ಆರ್‌ಸಿಬಿ ಈ ಬಾರಿ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಶನಿವಾರ ಆರ್‌ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯಕ್ಕೆ ಮಳೆ ಕಾಟ ನೀಡಿದೆ. ಆದರೆ ಈ ಮಧ್ಯೆದಲ್ಲಿ ಆರ್‌ಸಿಬಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸುಂತಹ ಸುದ್ದಿಯೊಂದು ಬಂದಿದೆ. ಆರ್‌ಸಿಬಿ ತಂಡದ ಮಾಜಿ ಆಟಗಾರ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆ ಪ್ಲೇಯರ ಯಾರು? ಅಭಿಮಾನಿಗಳಿಗೆ ನೀಡಲಿರುವ ಉಡುಗೊರೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಆರ್‌ಸಿಬಿ ಈ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಇನ್ನು ಒಂದು ಪಂದ್ಯವನ್ನು ಗೆದ್ದು ಕೊಂಡಲ್ಲಿ ಆರ್‌ಸಿಬಿ ಸುಲಭವಾಗಿ ಪ್ಲೇ ಆಫ್‌ಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಈ ಬಾರಿ ಆರ್‌ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಟಾರ್ ಆಟಗಾರರನ್ನು ಹೊಂದಿದೆ. ಇನ್ನು ಒಬ್ಬನೇ ಆಟಗಾರನ ಮೇಲೆ ಒತ್ತಡ ಸಹ ಇಲ್ಲದಂತಾಗಿದೆ. ಹೀಗಾಗಿ ಈ ಬಾರಿ ಆರ್‌ಸಿಬಿಗೆ ಕಪ್ ಗೆಲ್ಲುವ ಚಾನ್ಸ್‌ಗಳು ಹೆಚ್ಚಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆರ್‌ಸಿಬಿ ಈ ಐಪಿಎಲ್‌ನಲ್ಲಿ ಆಡಿದ 11 ಪಂದ್ಯಗಳಲ್ಲಿ 8 ಜಯ, 3 ಸೋಲು ಕಂಡಿದ್ದು, 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಳೆದ 17 ಆವೃತ್ತಿಗಳಲ್ಲಿ ತಂಡ ಮಾಡದ ಸಾಧನೆಯನ್ನು ಈ ಬಾರಿ ಮಾಡಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಇನ್ನು ಈ ಆರ್‌ಸಿಬಿ ತಂಡದ ಬಗ್ಗೆ ಇದೇ ತಂಡದ ಪರ 11 ಆವೃತ್ತಿಗಳನ್ನು ಆಡಿರುವ ಎಬಿ ಡಿವಿಲಿಯರ್ಸ್ ಆರ್‌ಸಿಬಿ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಈ ಹಿಂದಿನ ತಂಡಗಳಿಗಿಂತಲೂ ಈ ಬಾರಿಯ ಆರ್‌ಸಿಬಿ ತಂಡ ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ.

ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಫೈನಲ್ ತಲುಪಿದರೆ, ತಂಡದ ಆಟಗಾರರೊಂದಿಗೆ ಕ್ರೀಡಾಂಗಣದಲ್ಲಿ ಇರುವುದಾಗಿ ಎಬಿಡಿ ತಿಳಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಲೈವ್ ಸೆಷನ್ ವೇಳೆ ಎಬಿಡಿ ಈ ಮಾಹಿತಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ವಿರಾಟ್ ಕೊಹ್ಲಿಯ ಜೊತೆ ಟ್ರೋಫಿ ಎತ್ತಿ ಹಿಡಿಯುವದನ್ನು ನೋಡುವುದೇ ಆನಂದ. ಅವರು ಈ ಸಾಧನೆಯನ್ನು ಬಹು ವರ್ಷಗಳಿಂದ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಆ ಆಸೆ ಕೈ ಗೂಡಿರಲಿಲ್ಲ. ಹೀಗಾಗಿ ಈ ಬಾರಿ ಒಳ್ಳೆಯ ಅವಕಾಶ ಇದೆ ಎಂದು ಎಬಿಡಿ ನಂಬಿದ್ದಾರೆ.
ಎನಿಡಿ ವಿಲಿಯರ್ಸ್ ಆರ್‌ಸಿಬಿ ಪರ ಆಡಿದಾಗಲೂ ತಂಡ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ ಈ ಬಾರಿ ತಂಡಕ್ಕೆ ಉತ್ತಮ ಅವಕಾಶ ಇದೆ. ಈ ಬಾರಿ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು ಎಲ್ಲ ಆಟಗಾರರು ಭರ್ಜರಿ ಲಯದಲ್ಲಿದ್ದಾರೆ. ಆರ್‌ಸಿಬಿ ತವರಿನಾಚೆ ಭರ್ಜರಿ ಪ್ರದರ್ಶನ ನೀಡುತ್ತಿದೆ. ಆರ್‌ಸಿಬಿ ಚೆನ್ನೈನಲ್ಲಿ 17 ವರ್ಷಗಳ ಬಳಿಕ ಸಿಎಸ್‌ಕೆಯನ್ನು, ಮುಂಬೈನಲ್ಲಿ 10 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್ ತಂಡವನ್ನು ಈ ಬಾರಿ ಸೋಲಿಸಿದೆ.