Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೆಣ್ಣು ಮಗುವಿಗೆ ತಂದೆಯಾದ ಸಂತಸ ಹಂಚಿಕೊಂಡ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್

AB de Villiers-Danielle blessed with baby girl on Nov 11

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಆರ್‌ಸಿಬಿಯ ಪ್ರಮುಖ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮೂರನೇ ಮಗುವಿಗೆ ತಂದೆಯಾಗಿದ್ದಾರೆ. ಈ ಸಂತಸವವನ್ನು ಎಬಿ ಡಿವಿಲಿಯರ್ಸ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ನವೆಂಬರ್ ತಿಂಗಳ 11ನೇ ತಾರೀಕಿಗೆ ಹೆಣ್ಣು ಮಗು ಜನಿಸಿರುವ ಸಂಗತಿಯನ್ನು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ಪತ್ನಿ ಹಾಗೂ ಮಗುವಿನ ಜೊತೆಗೆ ಇರುವ ಫೋಟೋವನ್ನು ಎಬಿ ಡಿವಿಲಿಯರ್ಸ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. " 11-11-2020ರಂದು ಈ ಜಗತ್ತಿಗೆ ಹೆಣ್ಣು ಮಗುವನ್ನು ಸ್ವಾಗತಿಸಿದ್ದೇವೆ. ಎಂಟೆ ಡಿ ವಿಲಿಯರ್ಸ್, ನೀನು ನಮ್ಮ ಕುಟುಂಬಕ್ಕೆ ಸೂಕ್ತವಾದ ಸೇರ್ಪಡೆಯಾಗಿದ್ದೀಯ. ನಿಜಕ್ಕೂ ನಾವು ಅದೃಷ್ಠಶಾಲಿಗಳು. ನಿನ್ನನ್ನು ಪಡೆದ ನಾವು ಧನ್ಯರು." ಎಂದು ಡಿವಿಲಿಯರ್ಸ್ ಈ ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಬಹಿರಂಗಗೊಳಿಸಿದ್ದಾರೆ.

ಎಬಿ ಡಿವಿಲಿಯರ್ಸ್ ದಂಪತಿ ಐಪಿಎಲ್‌ಗೂ ಮುಂಚಿತವಾಗಿ ಮತ್ತೊಂದು ಮಗುವಿಗೆ ತಂದೆ ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಎಬಿ ಡಿವಿಲಿಯರ್ಸ್ ಪತ್ನಿ ಡಾನಿಯೆಲ್ ಸ್ವಾರ್ಟ್ ಇನ್ಸ್ಟಾಗ್ರಾಮ್‌ನಲ್ಲಿ ಮೊದಲಿಗೆ ಈ ವಿಚಾರವನ್ನು ತಿಳಿಸಿದ್ದರು. ಈ ದಂಪತಿ ಈಗಾಗಲೇ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ.

ಐಪಿಎಲ್ ಮುಗಿಸಿ ಕುಟುಂಬವನ್ನು ಸೇರಿಕೊಂಡಿರುವ ಎಬಿ ಡಿವಲಿಯರ್ಸ್ ನೂತನ ಅತಿಥಿಯನ್ನು ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಲೀಗ್ ಟೂರ್ನಿಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಐಪಿಎಲ್‌ನಲ್ಲಿ ಸುದೀರ್ಘ ಕಾಲದಿಂದ ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿಯುತ್ತಿದ್ದಾರೆ.

Story first published: Friday, November 20, 2020, 9:33 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+