ಎಬಿ ಡಿ ವಿಲಿಯರ್ಸ್ ಪಾಲಿಗೆ ಟಿ20 ವಿಶ್ವಕಪ್ ಕದ ಮುಚ್ಚಿಯೇಬಿಟ್ಟಿತಾ?!

ಕೇಪ್‌ಟೌನ್, ಏಪ್ರಿಲ್ 14: ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್, ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ನಿವೃತ್ತಿ ಹಿಂಪಡೆದು ಮತ್ತೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ಟಿ20 ವಿಶ್ವಕಪ್‌ನಲ್ಲಿ ಆಡುವ ಆಶಯದಲ್ಲಿ ಎಬಿಡಿ ತಂಡಕ್ಕೆ ಕಮ್ ಬ್ಯಾಕ್ ಮಾಡುವುದಾಗಿ ಹೇಳಿಕೊಂಡಿದ್ದರು.
ಆದರೆ ಮತ್ತೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸುವ ಎಬಿ ಡಿ ವಿಲಿಯರ್ಸ್ ಆಸೆಗೆ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಈ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಮುಂದೂಡಲ್ಪಟ್ಟರೆ ತಾನು ರಾಷ್ಟ್ರೀಯ ತಂಕ್ಕೆ ಕಮ್ ಬ್ಯಾಕ್ ಮಾಡುವ ಭರವಸೆ ಕೈಬಿಡುವ ಅರ್ಥದಲ್ಲಿ ಎಬಿಡಿ ಮಾತನಾಡಿದ್ದಾರೆ.
ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಬೆಸ್ಟ್ ಬ್ಯಾಟ್ಸ್‌ಮನ್ ಅನ್ನಿಸಿಕೊಂಡಿರುವ ಎಬಿಡಿ 18 ಮೇ 2018ರಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡಕ್ಕೆ ಬಲ ತುಂಬುವ ಸಲುವಾಗಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್ ಬ್ಯಾಕ್ ಮಾಡುವುದಾಗಿ ಹೇಳಿದ್ದರು. ಕೊರೊನಾ ಕಾರಣ ಇದೀಗ ಎಬಿಡಿ ಆಸೆ ಮಣ್ಣು ಪಾಲಾಗುವುದರಲ್ಲಿದೆ.
'ಒಂದು ವೇಳೆ ಟಿ20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟರೆ ನನ್ನ ಬಹಳಷ್ಟು ಆಲೋಚನೆಗಳು ಬದಲಾಗಲಿವೆ. ಸದ್ಯಕ್ಕೆ ನಾನು ವಿಶ್ವಕಪ್‌ನಲ್ಲಿ ಆಡುವುದಾಗಿ ಭಾವಿಸುತ್ತೇನೆ. ಆದರೆ ನಾಳೆ ಈ ಆಲೋಚನೆ ಬದಲಾಗಲೂಬಹುದು,' ಎಂದು 36ರ ಹರೆಯದ ಎಬಿಡಿ ತನ್ನ ಅಸ್ಥಿರತೆ ಬಗ್ಗೆ ಸುಳಿವು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications