Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AB de Villiers: ಎಬಿ ಡಿವಿಯರ್ಸ್‌ 41ನೇ ವಯಸ್ಸಿನಲ್ಲಿ, 41 ಎಸೆತಗಳಲ್ಲಿ ಸ್ಫೋಟಕ ಶತಕ

ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್‌ ಸದ್ಯ ವಲ್ಡ್ ಚಾಂಪಿಯನ್‌ ಆಪ್‌ ಲೆಜೆಂಡ್ಸ್‌ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇವರು ತಮ್ಮ 41ನೇ ವಯಸ್ಸಿನಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇಂಗ್ಲೆಂಡ್ ಚಾಂಪಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 10 ವಿಕೆಟ್‌ ಜಯ ಸಾಧಿಸಿತು. ದಕ್ಷಿಣ ಆಫ್ರಿಕಾ ಗೆಲುವು ದಾಖಲಿಸುವಲ್ಲಿ ಎಬಿಡಿ ಏಕಾಂಗಿ ಪ್ರದರ್ಶನ ತಂಡಕ್ಕೆ ನೆರವಾಯಿತು.

ಇಂಗ್ಲೆಂಡ್‌ ನೀಡಿದ್ದ 153 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಗುರಿಯನ್ನು ದಕ್ಷಿಣ ಆಫ್ರಿಕಾ 12.2 ಓವರ್‌ಗಳಲ್ಲಿ ಮುಟ್ಟಿ ಬೀಗಿತು. ಈ ಪಂದ್ಯದಲ್ಲಿ ಎಬಿಡಿ ವಿಲಿಯರ್ಸ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ತಮ್ಮ ಹಳೆಯ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ ನೆರೆದಿದ್ದ ಅಭಿಮಾನಿಗಳಿಗೆ ಮುದ ನೀಡಿದರು. ಎಬಿಡಿ ಜಸ್ಟ್‌ 41 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್‌ ಸಹಾಯದಿಂದ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ಗೆಲುವಿನಲ್ಲಿ ಮಿಂಚಿದರು.

AB de Villiers Blistering Century Leads South Africa Champions to Dominant Win

ಇಂಗ್ಲೆಂಡ್‌ ನೀಡಿದ್ದ ಟಾರ್ಗೆಟ್‌ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡದ ಆರಂಭಿಕರಾದ ಹಾಶೀಮ್ ಆಮ್ಲಾ (29) ಹಾಗೂ ಎಬಿಡಿ ಭರ್ಜರಿ ಆರಂಭವನ್ನು ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಇಂಗ್ಲೆಂಡ್‌ ಬೌಲರ್‌ಗಳು ವಿಫಲರಾದರು. ಈ ಜೋಡಿ 8.1 ಓವರ್‌ಗಳಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದರು. ಪರಿಣಾಮ ದಕ್ಷಿಣ ಆಫ್ರಿಕಾ 12.2 ಓವರ್‌ಗಳಲ್ಲಿ 153 ರನ್‌ ಸಿಡಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ಆಡಿದ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಇಂಗ್ಲೆಂಡ್‌ 152 ರನ್‌

ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಫೀಲ್ಡಿಂಗ್ ಮಾಡಿತು. ಇಂಗ್ಲೆಂಡ್ ಚಾಂಪಿಯನ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ152 ರನ್ ಗಳಿಸಿತು. ರವಿ ಬೋಪಾರ ಆರಂಭಿಕರಾಗಿ ಕಣಕ್ಕೆ ಇಳಿದು ಬಿಗ್ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರ. ಆರಂಭಿಕ ಫಿಲ್ ಮಸ್ಟರ್ಡ್ (39), ಸಮಿತ್ ಪಟೇಲ್ (24), ನಾಯಕ ಇಯಾನ್‌ ಮಾರ್ಗನ್‌ (20), ಟಿಮ್ ಆಂಬ್ರೋಸ್ (19) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಇಂಗ್ಲೆಂಡ್ ಪರ ವೇಯ್ನ್ ಪಾರ್ನೆಲ್ ಹಾಗೂ ಸ್ಪಿನ್ ಬೌಲರ್‌ ಇಮ್ರಾನ್ ತಾಹಿರ್ ತಲಾ ಎರಡು ವಿಕೆಟ್‌ ಪಡೆದರು.

Story first published: Friday, July 25, 2025, 10:58 [IST]
Other articles published on Jul 25, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+