ಸೌರವ್ ಗಂಗೂಲಿ ದಾಖಲೆ ಮುರಿದ ಎಬಿ ಡಿ ವಿಲಿಯರ್ಸ್

By Mahesh

ಡರ್ಬಾನ್, ಆಗಸ್ಟ್ 27: ದಕ್ಷಿಣ ಆಫ್ರಿಕಾದ ಪ್ರಮುಖ ಬ್ಯಾಟ್ಸ್ ಮನ್, ನಾಯಕ ಎಬಿ ಡಿ ವಿಲಿಯರ್ಸ್ ಅವರು ಭಾರತದ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದಿದ್ದಾರೆ. ಕಿಂಗ್ಸ್ ಮೀಡ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಕ್ರಿಕೆಟ್ ನಲ್ಲಿ ವೇಗಕ್ಕೆ ಮತ್ತೊಂದು ಹೆಸರೇ ಎಬಿ ಡಿ ಎನ್ನುವಂತೆ ಪ್ರದರ್ಶನ ನೀಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಬುಧವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ಡಿ ವಿಲಿಯರ್ಸ್ ಅತ್ಯಂತ ವೇಗವಾಗಿ 8,000 ರನ್ ಪೂರೈಸುವ ಮೂಲಕ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ದಾಖಲೆಯನ್ನು ಮುರಿದರು.

ವಿಲಿಯರ್ಸ್ ಅವರು 182ನೇ ಇನಿಂಗ್ಸ್‌ನಲ್ಲಿ 8 ಸಾವಿರ ರನ್ ಪೂರೈಸಿದ್ದರೆ ಎಡಗೈ ಬ್ಯಾಟ್ಸ್ ಮನ್ ಗಂಗೂಲಿ ಅವರು 208 ಪಂದ್ಯ,200 ಇನಿಂಗ್ಸ್ ತೆಗೆದುಕೊಂಡಿದ್ದರು. ವಿಲಿಯರ್ಸ್ ಅವರು ಏಕದಿನದ ಟಾಪ್ ಸ್ಕೋರರ್ ಸಚಿನ್ ತೆಂಡೂಲ್ಕರ್ (210 ಇನಿಂಗ್ಸ್) ದಾಖಲೆಯನ್ನು ಮುರಿದಿದ್ದಾರೆ.

AB de Villiers breaks Sourav Ganguly's 12-year-old record

ವಿಲಿಯರ್ಸ್ ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೆ ವೇಗದ ಅರ್ಧಶತಕ, ವೇಗದ ಶತಕ ಹಾಗೂ ವೇಗದ 150 ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ.

ಡಿ ವಿಲಿಯರ್ಸ್ 2015ರ ಜನವರಿಯಲ್ಲಿ ಜೋಹಾನ್ಸ್ ಬರ್ಗ್‌ನಲ್ಲಿ ವಿಂಡೀಸ್‌ನ ವಿರುದ್ಧ 2ನೆ ಏಕದಿನದಲ್ಲಿ ಕೇವಲ 16 ಎಸೆತಗಳಲ್ಲಿ ವೇಗದ ಅರ್ಧಶತಕವನ್ನು ಪೂರೈಸಿ 1996ರಲ್ಲಿ ಶ್ರೀಲಂಕಾದ ದಂತಕತೆ ಸನತ್ ಜಯಸೂರ್ಯ(17ಎಸೆತ) ಪಾಕ್ ವಿರುದ್ಧ ನಿರ್ಮಿಸಿರುವ ದಾಖಲೆಯನ್ನು ಮುರಿದಿದ್ದರು.

ವಿಂಡೀಸ್ ವಿರುದ್ಧದ ಅದೇ ಪಂದ್ಯದಲ್ಲೇ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸಿದ ವಿಲಿಯರ್ಸ್ 2014ರಲ್ಲಿ ನ್ಯೂಝಿಲೆಂಡ್‌ನ ಕೋರಿ ಆ್ಯಂಡರ್ಸನ್(36 ಎಸೆತ, 100 ರನ್) ವಿಂಡೀಸ್ ವಿರುದ್ಧ ನಿರ್ಮಿಸಿರುವ ಅತ್ಯಂತ ವೇಗದ ಶತಕ ದಾಖಲೆಯನ್ನು ಮುರಿದರು. ವಿಲಿಯರ್ಸ್ ವಿಂಡೀಸ್‌ನ ವಿರುದ್ಧ ಇನಿಂಗ್ಸ್‌ವೊಂದರಲ್ಲಿ 16 ಸಿಕ್ಸರ್ ಸಿಡಿಸಿ ಭಾರತದ ರೋಹಿತ್ ಶರ್ಮರ ದಾಖಲೆಯನ್ನು ಪತನಗೊಳಿಸಿದ್ದರು.

2015ರ ಐಸಿಸಿ ವಿಶ್ವಕಪ್‌ನಲ್ಲಿ ವಿಂಡೀಸ್‌ನ ವಿರುದ್ಧವೇ ಕೇವಲ 64 ಎಸೆತಗಳಲ್ಲಿ 150 ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಏಕದಿನ ಕ್ರಿಕೆಟ್ತ್ವರಿತ ಗತಿಯಲ್ಲಿ 8,000 ರನ್ ಗಳಿಸಿದವರು:

* ಎಬಿ ಡಿವಿಲಿಯರ್ಸ್ : 182 ಇನ್ನಿಂಗ್ಸ್

* ಸೌರವ್ ಗಂಗೂಲಿ : 200

* ಸಚಿನ್ ತೆಂಡೂಲ್ಕರ್ : 210

* ಬ್ರಿಯಾನ್ ಲಾರಾ: 211

* ಎಂಎಸ್ ಧೋನಿ : 214

(ಒನ್ ಇಂಡಿಯಾ ಸುದ್ದಿ)

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, August 27, 2015, 11:30 [IST]
Other articles published on Aug 27, 2015
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more