ಐಪಿಎಲ್‌ನಂತರ ನಡೆಯುವ ಪ್ರಮುಖ ಲೀಗ್‌ನಿಂದ ಹೊರಗುಳಿಯಲಿದ್ದಾರೆ ಎಬಿ ಡಿವಿಲಿಯರ್ಸ್

ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮಹತ್ವದ ಕ್ರಿಕೆಟ್ ಲೀಗ್‌ನಿಮದ ಹೊರಗುಳಿಯಲಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟ್ ಲೀಗ್ ಬಿಗ್‌ಬ್ಯಾಶ್ ಟೂರ್ನಿಯಿಂದ ಹೊರಗುಳಿಯುವ ತೀರ್ಮಾನವನ್ನು ಕೈಗೊಂಡಿದ್ದಾರೆ ಎಬಿ ಡಿವಿಲಿಯರ್ಸ್.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳಿರುವ ಡಿ ವಿಲಿಯರ್ಸ್ ವಿಶ್ವಾದ ನಾನಾ ಲೀಗ್ ಕ್ರಿಕೆಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿರುವ ಎಬಿಡಿ ಅದ್ಭುತ ಲಯದಲ್ಲಿದ್ದು ಸ್ಪೋಟಕ ಪ್ರದರ್ಶನವನ್ನು ನಿಡುತ್ತಿದ್ದಾರೆ. ಈ ಮೂಲಕ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಆದರೆ ಈ ಟೂರ್ನಿಯ ಮುಕ್ತಾಯದ ಬಳಿಕ ಎಬಿಡಿ ಕುಟುಂಬವನ್ನು ಕೂಡಿಕೊಳ್ಳಲಿದ್ದಾರೆ.

ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ ಎಬಿಡಿ
ಐಪಿಎಲ್ ಮುಕ್ತಾಯದ ಕೆಲವೇ ದಿನಗಳ ಬಳಿಕ ಬಿಗ್‌ಬ್ಯಾಶ್ ಟೂರ್ನಿ ಆರಂಭವಾಗಲಿದೆ. ಡಿಸೆಂಬರ್ 3ರಿಂದ ಬಿಗ್‌ಬ್ಯಾಶ್ ಟೂರ್ನಿ ಆಯೋಜನೆಯಾಗಲಿದೆ. ಈ ಟೂರ್ನಿಯಲ್ಲಿ ಎಬಿಡಿ ಬ್ರಿಸ್ಬೇನ್ ಹೀಟ್ ತಂಡದ ಪರವಾಗಿ ಕಣಕ್ಕಿಳಿಯಬೇಕಾಗಿತ್ತು. ಆದರೆ ಕುಟುಂಬದೊಂದಿಗೆ ಕಾಲವನ್ನು ಕಳೆಯಲು ಹಾಗೂ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಎಬಿ ಡಿವಿಲಿಯರ್ಸ್ ಈ ಬಾರಿಯ ಟೂರ್ನಿಯನ್ನು ತಪ್ಪಿಸಿಕೊಳ್ಳಲು ಬಯಸಿದ್ದಾರೆ.

ಡ್ಯಾರೆನ್ ಲೆಹ್ಮನ್ ಪ್ರತಿಕ್ರಿಯೆ
ಬ್ರಿಸ್ಬೇನ್ ಹೀಟ್ ತಂಡದ ಕೋಚ್ ಡೇರೆನ್ ಲೆಹ್ಮನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು "ಬ್ರಿಸ್ಬೇನ್ ಫ್ರಾಂಚೈಸ್ ಎಬಿ ಡಿವಿಲಿಯರ್ಸ್ ಅವರೊಂದಿಗೆ ಒಪ್ಪಂದವನ್ನು ಮುಂದುವರಿಸಲು ಉತ್ಸುಕವಾಗಿದೆ. ಆದರೆ ವಿಶ್ವಾದ್ಯಂತ ಇರುವ ಪರಿಸ್ಥಿತಿ ಎಲ್ಲರ ಯೋಜನೆಗಳನ್ನೂ ಬದಲಾಯಿಸಿದೆ" ಎಂದಿದ್ದಾರೆ.

ಮೂರನೇ ಮಗುವಿನ ನಿರೀಕ್ಷೆಯಲ್ಲಿ ಎಬಿಡಿ
"ಬಿಗ್‌ಬ್ಯಾಶ್‌ನಲ್ಲಿ ಎಬಿಡಿ ಪಾಲ್ಗೊಳ್ಳದಿರಲು ಕೊರೊನಾ ವೈರಸ್‌ನಿಂದಾಗಿ ಉಂಟಾಗಿರುವ ಸಾವಾಲುಗಳನ್ನು ಹೊರತು ಪಡಿಸಿ ಮತ್ತೊಂದು ಕಾರಣವಿದೆ. ಎಬಿ ಡಿವಿಲಿಯರ್ಸ್ ಹಾಗೂ ಅವರ ಪತ್ನಿ ಡೇನಿಯೆಲ್ ಶೂಘ್ರದಲ್ಲೇ ಮೂರನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ" ಎಂದು ಡ್ಯಾರನ್ ಲೆಹ್ಮನ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications