Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ನಾಯಕ ಯಾರಾಗುತ್ತಾರೆ? ರೋಹಿತ್ ಶರ್ಮಾ ಬಗ್ಗೆ ಎಬಿಡಿ ಹೇಳಿದ್ದೇನು?

ಐಪಿಎಲ್‌ ಮೆಗಾ ಹರಾಜಿನ ತಯಾರಿಗಳು ಭರದಿಂದ ನಡೆದಿವೆ. ಬಿಸಿಸಿಐ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇತ್ತ ಐಪಿಎಲ್‌ ಫ್ರಾಂಚೈಸಿಗಳು ಸಹ ತಮ್ಮ ತಂಡದಲ್ಲಿ ಯಾವ ಆಟಗಾರನನ್ನು ಉಳಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ಆರಂಭಿಸಿದ್ದಾರೆ. ಈ ಎಲ್ಲದರ ಮಧ್ಯೆ ಬಹಳ ಚರ್ಚೆ ಆಗುತ್ತಿರುವ ಒಂದು ವಿಷಯ, ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ತೊರೆಯುತ್ತಾರಾ ಎಂದು. ರೋಹಿತ್‌ ಮುಂಬೈ ಇಂಡಿಯನ್ಸ್‌ ತೊರೆದು ಆರ್‌ಸಿಬಿ ಸೇರುತ್ತಾರೆ ಎಂಬ ಚರ್ಚೆಗಳು ಆರಂಭವಾಗಿವೆ.

ಕಳೆದ ಐಪಿಎಲ್‌ ಆವೃತ್ತಿಯ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ಅವರನ್ನು ನಾಯಕತ್ವದಿಂದ ಮುಂಬೈ ಇಂಡಿಯನ್ಸ್‌ ಕೆಳಗಿಳಿಸಿತು. ಇವರ ಸ್ಥಾನಕ್ಕೆ ಗುಜರಾತ್ ಟೈಟನ್ಸ್‌ನಿಂದ ಟ್ರೇಡ್ ಮಾಡಿದ್ದ ಹಾರ್ದಿಕ್ ಪಾಂಡ್ಯರನ್ನು ಕೂರಿಸಲಾಯಿತು. ಆಗಿನಿಂದಲೂ ರೋಹಿತ್ ಶರ್ಮಾ ಮುಂದಿನ ವರ್ಷ ಬೇರೆ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಇದ್ದವು. ಈ ಬಗ್ಗೆ ಆರ್‌ಸಿಬಿ ತಂಡದ ಸೂಪರ್‌ ಸ್ಟಾರ್ ಬ್ಯಾಟರ್‌ ಎಬಿ ಡಿವಿಲಿಯರ್ಸ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

AB de Villiers Dismisses Rohit Sharma to RCB Rumors Backs Faf for IPL 2025 Captaincy

ಐಪಿಎಲ್‌ ಮೆಗಾ ಹರಾಜಿಗೂ ಮುನ್ನವೇ ರೋಹಿತ್ ಶರ್ಮಾ ಯಾವ ತಂಡ ಸೇರಿಕೊಳ್ಳುತ್ತಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಈ ನಿಟ್ಟಿನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಚುಕ್ಕಾಣಿಯನ್ನು ರೋಹಿತ್ ಹಿಡಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿ ಹೊಸ ಟ್ವಿಸ್ಟ್‌ ನೀಡಿದ್ದಾರೆ.

ರೋಹಿತ್‌ ಮುಂಬೈ ತೊರೆಯುತ್ತಾರಾ?

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಬಗ್ಗೆ ಡಿವಿಲಿಯರ್ಸ್‌ ಬೆಳಕು ಚೆಲ್ಲಿದ್ದಾರೆ. ನಿಶ್ಚಿತವಾಗಿ ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ತೊರೆದರೆ ದೊಡ್ಡ ಸುದ್ದಿ. ಅದು ಆರ್‌ಸಿಬಿ ಸೇರುತ್ತಾರಾ ಎಂದರೆ ಬಿಗ್‌ ನ್ಯೂಸ್‌. ಇದಕ್ಕೆ ಯಾರೆಲ್ಲಾ ಏನು ಹೇಳಬಹುದು ಯೋಚಿಸಿ. ಹಾರ್ದಿಕ್‌ ಗುಜರಾತ್‌ ಟೈಟನ್ಸ್‌ ಬಿಟ್ಟಾಗ ಯಾವ ರೀತಿ ಸದ್ದು ಮಾಡಿತ್ತೋ ಅದಕ್ಕಿಂತ ಹೆಚ್ಚಿನ ಸದ್ದನ್ನು ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತೊರೆದರೆ ಮಾಡಲಿದ್ದಾರೆ. ನನ್ನ ಅನಿಸಿಕೆ ಪ್ರಕಾರ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ತೊರೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಆರ್‌ಸಿಬಿ ನಾಯಕ ಯಾರು?

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಫಾಫ್‌ ಡುಪ್ಲೇಸಿಸ್‌ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದರು. ಸದ್ಯ ಫಾಫ್‌ಗೆ 40 ವರ್ಷ. ಇವರ ವಯಸ್ಸು ಆರ್‌ಸಿಬಿ ನಾಯಕತ್ವದಿಂದ ಇವರನ್ನು ದೂರ ಉಳಿಸುತ್ತದೆ. ಆದರೆ ಅವರು ಒಬ್ಬ ಉತ್ತಮ ಆಟಗಾರ ಎಂದು ಎಬಿಡಿ ತಿಳಿಸಿದ್ದಾರೆ. ವಯಸ್ಸು ಜಸ್ಟ್‌ ನಂಬರ್‌. ಅವರು ಆರ್‌ಸಿಬಿಯಲ್ಲಿ ಸಮಯ ಕಳೆದಿದ್ದಾರೆ. ಹೀಗಾಗಿ ಅವರು ನಾಯಕತ್ವವನ್ನು ವಹಿಸಿಕೊಂಡಲ್ಲಿ ತಂಡ ಸಮತೋಲಿತವಾಗಿ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

AB de Villiers Dismisses Rohit Sharma to RCB Rumors Backs Faf for IPL 2025 Captaincy

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್‌ ಮಾಲೀಕರು ತಾವು ಇರಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಲಿದ್ದಾರೆ. ಈ ಪಟ್ಟಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Story first published: Sunday, October 6, 2024, 13:50 [IST]
Other articles published on Oct 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+