For Quick Alerts
ALLOW NOTIFICATIONS  
For Daily Alerts
 

AB de Villiers: ಈ ಬಾರಿ RCB ತಂಡ ಉತ್ತಮವಾಗಿದೆ: ಒಳ್ಳೆಯ ಅವಕಾಶ: ಎಬಿಡಿ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ಆರ್‌ಸಿಬಿ ಪ್ರದರ್ಶನ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಪ್ರದರ್ಶನ ಕಂಡು ಹಲವು ಮಾಜಿ ಆಟಗಾರರು ಆರ್‌ಸಿಬಿ ಬೆನ್ನು ತಟ್ಟಿದ್ದಾರೆ. ಈಗ ಆರ್‌ಸಿಬಿ ತಂಡದ ಕುರಿತಾಗಿ ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್‌ ತುಟಿ ಬಿಚ್ಚಿದ್ದಾರೆ. ಆರ್‌ಸಿಬಿ ಈಗಿನ ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಬಲಿಷ್ಠವಾಗಿದೆ ಎಂದು ಬೆನ್ನುತಟ್ಟಿದ್ದಾರೆ.

ಚೆನ್ನೈನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ 6155 ದಿನಗಳ ಬಳಿಕ ಸಿಎಸ್‌ಕೆ ವಿರುದ್ಧ ಜಯ ಸಾಧಿಸಿದೆ. ಆರ್‌ಸಿಬಿ ಈ ಮೈದಾನದಲ್ಲಿ 2008ರಲ್ಲಿ ಕೊನೆಯ ಬಾರಿಗೆ ಜಯ ಸಾಧಿಸಿತ್ತು. ಈಗ 2025ರಲ್ಲಿ ಗೆಲುವು ದಾಖಲಿಸಿದೆ. ಚೆನ್ನೈ ತಂಡವನ್ನು 50 ರನ್‌ಗಳಿಂದ ಮಣಿಸಿದ ಬೆಂಗಳೂರು ಅಬ್ಬರಿಸಿದೆ. ಈ ಗೆಲುವಿನ ಬಳಿಕ ಮಾತನಾಡಿರುವ ಎಬಿಡಿ, ಆರ್‌ಸಿಬಿ ತಂಡ ಕಳೆದ ವರ್ಷದ ತಂಡಕ್ಕೆ ಹೋಲಿಸಿದರೆ, ಹತ್ತು ಪಟ್ಟು ಉತ್ತಮವಾಗಿದೆ ಎಂದು ಎಬಿಡಿ ತಿಳಿಸಿದ್ದಾರೆ.

AB de Villiers Hails RCB s Best-Ever IPL Squad After Historic Win Against CSK

ಆರ್‌ಸಿಬಿ ತಂಡ ಹರಾಜಿಗೆ ತಯಾರಿ ನಡೆಸುತ್ತಿದ್ದಾಗಲೇ ನಾನು ಈ ಬಾರಿ ಬ್ಯಾಲೆನ್ಸ್‌ ತಂಡವನ್ನು ಕಟ್ಟಬೇಕು ಎಂದು ಹೇಳಿದ್ದೇ. ಅದು ಬರೀ ಬ್ಯಾಟಿಂಗ್, ಬೌಲರ್‌, ಫೀಲ್ಡರ್‌ಗಳಿಂದ ಕೂಡಿದ್ದಲ್ಲ. ತಂಡವನ್ನು ನೋಡಿದ ಮೇಲೆ ಬ್ಯಾಲೆನ್ಸ್ ಆಗಿದೆ ಎಂದು ಕಾಣಬೇಕು ಎಂದು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್‌ ಎಬಿಡಿ ತಿಳಿಸಿದ್ದಾರೆ. ಆರ್‌ಸಿಬಿ ತಂಡ ನಿಜಕ್ಕೂ ಈ ಬಾರಿ ಬ್ಯಾಲೆನ್ಸ್ ಆಗಿದೆ ಎಂದಿದ್ದಾರೆ.

ಎಬಿಡಿ ಹೇಳಿದ್ದೇನು?

