Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ಸ್ಪೋಟಕ ಆಟಗಾರ ಎಬಿ ಡಿವಿಲಿಯರ್ಸ್ ಹೆಗಲಿಗೆ ಬೀಳುತ್ತಾ ದೊಡ್ಡ ಜವಾಬ್ಧಾರಿ?

Ab De Villiers To Do Wicket Keeping For Rcb This Ipl ?

ಐಪಿಎಲ್ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. ಈ ಮಧ್ಯೆ ಆರ್‌ಸಿಬಿ ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಪ್ರಮುಖ ವಿಚಾರವೊಂದನ್ನು ಬಹಿರಂಗಗೊಳಿಸಿದ್ದಾರೆ. ಆರ್‌ಸಿಬಿಯ ಪ್ರಮುಖ ಆಟಗಾರ ಎಬಿ ಡಿಲಿಯರ್ಸ್ ಹೆಗಲಿಗೆ ಪ್ರಮುಖ ಜವಾಬ್ಧಾರಿ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದಿದ್ದಾರೆ.

ಸೈಮನ್ ಕ್ಯಾಟಿಚ್ ಬುಧವಾರ ಬೆಳಗ್ಗೆ ಮಾಧ್ಯಮ ಸಂವಾದವನ್ನು ನಡೆಸಿದರು. ಈ ಸಂವಾದದಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಎಬಿ ಡಿವಿಲಿಯರ್ಸ್ ಅವರ ಮುಖ್ಯ ಪಾತ್ರದ ಬಗ್ಗೆ ಮಾತುಗಳನ್ನಾಡಿದರು. ದಕ್ಷಿಣ ಆಫ್ರಿಕಾದ ಆಟಗಾರನ ಅನುಭವವನ್ನು ದೊಡ್ಡಮಟ್ಟದಲ್ಲಿ ಉಪಯೋಗಿಸಿಕೊಳ್ಳುವ ಬಗ್ಗೆ ಅವರು ಮಾಹಿತಿಯನ್ನು ನೀಡಿದರು.

ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಆರ್‌ಸಿಬಿ ಶಕ್ತಿ

ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಆರ್‌ಸಿಬಿ ಶಕ್ತಿ

ಕಳೆದ ಹಲವಾರು ಸೀಸನ್‌ಗಳಿಂದ ಎಬಿ ಡಿವಿಲಿಯರ್ಸ್ ಆರ್‌ಸಿಬಿ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿಗೆ ಅತ್ಯುತ್ತಮ ರೀತಿಯಲ್ಲಿ ಬೆಂಬಲವನ್ನು ಕೊಡುತ್ತಾ ಅಭಿಮಾನಿಗಳ ಮನಗೆದ್ದಿದ್ದಾರೆ. ತನ್ನ ಬ್ಯಾಟಿಂಗ್ ಶಕ್ತಿಯ ಮೂಲಕ ಬಹುತೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಬಿ ಡಿವಿಲಿಯರ್ಸ್.

ಡಿವಿಲಿಯರ್ಸ್ ಹೆಗಲಿಗೆ ಪ್ರಮುಖ ಜವಾಬ್ಧಾರಿ

ಡಿವಿಲಿಯರ್ಸ್ ಹೆಗಲಿಗೆ ಪ್ರಮುಖ ಜವಾಬ್ಧಾರಿ

ಆರ್‌ಸಿಬಿ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ಎಬಿ ಡಿವಿಲಿಯರ್ಸ್ ಈವರೆಗೂ ಫೀಲ್ಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಈ ಬಾರಿಯ ಟೂರ್ನಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ಧಾರಿ ಎಬಿ ಡಿವಿಲಿಯರ್ಸ್ ಹೆಗಲೇರುವ ಸಾಧ್ಯತೆಯಿದೆ. ಈ ಬಗ್ಗೆ ಸ್ವತಃ ಆರ್‌ಸಿಬಿಯ ಕೋಚ್ ಮಾಧ್ಯಮ ಸಂವಾದದಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ಎಬಿ ಡಿವಿಲಿಯರ್ಸ್‌ಗೆ ವಿಕೆಟ್ ಕೀಪಿಂಗ್ ಬಗ್ಗೆ ಚರ್ಚೆ

