Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಬಿ ಡಿವಿಲಿಯರ್ಸ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿಸುದ್ದಿ

AB de Villiers To Play In T20 World Cup, Confirms Mark Boucher

ಎಬಿ ಡಿವಿಲಿಯರ್ಸ್ ಅಭಿಮಾನಿಗಳ ಪಾಲಿನ ನೆಚ್ಚಿನ ಕ್ರಿಕೆಟರ್. ದಕ್ಷಿಣ ಆಫ್ರಿಕಾದ ಆಟಗಾರನಾಗಿದ್ದರೂ ಎಬಿಡಿ ವಿಶ್ವಾದ್ಯಂತ ತಮ್ಮ ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತ ಸೇರಿದಂತೆ ಕ್ರಿಕೆಟ್ ಆಡುವ ಎಲ್ಲಾ ದೇಶಗಳಲ್ಲೂ ಎಬಿಡಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ.

ಆದರೆ 2018ರ ಮೇ ತಿಂಗಳಲ್ಲಿ ಎಬಿಡಿ ಇದ್ದಕ್ಕಿಂತಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗೂ ವಿದಾಯ ಹೇಳುವ ನಿರ್ಧಾರಕ್ಕೆ ಬಂದರು.ಇದು ಕ್ರಿಕೆಟ್ ಅಭಿಮಾನಿಗಳಿಗೆ ನಿಜಕ್ಕೂ ಆಘಾತವನ್ನು ನೀಡಿದ ವಿಷಯ. ಇನ್ನೂ ಕ್ರಿಕೆಟ್‌ನಲ್ಲಿ ಮಿಂಚುಹರಿಸುತ್ತಿರುವ ಸಮಯದಲ್ಲಿ ಎಬಿಡಿ ಈ ಅನಿರೀಕ್ಷಿತ ನಿರ್ಧಾರವನ್ನು ಕೈಗೊಂಡು ಆಶ್ಚರ್ಯ ಮೂಡಿಸಿದ್ದರು.

ಆದರೆ ಇದೀಗ ಎಬಿಡಿ ವಿಲಿಯರ್ಸ್ ಮತ್ತೆ ಕ್ರಿಕೆಟ್‌ನಲ್ಲಿ ಮಿಂಚು ಹರಿಸುವ ಸುದ್ದಿ ಬಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ವಾಪಾಸ್ ಬರುವ ನಿರ್ಧಾರಕ್ಕೆ ಡಿವಿಲಿಯರ್ಸ್ ಬಂದಿದ್ದಾರೆ. ಡಿವಿಲಿಯರ್ಸ್ ಈ ನಿರ್ಧಾರಕ್ಕೆ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.

ತಾನು ದಕ್ಷಿಣ ಆಪ್ರಿಕಾ ಕ್ರಿಕೆಟ್ ತಂಡವನ್ನು ಮತ್ತೆ ಪ್ರತಿನಿಧಿಸುವ ಅಭಿಲಾಷೆಯನ್ನು ಡಿವಿಲಿಯರ್ಸ್ ಪ್ರಕಟಿಸಿದ್ದರು. ಇದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ವಿಚಾರವನ್ನು ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಷರ್ ನಿನ್ನೆ ಘೋಷಿಸಿದ್ದಾರೆ. ಕೆಲ ಸಮಯಗಳಿಂದ ಕಳೆಗುಂದಿದಂತಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಈ ಸುದ್ದಿ ದೊಡ್ಡ ಬಲ ತರುವುದರಲ್ಲಿ ಅನುಮಾನವಿಲ್ಲ.

ಟಿ20 ಗೆ ಇನ್ನೇನು ಕೆಲವೇ ತಿಂಗಳು ಬಾಕಿಯಿದೆ. ಇಂತಾ ಸಂದರ್ಭದಲ್ಲಿ ತಂಡಕ್ಕೆ ಡಿವಿಲಿಯರ್ಸ್ ವಾಪಾಸಾಗಿರುವುದು ಆಫ್ರಿಕಾ ತಂಡಕ್ಕೂ ದೊಡ್ಡ ಶಕ್ತಿ ಸಿಕ್ಕಂತಾಗಿದೆ. ಮುಂದಿನ ವಿಶ್ವಕಪ್‌ನಲ್ಲಿ ಡಿವಿಲಿಯರ್ಸ್ ದ.ಆಫ್ರಿಕಾ ತಂಡವನ್ನು ಪ್ರತಿನಿಧಿಸುವುದು ಪಕ್ಕಾ ಆಗಿದೆ.

Story first published: Tuesday, February 18, 2020, 10:34 [IST]
Other articles published on Feb 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+