Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್ ಸಿಬಿ ಪರ ಮಿ.360 ಎಬಿಡಿ ಮತ್ತೆ ಬ್ಯಾಟ್ ಬೀಸಲಿದ್ದಾರೆ!

AB De Villiers Says He Will Keep On Playing Indian Premier League

ಬೆಂಗಳೂರು, ಜುಲೈ 11: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಬಳಿಕ ಎಬಿ ಡಿ ವಿಲಿಯರ್ಸ್ ಅವರ 360 ಡಿಗ್ರಿ ಆಟ ನೋಡುವ ಆವಕಾಶ ಸಿಗುವುದಿಲ್ಲ ಎಂದು ಕೊರಗುತ್ತಿದ್ದ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿದೆ.

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್​ಮನ್​ ಎಬಿ ಡಿವಿಲಿಯರ್ಸ್​ ಅವರು ಇನ್ನುಳ ಕಾಲ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​)ನಲ್ಲಿ ಆಡುತ್ತೇನೆ ಎಂದು iol.co.za ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಸಂದರ್ಭದಲ್ಲಿ ಐಪಿಎಲ್​ನಲ್ಲಿ ಆಡುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿರಲಿಲ್ಲ. ಆದರೆ, ಈಗ ಈ ಬಗ್ಗೆ ಷ್ಟನೆ ನೀಡಿದ್ದು, ಮುಂದಿನ ಹಲವು ವರ್ಷಗಳವರೆಗೆ ನಾನು ಐಪಿಎಲ್​ನಲ್ಲಿ ಆಡುತ್ತೇನೆ. ಆ ಮೂಲಕ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಬಯಸುತ್ತೇನೆ. ಆದರೆ, ಎಷ್ಟು ವರ್ಷಗಳವರೆಗೆ ಆಟ ಆಡುತ್ತೇನೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

2008ರಲ್ಲಿ ಡೆಲ್ಲಿ ಡೇರ್​ಡೆವಿಲ್ಸ್​ ತಂಡದೊಂದಿಗೆ ಎಬಿ ಡಿವಿಲಿಯರ್ಸ್​ ತಮ್ಮ ಐಪಿಎಲ್​ ಅಭಿಯಾನವನ್ನು ಆರಂಭಿಸಿದ್ದರು. ಮೂರು ವರ್ಷ ಅದೇ ತಂಡವನ್ನು ಪ್ರತಿನಿಧಿಸಿದ್ದರು. ಆ ನಂತರ ಆರ್​ಸಿಬಿ ತಂಡ ಸೇರಿ, ತಂಡದ ಅವಿಭಾಜ್ಯ ಅಂಗವಾಗಿ ಬಿಟ್ಟರು.

100 ನೇ ಟೆಸ್ಟ್​ ಪಂದ್ಯವನ್ನು ನಾನು ಬೆಂಗಳೂರಿನಲ್ಲೇ ಆಡಿದ್ದೆ. ನನಗೂ ನನ್ನ ಕುಟುಂಬಕ್ಕೂ ಬೆಂಗಳೂರಿನ ಜತೆ ಉತ್ತಮ ನಂಟಿದೆ.ಅಪಾರ ಅಭಿಮಾನಿಗಳನ್ನು ಪಡೆದಿದ್ದೇನೆ ಎಂದಿದ್ದಾರೆ.

Story first published: Wednesday, July 11, 2018, 16:35 [IST]
Other articles published on Jul 11, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+