ಎಬಿ ಡಿವಿಲಿಯರ್ಸ್ ಆಲ್ ಸ್ಟಾರ್ ಐಪಿಎಲ್ XIನಲ್ಲಿ ಕನ್ನಡಿಗರಿಗೆ ಸ್ಥಾನವಿಲ್ಲ!

ಬೆಂಗಳೂರು: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್, ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿವಿಯಿರ್ಸ್ ಅವರು ಆಲ್ ಸ್ಟಾರ್ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ 7 ಭಾರತೀಯ ಆಟಗಾರರು ಮತ್ತು 4 ವಿದೇಶಿ ಆಟಗಾರರು ಕಾಣಿಸಿಕೊಂಡಿದ್ದಾರೆ. ಕ್ರಿಕ್ ಬಝ್ ಸಂವಾದದಲ್ಲಿ ಹರ್ಷ ಭೋಗ್ಲೆ ಜೊತೆ ಮಾತನಾಡುವಾಗ ಎಬಿಡಿ ತನ್ನ ನೆಚ್ಚಿನ ಐಪಿಎಲ್ ತಂಡ ಪ್ರಕಟಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಸ್ಟಾರ್ ಕ್ರಿಕೆಟಿಗ ಪ್ರಕಟಿಸಿರುವ ಈ ತಂಡದಲ್ಲಿ ಒಬ್ಬನೇ ಒಬ್ಬ ಕನ್ನಡಿಗನಿಲ್ಲ.
ಐಪಿಎಲ್ ತಂಡ ಪ್ರಕಟಿಸುವಾಗ 7 ಭಾರತೀಯ ಆಟಗಾರರು ಮತ್ತು 4 ವಿದೇಶಿ ಆಟಗಾರರನ್ನು ಪರಿಗಣಿಸಬೇಕು ಎಂಬ ನಿಯಮವಿದೆ. ಆ ನಿಯಮದ ಪ್ರಕಾರವೇ ಎಬಿಡಿ ಆಲ್ ಸ್ಟಾರ್ ಐಪಿಎಲ್ XI ಪ್ರಕಟಿಸಿದ್ದಾರೆ. ಎಬಿಡಿ ನೆಚ್ಚಿನ ಈ ಆಲ್ ಸ್ಟಾರ್ ಐಪಿಎಲ್ XI ಬಲಿಷ್ಟವಾಗಿಯೂ ಇದೆ.
ಆದರೆ ತಂಡದಲ್ಲಿ ಕ್ರಿಸ್ ಗೇಲ್, ಗ್ಲೆನ್ ಮ್ಯಾಕ್ಸ್‌ವೆಲ್, ಕೆಎಲ್ ರಾಹುಲ್ ಅವರಂತ ಕೆಲ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಮಿಸ್ ಆದಂತೆ ಅನ್ನಿಸುತ್ತದೆ.

ವೀರೇಂದ್ರ ಸೆಹ್ವಾಗ್‌ಗೆ ಸ್ಥಾನ
ಎಬಿ ಡಿವಿಲಿಯರ್ಸ್ ನೆಚ್ಚಿನ ಆಲ್ ಸ್ಟಾರ್ ಐಪಿಎಲ್ ತಂಡದಲ್ಲಿ ನಾಯಕರಾಗಿ ಭಾರತದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ. ಆರಂಭಿಕರ ಸ್ಥಾನದಲ್ಲಿ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಇದ್ದಾರೆ.

ಆಲ್ ರೌಂಡರ್‌ಗಳು
ಆಲ್ ರೌಂಡರ್‌ಗಳಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಬೆನ್ ಸ್ಟೋಕ್ಸ್, ಭಾರತದ ರವೀಂದ್ರ ಜಡೇಜಾ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ ಸ್ಥಾನ ಪಡೆದಿದ್ದಾರೆ. ಇನ್ನು ಬೌಲರ್‌ಗಳ ಬಣದಲ್ಲಿ ಜಸ್‌ಪ್ರೀತ್ ಬೂಮ್ರಾ, ದಕ್ಷಿಣ ಆಫ್ರಿಕಾದ ಮಾರಕ ವೇಗಿ ಕಾಗಿಸೋ ರಬಾಡಾ ಇದ್ದಾರೆ.

ಮಿಸ್ ಅನ್ನಿಸುವವರು
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ವೆಸ್ಟ್ ಇಂಡೀಸ್ ದಾಂಡಿಗರಾದ ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಆ್ಯಂಡ್ರೆ ರಸೆಲ್, ಭಾರತದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಇಂಥ ಒಂದಿಷ್ಟು ಆಟಗಾರರು ಮಿಸ್ ಆದಂತೆ ಅನ್ನಿಸುತ್ತದೆ.

ಎಬಿಡಿ ಆಲ್ ಸ್ಟಾರ್ ಐಪಿಎಲ್ XI ಹೀಗಿದೆ
ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ,ವಿರಾಟ್ ಕೊಹ್ಲಿ, ಎಬಿ ಡಿವಿಯಲಿರ್ಸ್ (ದಕ್ಷಿಣ ಆಫ್ರಿಕಾ), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಎಂಎಸ್ ಧೋನಿ (ವಿಕೆ ಮತ್ತು ನಾಯಕ), ರವೀಂದ್ರ ಜಡೇಜಾ, ರಶೀದ್ ಖಾನ್ (ಅಫ್ಘಾನಿಸ್ತಾನ), ಭುವನೇಶ್ವರ್ ಕುಮಾರ್, ಕಾಗಿಸೊ ರಬಾಡ (ದಕ್ಷಿಣ ಆಫ್ರಿಕಾ), ಜಸ್‌ಪ್ರೀತ್ ಬೂಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications