'ಏಕದಿನ' ನಾಯಕತ್ವದಿಂದ ಕೆಳಗಿಳಿದ ಎಬಿ ಡಿವಿಲಿಯರ್ಸ್
ಕೇಪ್ ಟೌನ್, ಆಗಸ್ಟ್ 23: ಖ್ಯಾತ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ. ಸುಮಾರು ಆರು ವರ್ಷಗಳಿಂದ ಈ ಸ್ಥಾನದಲ್ಲಿದ್ದ ಅವರು, ನಾಯಕತ್ವದ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಬುಧವಾರ ಪ್ರಕಟಿಸಿದ್ದಾರೆ.
ತಮ್ಮ ನಿರ್ಧಾರಕ್ಕೆ ಸೂಕ್ತ ಕಾರಣವನ್ನೂ ಹೇಳಿರುವ ಅವರು, ಏಕದಿನ ನಾಯಕನ ಸ್ಥಾನವನ್ನು ಬೇರೆಯವರು ತುಂಬಲ ಸಕಾಲ ಬಂದಿದೆ. ನಾನು ಈ ಮಾದರಿಯಿಂದ (ಏಕದಿನ) ಕೊಂಚ ದಿನ ಹೊರಗುಳಿಯಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.

ಏಕದಿನ ನಾಯಕತ್ವದಿಂದ ಕೆಳಗಿಳಿದ ಮೇಲೆ ಒತ್ತಡ ರಹಿತನಾಗಿ, ಹೊಸತನದಿಂದ ತುಂಬಿ ತುಳುಕುತ್ತಿರುವುದಾಗಿ ಅವರು ತಿಳಿಸಿದ್ದಾರೆ.
''ಕಳೆದೆರಡು ವರ್ಷಗಳಿಂದ ನಾನು ನನ್ನ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಕೊಂಚ ವಿಫಲನಾಗುತ್ತಿದ್ದೇನೆ. ದೈಹಿಕವಾಗಿ, ಮಾನಸಿಕವಾಗಿ ನಾನು ತುಂಬಾ ದಣಿದಿದ್ದೇನೆ. ನನಗೆ ಈಗ ಇಬ್ಬರು ಮಕ್ಕಳಿದ್ದಾರೆ. ನನ್ನ ಮಡದಿಯೇ ಹೆಚ್ಚಿನ ಕಾಳಜಿ ತೋರುತ್ತಿದ್ದಾರೆ. 2004ರಿಂದ ಮೂರು ಮಾದರಿಯ ಕ್ರಿಕೆಟ್ ಪಂದ್ಯಗಳಲ್ಲಿ ತೊಡಗಿಸಿಕೊಂಡಿದ್ದು, ನಾನು ಕುಟುಂಬದಲ್ಲಿ ತೊಡಗಿಸಿಕೊಂಡಿದ್ದು ಕಡಿಮೆಯೇ. ಹಾಗಾಗಿ, ನಾನು ಈ ಕುಟುಂಬದ ಕಡೆಗೆ ಹೆಚ್ಚು ಗಮನ ಕೊಡಲು ಬಯಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications