For Quick Alerts
ALLOW NOTIFICATIONS  
For Daily Alerts
 

ಎಬಿ ಡಿವಿಲಿಯರ್ಸ್ ನಿವೃತ್ತಿ ಬೌಲರ್‌ಗಳಿಗೆ ನೆಮ್ಮದಿ ತಂದಿದೆ ಎಂದ ರಶೀದ್ ಖಾನ್

Ab De Villiers retirement is a kind of relief for bowlers says Rashid Khan

ಮಿಸ್ಟರ್ 360, ಆಪತ್ಬಾಂಧವ, ಏಲಿಯನ್ ಎಂದು ಖ್ಯಾತಿಯನ್ನು ಪಡೆದಿದ್ದ ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಪ್ರತಿಭೆ ಎಬಿ ಡಿವಿಲಿಯರ್ಸ್ ನವೆಂಬರ್‌ 19ರಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿಯನ್ನು ಘೋಷಿಸಿದ್ದರು. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ನಿವೃತ್ತಿಯ ನಿರ್ಧಾರವನ್ನು ಎಬಿ ಡಿವಿಲಿಯರ್ಸ್ ತಿಳಿಸಿದ್ದರು. "ಬಾಲ್ಯದಲ್ಲಿ ಸೋದರರ ಜೊತೆಗೆ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದ ಶುದ್ಧ ಆನಂದ ಹಾಗೂ ಉತ್ಸಾಹದಿಂದಲೇ ಈವರೆಗೂ ಆಡಿದ್ದೇನೆ. ಈಗ 37ನೇ ವಯಸ್ಸಿನಲ್ಲಿ ನನಗೆ ತುಂಬಾ ಪ್ರಖರವಾಗಿ ಬೆಳಗಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಸತ್ಯವನ್ನು ನಾನು ಒಪ್ಪಿಕೊಳ್ಳಬೇಕಿದೆ. ಇದು ತಕ್ಷಣದ ನಿರ್ಧಾರದಂತೆ ಅನಿಸಿದರೂ ಈ ನಿರ್ಧಾರವನ್ನು ತೆಗೆದುಕೊಳ್ಳಲು ನಾನು ಸಮಯ ತೆಗೆದುಕೊಂಡಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅಸಾಧಾರಣವಾದ ಪ್ರಭಾವ ಬೀರಿದೆ" ಎಂದು ಎಬಿ ಡಿವಿಲಿಯರ್ಸ್ ಟ್ವಿಟ್ಟರ್‌ನಲ್ಲಿ ತಮ್ಮ ನಿವೃತ್ತಿಯನ್ನು ಘೋಷಿಸುತ್ತಾ ಬರೆದುಕೊಂಡಿದ್ದರು.

ಅಂತಾರರಾಷ್ಟ್ರೀಯ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದ ಎಬಿ ಡಿವಿಲಿಯರ್ಸ್ 2017ರಲ್ಲಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು ಮತ್ತು 2018ರ ಮೇ ತಿಂಗಳಿನಲ್ಲಿ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ 3 ವರ್ಷಗಳ ಹಿಂದೆಯೇ ನಿವೃತ್ತಿ ಪಡೆದಿದ್ದ ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸುತ್ತಾ ಬಂದಿದ್ದರು. ಈ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ತಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದ ಎಬಿ ಡಿವಿಲಿಯರ್ಸ್ ಹಲವಾರು ವರ್ಷಗಳಿಂದ ಬೆಂಗಳೂರು ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದರು.

ಹೀಗೆ ಇಂಡಿಯನ್ ಪ್ರೀಮಿಯಲ್ ಲೀಗ್ ಟೂರ್ನಿಗಳಲ್ಲಿ ಈ ದಶಕದ ಪೂರ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದು ಅಬ್ಬರಿಸಿದ ಎಬಿ ಡಿವಿಲಿಯರ್ಸ್ ನಿವೃತ್ತಿಯ ಕುರಿತು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಟವಾಡುವ ರಶೀದ್ ಖಾನ್ ಟ್ವಿಟರ್ ಖಾತೆಯಲ್ಲಿ ವಿಶೇಷ ಟ್ವೀಟ್ ಮಾಡುವ ಮೂಲಕ ನಿವೃತ್ತಿಯ ಶುಭಾಶಯವನ್ನು ಕೋರಿದ್ದಾರೆ.

"ಖಂಡಿತವಾಗಿಯೂ ನನ್ನನ್ನೂ ಸೇರಿ ಹಲವಾರು ಬೌಲರ್‌ಗಳಿಗೆ ಇದು ತುಸು ನೆಮ್ಮದಿ ನೀಡುವಂತಹ ವಿಷಯ. ನಮ್ಮೊಡನೆ ಹಲವಾರು ನೆನಪುಗಳನ್ನು ಸೃಷ್ಟಿಸಿದ್ದಕ್ಕೆ ಮತ್ತು ಅನೇಕ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ತುಂಬಿದ್ದಕ್ಕೆ ಧನ್ಯವಾದಗಳು. ನಾವು ಖಂಡಿತವಾಗಿಯೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ" ಎಂದು ರಶೀದ್ ಖಾನ್ ಎಬಿ ಡಿವಿಲಿಯರ್ಸ್ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಟ್ವೀಟ್ ಮಾಡಿದ್ದಾರೆ.

ಇನ್ನು ನವೆಂಬರ್‌ 19ರಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ನಿವೃತ್ತಿಯನ್ನು ಘೋಷಿಸಿದ್ದ ಎಬಿ ಡಿವಿಲಿಯರ್ಸ್ ಅವರ ವಿಡಿಯೋವೊಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿತ್ತು ಈ ಟ್ವೀಟ್ ಒಂದರಲ್ಲಿ ಮಾತನಾಡಿರುವ ಎಬಿ ಡಿವಿಲಿಯರ್ಸ್ "ನನ್ನ ಜೀವನ ಪೂರ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗನಾಗಿರುತ್ತಾನೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರತಿಯೊಬ್ಬ ಸದಸ್ಯರೂ ಕೂಡ ನನ್ನ ಕುಟುಂಬದ ಸದಸ್ಯರಾಗಿದ್ದಾರೆ. ಜೀವನದಲ್ಲಿ ಹಲವಾರು ವ್ಯಕ್ತಿಗಳು ಬರುತ್ತಾರೆ ಮತ್ತು ಹೋಗುತ್ತಾರೆ ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ನಾವು ಪರಸ್ಪರ ಹೊಂದಿರುವ ಪ್ರೀತಿ ಎಂದೆಂದಿಗೂ ಶಾಶ್ವತ. ನಾನೀಗ ಅರ್ಧ ಭಾರತೀಯನಾಗಿದ್ದೇನೆ ಮತ್ತು ಅದಕ್ಕಾಗಿ ನಾನು ತುಂಬಾ ಗೌರವಪಡುತ್ತೇನೆ" ಎಂದು ಹೇಳಿಕೆ ನೀಡಿದ್ದರು.

Story first published: Tuesday, November 23, 2021, 10:16 [IST]
Other articles published on Nov 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+