ಆರ್‌ಸಿಬಿ ತಂಡದ ಭುವನೇಶ್ವರ್ ಕುಮಾರ್‌ ಅವರ ಬೌಲಿಂಗ್‌ ಬಗ್ಗೆ ಮಾತನಾಡಿರುವ ಎಬಿಡಿ, ಇವರು ಸ್ವಿಂಗ್ ಬೌಲರ್‌. ಚೆನ್ನೈ ವಿರುದ್ಧ ಸ್ಥಿರ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಇವರು ಗಾಯದ ಸಮಸ್ಯೆಯಿಂದ ಆಡುವ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಭುವಿ ತಂಡ ಸೇರುತ್ತಲೇ ತಂಡ ಬ್ಯಾಲೆನ್ಸ್‌ ಕಂಡಂತೆ ಕಾಣುತ್ತದೆ ಎಂದು ಸ್ಟಾರ್ ಪ್ಲೇಯರ್‌ ಎಬಿಡಿ ತಿಳಿಸಿದ್ದಾರೆ.

ಆರ್‌ಸಿಬಿ ಪ್ರಸಕ್ತ ಋತುವಿನಲ್ಲಿ ಭರ್ಜರಿ ಆರಂಭವನ್ನು ಪಡೆದಿದೆ. ಈ ಬಾರಿ ಆರ್‌ಸಿಬಿ ಉತ್ತಮ ಬ್ಯಾಲೆನ್ಸ್‌ ತಂಡವಾಗಿದ್ದರಿಂದ ಈ ಬಾರಿ ಆರ್‌ಸಿಬಿ ಹೆಚ್ಚಿನ ಅವಕಾಶಗಳು ಇವೆ. ಈ ಅಂಶವನ್ನು ನಾನು ಪಂದ್ಯದ ಫಲಿತಾಂಶವನ್ನು ನೋಡಿ ಹೇಳುತ್ತಿಲ್ಲ. ಬದಲಿಗೆ ತಂಡ ಮೈದಾನದಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ನೋಡಿ ಹೇಳಿದ್ದೇನೆ ಎಂದು ಎಬಿಡಿ ಹೇಳಿದ್ದಾರೆ.

ರಜತ್‌ ಬಗ್ಗೆ ಎಬಿಡಿ ಮಾತು

ಐಪಿಎಲ್‌ನಲ್ಲಿ ಗೆಲುವಿನ ಆರಂಭವನ್ನು ಆರಂಭಿಸುವುದ ಸುಲಭದ ಮಾತಲ್ಲ. ಎರಡೂ ಪಂದ್ಯಗಳನ್ನು ಆರ್‌ಸಿಬಿ ವಿರೋಧಿಗಳ ಅಂಗಳದಲ್ಲಿ ಗೆಲುವು ದಾಖಲಿಸಿದೆ. ಟೂರ್ನಿ ಮುಂದೆ ಹೋದಾಗ ಕೆಲವು ಸಮೀಕರಣಗಳು ಬದಲಾಗುತ್ತವೆ. ಮುಂಬರುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಆಟಗಾರರು ಹೊಂದಿರಬೇಕಿದೆ ಎಂದು ಎಬಿಡಿ ತಿಳಿಸಿದ್ದಾರೆ.

ರಜತ್‌ ಪಟಿದಾರ್‌ ಅವರ ಕ್ಯಾಚ್‌ಗಳನ್ನು ಸಿಎಸ್‌ಕೆ ಬಿಟ್ಟಿದ್ದೇ ಪಂದ್ಯದ ಟರ್ನಿಂಗ್ ಪಾಯಿಂಟ್‌. ರಜತ್ ಪಟಿದಾರ್‌ ತಮ್ಮ ಸಾಮರ್ಥ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ರಜತ್‌ ಪಟಿದಾರ್‌ ವಿರಾಟ್ ಕೊಹ್ಲಿ ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಎಬಿಡಿ ಅಭಿಪ್ರಾಯ ಪಟ್ಟಿದ್ದಾರೆ.

Story first published: Saturday, March 29, 2025, 20:37 [IST]
Other articles published on Mar 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+