ಎಬಿ ಡಿವಿಲಿಯರ್ಸ್‌ಗೆ ವಿಕೆಟ್ ಕೀಪಿಂಗ್ ಬಗ್ಗೆ ಚರ್ಚೆ

ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಗಿರುವ ಸೈಮನ್ ಕ್ಯಾಟಿಚ್ "ಆರ್‌ಸಿಬಿ ತಂಡದ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ಎಬಿ ಡಿವಿಲಿಯರ್ಸ್‌ಗೆ ನೀಡುವ ಬಗ್ಗೆ ತಂಡದ ಮೀಟಿಂಗ್‌ನಲ್ಲಿ ನಡೆದಿದೆ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನಷ್ಟೇ ತಂಡ ತೆಗೆದುಕೊಳ್ಳಬೇಕಾಗಿದೆ.

ಆರ್‌ಸಿಬಿ ವಿಕೆಟ್ ಕೀಪಿಂಗ್ ಹೊಣೆ ಹೊತ್ತಿದ್ದರು ಎಬಿಡಿ

ಆರ್‌ಸಿಬಿ ವಿಕೆಟ್ ಕೀಪಿಂಗ್ ಹೊಣೆ ಹೊತ್ತಿದ್ದರು ಎಬಿಡಿ

ಆರ್‌ಸಿಬಿ ವಿಕೆಟ್ ಕೀಪರ್ ಜವಾಬ್ಧಾರಿ ಎಬಿ ಡಿವಿಲಿಯರ್ಸ್ ಹೆಗಲಿಗೆ ಬಿದ್ದರೆ ಅದೇನು ಡಿವಿಲಿಯರ್ಸ್ ಪಾಲಿಗೆ ಹೊಸದಲ್ಲ. ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಕೂಡ ಆಗಿದ್ದ ಎಬಿಡಿ 2017ಕ್ಕೂ ಮುನ್ನ ಆರ್‌ಸಿಬಿಗೂ ವಿಕೆಟ್ ಕೀಪರ್ ಆಗಿದ್ದರು. ಆದರೆ ಬಳಿಕ ಗಾಯಗೊಳ್ಳಬಹುದಾದ ಕಾರಣವನ್ನು ನೀಡಿ ಆ ಜವಾಬ್ಧಾರಿಯಿಂದ ಹಿಂದೆ ಸರಿದಿದ್ದರು. ಇದೀಗ ಮತ್ತೊಮ್ಮೆ ವಿಕೆಟ್ ಕೀಪಿಂಗ್ ವಹಿಸಿಕೊಳ್ಳುವ ಸಾಧ್ಯತೆಯೊಂದು ಕಂಡುಬರುತ್ತಿದೆ.

ಪಾರ್ಥೀವ್ ಪಟೇಲ್ ವಿಕೆಟ್ ಕೀಪರ್

ಪಾರ್ಥೀವ್ ಪಟೇಲ್ ವಿಕೆಟ್ ಕೀಪರ್

ಆರ್‌ಸಿಬಿ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಪಾರ್ಥೀವ್ ಪಟೇಲ್ ಕಳೆದ ಕೆಲ ವರ್ಷಗಳಿಂದ ಜವಾಬ್ಧಾರಿಯನ್ನು ಹೊತ್ತಿದ್ದಾರೆ. ಪಾರ್ಥೀವ್ ಪಟೇಲ್ ಜೊತೆಗೆ ಈ ಬಾರಿ ಇನ್ನೋರ್ವ ಪೂರ್ಣ ಕಾಲಿಕ ವಿಕೆಟ್ ಕೀಪರ್ ಆಗಿರುವ ಜೋಶ್ ಫಿಲಿಪ್ಪೆ ಅವರನ್ನು ಕೂಡ ಆರ್‌ಸಿಬಿ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿದೆ. ಹೀಗಿದ್ದರೂ ಆರ್‌ಸಿಬಿ ವಿಕೆಟ್ ಕೀಪಿಂಗ್ ಜವಾಬ್ಧಾರಿ ಎಬಿ ಡಿವಿಲಿಯರ್ಸ್ ಹೆಗಲೇರುತ್ತಾ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.

Story first published: Wednesday, August 26, 2020, 18:58 [IST]
Other articles published on Aug 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+