Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AB de Villiers: ಐಪಿಎಲ್‌ಗೂ ಮುನ್ನ ಕ್ರಿಕೆಟ್‌ಗೆ ವಾಪಸ್‌ ಆಗುವ ಬಗ್ಗೆ ಮಾತನಾಡಿರುವ ಎಬಿಡಿ: ಆರ್‌ಸಿಬಿ ಬಗ್ಗೆ ಹೇಳಿದ್ದೇನು?

ದಕ್ಷಿಣ ಆಫ್ರಿಕಾದ ಸ್ಟಾರ್ ದಿಗ್ಗಜ ಆಟಗಾರ ಎಬಿಡಿ ವಿಲಿಯರ್ಸ್‌ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. ಆದರೆ ಅಭಿಮಾನಿಗಳಿಗೆ ಎಬಿಡಿಯನ್ನು ಬ್ಯಾಟ್ ಮಾಡುವಂತೆ ನೋಡುವ ಆಸೆ ಮಾತ್ರ ಬತ್ತಿಲ್ಲ. ಈಗ ಡಿವಿಲಿಯರ್ಸ್‌ ಅಭಿಮಾನಿಗಳ ಅಭಿಮಾನಕ್ಕೆ ಮಣೆದಿದ್ದಾರೆ. ಕ್ರಿಕೆಟ್‌ನಿಂದ ದೂರ ಸರೆದಿರುವ ಎಬಿಡಿ ಮತ್ತೆ ಅಂಗಳಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಎಬಿಡಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಎಬಿಡಿ ಆರ್‌ಸಿಬಿ ಬಗ್ಗೆಯೂ ಮಾತನಾಡಿದ್ದಾರೆ.

ಐಪಿಎಲ್ 2025ಕ್ಕೂ ಮೊದಲೇ ಎಬಿಡಿ ವಿಲಿಯರ್ಸ್‌ರಿಂದ ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡುವ ಸುಳಿವು ಸಿಕ್ಕಿದ್ದು ಅಭಿಮಾನಿಗಳಲ್ಲಿ ಜೋಶ್‌ ತುಂಬಿದೆ. ಆದರೆ ಇದೇ ವೇಳೆ ಎಬಿಡಿ ಹೇಳಿದ ಆ ಒಂದು ಮಾತು ಅಭಿಮಾನಿಗಳ ಕೊಂಚ ನಿರಾಸೆ ಮಾಡಿದೆ. ಡಿವಿಲಿಯರ್ಸ್‌ ವೃತ್ತಿ ಪರ ಕ್ರಿಕೆಟ್‌ ಆಡುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲೂ ಆಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

AB de Villiers Hints at Casual Cricket Return Excludes IPL and Professional Cricket

ಮೈದಾನಕ್ಕೆ ಮರಳಲು ಕಾರಣ ಏನು?

ರನ್ನಿಂಗ್‌ ಬಿಟ್ವೀನ್‌ ದಿ ವಿಕೆಟ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಎಬಿ ಡಿವಿಲಿಯರ್ಸ್‌, ನಾನು ಇನ್ನು ಕ್ರಿಕೆಟ್ ಆಡಬಲ್ಲೆ. ಆದರೆ ಈ ಬಗ್ಗೆ ನಾನು ಇನ್ನು ನಿರ್ಧಾರ ಕೈಗೊಂಡಿಲ್ಲ. ನನ್ನ ಮಕ್ಕಳು ನನ್ನ ಮೇಲೆ ಕ್ರಿಕೆಟ್ ಆಡುವಂತೆ ಒತ್ತಡ ಹೇರುತ್ತಿದ್ದಾರೆ. ಅವರೊಂದಿಗೆ ನೆಟ್ಸ್‌ನಲ್ಲಿ ಆಡಬೇಕು ಎಂದು ನನಗೆ ಅನಿಸುತ್ತದೆ. ನನ್ನ ಮಗ ನನಗೆ ಆಡಲು ಒತ್ತಾಯಿಸುತ್ತಿದ್ದಾನೆ. ಇನ್ನು ಬೌಲಿಂಗ್‌ ಯಂತ್ರದೊಂದಿಗೆ ಆಡುತ್ತೆನೋ ಎಂಬುದರ ಬಗ್ಗೆಯೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಕಣ್ಣಿನ ಬಗ್ಗೆ ಮಾತನಾಡಿರುವ ಎಬಿಡಿ, ನನ್ನ ಕಣ್ಣು ಇನ್ನು ಚೆನ್ನಾಗಿದೆ ಎಂದು ಭಾವಿಸಿದ್ದೇನೆ. ಇನ್ನೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವೆ. ಆದರೆ ಒಂದು ಕಣ್ಣು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ನಾನು ನನ್ನ ಮಕ್ಕಳಿಗಾಗಿ ಕ್ರಿಕೆಟ್ ಆಡಲು ಬಯಸುತ್ತಿರುವೆ. ನಾನು ಮೈದಾನದಲ್ಲಿ ಹೋಗಿ ಕ್ರಿಕೆಟ್ ಆನಂದಿಸಬಹುದೇ ಎಂದು ನೋಡುತ್ತೇನೆ ಎಂದು ತಿಳಿಸಿದ್ದಾರೆ.

AB de Villiers Hints at Casual Cricket Return Excludes IPL and Professional Cricket

ಇದೇ ಕಾರ್ಯಕ್ರಮದ ನಿರೂಪಕಿ ನೀವು ಇಮ್ರಾನ್ ತಾಹೀರ್ ಅವರಿಂದ ಪ್ರೇರಣೆ ಪಡೆದು, ಕಂ ಬ್ಯಾಕ್ ಮಾಡುತ್ತಿದ್ದೀರಾ ಎಂದು ಕೇಳಿದಳು. ಹೌದು ನಾನು ಯಾವುದೇ ತಂಡದ ಪರ ಆಡಿದರೂ, ಅವನಿಗೆ ನನ್ನ ತಂಡದ ಪರ ಆಡಲು ಸೂಚಿಸುವೆ. ಅವನು ಸಹ ನನ್ನ ನೆಚ್ಚಿನ ಆಟಗಾರನಲ್ಲಿ ಒಬ್ಬ ಎಂದು ತಿಳಿಸಿದ್ದಾರೆ.

Story first published: Wednesday, January 22, 2025, 19:30 [IST]
Other articles published on Jan 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+