ಜಿ ಯುವ ಬೌಲರ್‌ಗಳ ಪ್ರದರ್ಶನ ಮುಂದೆ ಮಂಕಾದರು. ಸದ್ಯ ಐಪಿಎಲ್‌ನಲ್ಲಿ ಸಕ್ರಿಯವಾಗಿರುವ ಹರ್ಭಜನ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಜ್ಜಿ ಸಾಧನೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಜ್ಜಿ ಸಾಧನೆ

ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿದ್ದ ಹರ್ಭಜನ್ ಸಿಂಗ್ 103 ಟೆಸ್ಟ್‌ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು 417 ವಿಕೆಟ್ ಪಡೆದುಕೊಂಡಿದ್ದಾರೆ. 236 ಏಕದಿನ ಪಂದ್ಯಗಳಲ್ಲಿ 269 ವಿಕೆಟ್ ಪಡೆದು ಮಿಂಚಿದ್ದಾರೆ ಹರ್ಭಜನ್ ಸಿಂಗ್. ಭಾರತದ ಪಿಚ್‌ನಲ್ಲಿ ಹರ್ಭಜನ್ ಸಿಂಗ್ ಅತ್ಯಂತ ಪರಿಣಾಮಕಾರಿಯಾಗಿದ್ದರು.

ಆಸ್ಟ್ರೇಲಿಯಾ ವಿರುದ್ಧ ಭಜ್ಜಿ ಅಬ್ಬರ

ಆಸ್ಟ್ರೇಲಿಯಾ ವಿರುದ್ಧ ಭಜ್ಜಿ ಅಬ್ಬರ

ವಿಶೇಷವೇನೆಂದರೆ ಟೀಮ್ ಇಂಡಿಯಾದ ಈ ಬೌಲರ್‌ ಆಸ್ಟ್ರೇಲಿಯಾ ತಂಡದ ವಿರುದ್ಧವೇ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಆಡಿದ 18 ಟೆಸ್ಟ್ ಪಂದ್ಯಗಳಲ್ಲಿ ಹರ್ಭಜನ್ ಸಿಂಗ್ 95 ವಿಕೆಟ್ ಪಡೆದು ಮಿಂಚಿದ್ದಾರೆ. ಇದರಲ್ಲಿ 2001ರ ಅವಿಸ್ಮರಣೀಯ ಈಡನ್ ಗಾರ್ಡನ್‌ ಟೆಸ್ಟ್ ಪಂದ್ಯದ ಹ್ಯಾಟ್ರಿಕ್ ವಿಕೆಟ್ ಕೂಡ ಸೇರಿದೆ.

Story first published: Friday, March 27, 2020, 17:19 [IST]
Other articles published on Mar 27, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+