ಟಿ 20ಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದವರ ಕ್ಲಬಿಗೆ ಎಬಿ ಡಿ ವಿಲಿಯರ್ಸ್ ಎಂಟ್ರಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅಪ್ರತಿಮ ಆಟಗಾರ ದಕ್ಷಿಣ ಆಫ್ರಿಕಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿ ವಿಲಿಯರ್ಸ್ ಮತ್ತೊಂದು ದಾಖಲೆ ಬರೆದಿದ್ದಾರೆ. ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದ್ದಾರೆ.
ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ 399 ಸಿಕ್ಸರ್ ಬಾರಿಸಿದ್ದ ಎಬಿಡಿ ಅವರು ಇಂದು ಸಿಕ್ಸರ್ ಗಳಿಸುತ್ತಿದ್ದಂತೆ 400 ಸಿಕ್ಸರ್ ಗಳಿಸಿದ ಆಟಗಾರರ ಕ್ಲಬ್ ಸೇರಿದರು. 18 ಎಸೆತಗಳಲ್ಲಿ 28ರನ್ ಗಳಿಸಿ ಎಬಿ ಡಿ ಔಟಾದರು. 311 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಟಿ20ಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದವರು:
ಕ್ರಿಸ್ ಗೇಲ್ ಅವರು 404 ಪಂದ್ಯಗಳಲ್ಲಿ 978 ಸಿಕ್ಸ್ ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಕಿರಾನ್ ಪೊಲ್ಲಾರ್ಡ್ 673 ಸಿಕ್ಸ್ ಗಳಿಸಿದ್ದಾರೆ. ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ 485ಸಿಕ್ಸ್ ಗಳಿಸಿ ಮೂರನೇ ಸ್ಥಾನ ಹಾಗೂ ಆಸ್ಟ್ರೇಲಿಯಾದ ಶೇನ್ ವಾಟ್ಸನ್ 454ಸಿಕ್ಸ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದರೆ, ಐದನೇ ಸ್ಥಾನದಲ್ಲಿರುವ ಮತ್ತೊಬ್ಬ ವಿಂಡೀಸ್ ಆಟಗಾರ ಆಂಡ್ರೆ ರಸೆಲ್ 441 ಸಿಕ್ಸ್ ಸಿಡಿಸಿದ್ದಾರೆ. ಈಗ ದಕ್ಷಿಣ ಆಫ್ರಿಕಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿ ವಿಲಿಯರ್ಸ್ 400 ಸಿಕ್ಸರ್ ಬಾರಿಸಿ ಆರನೇ ಸ್ಥಾನಕ್ಕೇರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications