AB de Villiers: ಮೈದಾನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿರುವ ಮಿಸ್ಟರ್ 360: ಈ ತಂಡಕ್ಕೆ ಕ್ಯಾಪ್ಟನ್
ವಿಶ್ವದಲ್ಲೇ ತಮ್ಮ ಅಭಿಮಾನಿಗಳ ಬಳಗವನ್ನು ಹೊಂದಿರುವ ಆಟಗಾರರಲ್ಲಿ ಎಬಿ ಡಿವಿಲಿಯರ್ಸ್‌ಗೂ ಸ್ಥಾನ. ಇವರು ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾಗಿದ್ದರು. ಅಲ್ಲದೆ ತಮ್ಮ ವಿಶಿಷ್ಠ ಬ್ಯಾಟಿಂಗ್ ಶೈಲಿಯಿಂದ ರನ್‌ಗಳನ್ನು ಕಲೆ ಹಾಕಿ ಅಬ್ಬರಿಸಿದ್ದರು. ಎಬಿಡಿ 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಬಳಿಕ ಅವರು ಐಪಿಎಲ್‌ನಲ್ಲೂ ಕಾಣಿಸಿಕೊಳ್ಳಲಿಲ್ಲ. ಆದರೆ ಈಗ ಎಬಿಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.
ಮಿಸ್ಟರ್ 360 ಖ್ಯಾತಿಯ ಬ್ಯಾಟರ್ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಕ್ರಿಕೆಟ್ ಅಂಗಳಕ್ಕೆ ಮತ್ತೆ ಎಂಟ್ರಿ ನೀಡಲಿದ್ದಾರೆ. ಅದು ದಕ್ಷಿಣ ಆಫ್ರಿಕಾ ಪರ. ಡಿವಿಲಿಯರ್ಸ್ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಎರಡನೇ ಸೀಸನ್‌ನಲ್ಲಿ ಆಡುವುದನ್ನು ಕಾಣಬಹುದು. ಡಿವಿಲಿಯರ್ಸ್ ಈ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪರ ಕಾಣಿಸಿಕೊಳ್ಳಲಿದ್ದಾರೆ. ಅವರು ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಡಿವಿಲಿಯರ್ಸ್ ನಿವೃತ್ತಿಯ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ.

ಏನದು ಲೆಜೆಂಡ್ಸ್ ಚಾಂಪಿಯನ್ ಶಿಪ್
ನಿವೃತ್ತ ಮತ್ತು ಒಪ್ಪಂದವಿಲ್ಲದ ಆಟಗಾರರು ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಭಾಗವಹಿಸುತ್ತಾರೆ. ಈ ಸಾಲಿಗೆ ಈಗ ಎಬಿಡಿ ಸಹ ಸೇರಿದ್ದಾರೆ. ಈ ಟೂರ್ನಿಯ ಮೂಲಕ ಕ್ರಿಕೆಟ್ ದಿಗ್ಗಜರು ಮತ್ತೊಮ್ಮೆ ಅಖಾಡ ಪ್ರವೇಶಿಸುವ ಕನಸು ಹೊಂದಿದ್ದಾರೆ.
ಮೈದಾನಕ್ಕೆ ಎಂಟ್ರಿ ಏಕೆ?
ಈ ಬಗ್ಗೆ ಈಗಾಗಲೇ ಎಬಿಡಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಹಿರಂಗ ಪಡಿಸಿದ್ದಾರೆ. ನಾನು ಮತ್ತೆ ಅಂಗಳಕ್ಕೆ ರಿಟರ್ನ್ ಆಗಬಹುದು. ಆದರೆ ಈ ಬಗ್ಗೆ ಇನ್ನು ಧೃಡವಾಗಿಲ್ಲ. ನನ್ನ ಮಕ್ಕಳು ನನ್ನ ಮೇಲೆ ಒತ್ತಡವನ್ನು ಹೇರುತ್ತಿದ್ದಾರೆ. ಅವರು ನಾನು ಆಡುವುದನ್ನು ನೋಡುವ ಬಯಕೆಯನ್ನು ಹೊಂದಿದ್ದಾರೆ. ನಾನು ನನ್ನ ಮಕ್ಕಳೊಂದಿಗೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡಬಹುದು ಆದರೆ ಈ ಬಗ್ಗೆ ಇನ್ನು ಯಾವುದೇ ಸ್ಪಷ್ಟತೆ ಇಲ್ಲ. ಇನ್ನು ನಾನು ಯಾವ ಸ್ವರೂಪದಲ್ಲಿ ಮೈದಾನಕ್ಕೆ ಇಳಿಯುತ್ತೇನೆ ಎಂಬುದರ ಬಗ್ಗೆ ಖಚಿತವಿಲ್ಲ. ಇನ್ನು ವಿಶ್ವದಲ್ಲಿ ನಡೆಯುತ್ತಿರುವ ಲೀಗ್‌ಗಳಲ್ಲಿ ಆಗಲಿ ಅಥವಾ ದಕ್ಷಿಣ ಆಫ್ರಿಕಾ ಪರವಾಗಲಿ ಮೈದಾನಕ್ಕೆ ಇಳಿಯುವುದಿಲ್ಲ ಎಂದು ತಿಳಿಸಿದ್ದರು,

ಎಬಿಡಿ 2021ರಲ್ಲಿ ಐಪಿಎಲ್‌ನಲ್ಲಿ ಆಡಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಆಗ ಅವರಿಗೆ 40 ವರ್ಷ ವಯಸ್ಸಾಗಿತ್ತು. ಅವರ ಕಣ್ಣಿಗೆ ಗಾಯವಾಗಿತ್ತು. ಇದರಿಂದಾಗಿ ಮೈದಾನದಲ್ಲಿ ಚೆಂಡನ್ನು ಜಡ್ಜ್ ಮಾಡಲು ಕೊಂಚ ಕಷ್ಟ ಪಡುತ್ತಿದ್ರು. ಹೀಗಾಗಿ ಅವರು ಕ್ರಿಕೆಟ್ ಅಂಗಳದಿಂದ ದೂರ ಸರಿಯುವ ಬಗ್ಗೆ ನಿರ್ಧಾರವನ್ನು ಕೈಗೊಂಡಿದ್ದರು. ಈಗ ಡಿವಿಲಿಯರ್ಸ್ ಫಿಟ್ ಆಗಿದ್ದು, ಮತ್ತೆ ಅಖಾಡ ಪ್ರವೇಶಿಸಲಿದ್ದಾರೆ.
ಎಬಿಡಿ ತಮ್ಮ ಸಾಮಾಜಿಕ ಖಾತೆಯಲ್ಲಿ ಕ್ರಿಕೆಟ್ ಅಂಗಳಕ್ಕೆ ಮತ್ತೆ ಎಂಟ್ರಿ ನೀಡುವ ಬಗ್ಗೆ ಬರೆದುಕೊಂಡಿದ್ದರು. ಈ ಬಗ್ಗೆ ಅವರು ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದರು. 'ಮುಂಬರುವ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025 ರಲ್ಲಿ ನಾನು ದಕ್ಷಿಣ ಆಫ್ರಿಕಾ ಪರ ಆಡುತ್ತಿರುವುದಾಗಿ ತಿಳಿಸಿದ್ದಾರೆ. ಪಂದ್ಯಾವಳಿ ಜುಲೈ 18 ರಿಂದ ಆಗಸ್ಟ್ 2 ರವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications