For Quick Alerts
ALLOW NOTIFICATIONS  
For Daily Alerts
 

IPL 2025: ಇವರೇ ನೋಡಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಪ್ಲೇಯರ್ಸ್‌

ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಮೆಗಾ ಲೀಗ್‌ನಲ್ಲಿ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರರ ಮೇಲೆ ನೆಟ್ಟಿರುತ್ತವೆ. ಈ ವೇಳೆ ಸ್ಟಾರ್ ಪ್ಲೇಯರ್‌ಗಳು ತಮ್ಮ ಧಮಾಕೆದಾರ್ ಪ್ರದರ್ಶನದಿಂದ ಅಭಿಮಾನಿಗಳ ಮನ ಗೆಲ್ಲುವುದು ಅಲ್ಲದೆ, ತಂಡಕ್ಕೆ ನೆರವಾಗುತ್ತಾರೆ. ಅಲ್ಲದೆ ತಾವು ಭರ್ಜರಿ ಪ್ರದರ್ಶನ ನೀಡಿ ತಮ್ಮ ಆಟಕ್ಕೆ ಗೌರವವನ್ನು ಪಡೆಯುತ್ತಾರೆ. ಈ ಲೀಗ್‌ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಬೀಗಿದ್ದಾರೆ.

ಪಂದ್ಯ ಶ್ರೇಷ್ಠಗಳನ್ನು ಪಡೆದ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್‌ ಎಬಿಡಿ ವಿಲಿಯರ್ಸ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಐಪಿಎಲ್‌ನಲ್ಲಿ ಫಿನಿಷರ್‌ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಅಬ್ಬರದ ಇನಿಂಗ್ಸ್‌ಗೆ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. ಇವರು ಐಪಿಎಲ್‌ ಇತಿಹಾಸದಲ್ಲಿ 25 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಆಡಿದ 170 ಇನಿಂಗ್ಸ್‌ಗಳಲ್ಲಿ 151.68 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 5162 ರನ್ ಗಳಿಸಿದ್ದಾರೆ.

AB de Villiers Tops IPL s All-Time Man of the Match Winners Rohit Kohli and Gayle Follow

ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಯೂನಿವರ್ಸಲ್‌ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್‌ ಅವರಿಗೆ ಎರಡನೇ ಸ್ಥಾನ. ಇವರು ಆಡಿದ 142 ಪಂದ್ಯಗಳಲ್ಲಿ 148.96 ಸ್ಟ್ರೈಕ್ ರೇಟ್‌ನಲ್ಲಿ 4965 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 31 ಅರ್ಧಶತಕ ಹಾಗೂ 6 ದಾಖಲೆಯ ಶತಕಗಳು ಸೇರಿವೆ. ಇವರ ಆಟಕ್ಕೆ 22 ಬಾರಿ ಪಂದ್ಯ ಶ್ರೆಷ್ಠ ಗರಿ ಸಂದಿದೆ.

ರೋಹಿತ್‌ಗೆ ಮೂರನೇ ಸ್ಥಾನ

ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಭಾರತೀಯ ಆಟಗಾರ ಎಂದರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ. ಇವರು ಅತಿ ಹೆಚ್ಚು ಮ್ಯಾನ್‌ ಆಫ್‌ ದಿ ಮ್ಯಾಚ್ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರ ಬುಟ್ಟಿಯಲ್ಲಿ ಒಟ್ಟು 19 ಪ್ರಶಸ್ತಿಗಳು ಸೇರಿವೆ. ಇವರು ಐಪಿಎಲ್‌ ಇತಿಹಾಸದ ಅತ್ಯಂತ ಯಶಸ್ವಿ ನಾಯಕ. ಇವರ ಮುಂದಾಳತ್ವದಲ್ಲಿ ಮುಂಬೈ ಇಂಡಿಯನ್ಸ್‌ ಐದು ಬಾರಿ ಐಪಿಎಲ್‌ ಪ್ರಶಸ್ತಿಯನ್ನು ಗೆದ್ದಿದೆ.

Take a Poll

ವಿರಾಟ್‌ಗೆ 18 ಪ್ರಶಸ್ತಿ

ಇನ್ನು ಆರ್‌ಸಿಬಿ ಪರ ಆಡುವ ವಿರಾಟ್‌ ಕೊಹ್ಲಿ ಸಹ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ. ಇವರು ಒಂದೇ ಫ್ರಾಂಚೈಸಿ ಪರ 18 ಆವೃತ್ತಿಗಳನ್ನು ಆಡಿರುವ ಹಿರಿಮೆಯನ್ನು ಹೊಂದಿದ್ದಾರೆ. ಇವರು 17 ಆವೃತ್ತಿಗಳಲ್ಲಿ ಬ್ಯಾಟ್ ಮಾಡಿ 8 ಸವಿರಕ್ಕೂ ಹೆಚ್ಚು ರನ್ ಸಿಡಿಸಿದ್ದಾರೆ. ಇವರ ಸೊಗಸಾದ ಆಟಕ್ಕೆ 18 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗಳು ಲಭಿಸಿವೆ.

ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್‌ ಡೇವಿಡ್ ವಾರ್ನರ್ ಅವರಿಗೂ ಸ್ಥಾನ. ಇವರು ಈ ಸಾಧನೆಯನ್ನು 18 ಮಾಡಿದ್ದಾರೆ. ಇವರು ಈ ಬಾರಿಯ ಐಪಿಎಲ್‌ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದಾರೆ. ಇವರ ಮುಂದಾಳತ್ವದಲ್ಲಿ ಸನ್‌ರೈಸರ್ಸ್ ತಂಡ 2016ರಲ್ಲಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು.

Story first published: Saturday, March 15, 2025, 17:14 [IST]
Other articles published on Mar 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+