For Quick Alerts
ALLOW NOTIFICATIONS  
For Daily Alerts
 

ವೈಭವ್ ಕ್ರಿಕೆಟ್‌ ವೃತ್ತಿಜೀವನ ಬಗ್ಗೆ ಎಬಿಡಿ ಅಚ್ಚರಿ ಭವಿಷ್ಯ; 'ಐಸ್‌ಕ್ರೀಮ್ ಸೀಕ್ರೆಟ್' ಬಿಚ್ಚಿಟ್ಟು ಕಾಲೆಳೆದ ಜಿತೇಶ್ ಶರ್ಮಾ

Vaibhav Suryavanshi: ಐಪಿಎಲ್ 19ನೇ ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗಲೇ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಗಗನಕ್ಕೇರಿವೆ. ಈ ವೇಳೆಯೇ ಇವರ ಕ್ರಿಕೆಟ್‌ ವೃತ್ತಿಜೀವನದ ಬಗ್ಗೆ ಆರ್‌ಸಿಬಿ ಮಾಜಿ ಸ್ಟಾರ್ ಆಟಗಾರ ಮಿಸ್ಟರ್ 360 ಎಬಿ ಡಿವಿಲಿಯರ್ಸ್‌ ಅವರು ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಕೇವಲ 14 ವರ್ಷದ ಈ ಆರಂಭಿಕ ಬ್ಯಾಟರ್, ಕಳೆದ ಸೀಸನ್‌ನಲ್ಲಿ ಚೊಚ್ಚಲ ಐಪಿಎಲ್ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದರು. ಬಳಿಕ ಅಂಡರ್ 19 ವಿಶ್ವಕಪ್‌ ಗೆಲ್ಲಿಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದರು. ಇವರ ಆಕ್ರಮಣಕಾರಿ ಆಟಕ್ಕೆ ಕ್ರಿಕೆಟ್‌ ದಿಗ್ಗಜರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬಂದಿತ್ತು. ಇದೀಗ ವೈಭವ್ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ ಪರ ಮತ್ತೆ ಮಿಂಚಲು ಸಜ್ಜಾಗಿದ್ದಾರೆ. ಈ ನಡುವೇಯೇ ಅವರ ಬಗ್ಗೆ ಎಬಿಡಿ ಮಹತ್ವದ ಹೇಳಿಕೆ ನೀಡಿ ಗಮನ ಸೆಳದಿದ್ದಾರೆ.

AB deVilliers Praises Vaibhav Suryavanshi Jitesh Sharma s Playful Dig Sparks Buzz Ahead of IPL 2026

ಈ ಎಡಗೈ ಬ್ಯಾಟರ್‌ನ ಸುತ್ತಲಿನ ಪ್ರಚಾರ ಮತ್ತು ನಿರೀಕ್ಷೆಗಳು ದೊಡ್ಡ ಮಟ್ಟಕ್ಕೆ ತಲುಪಿರುವ ಬೆನ್ನಲ್ಲೇ, ಅವರ ಬಗ್ಗೆ ಕ್ರಿಕೆಟ್‌ ದಿಗ್ಗಜ ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ್ದಾರೆ. ಜಿತೇಶ್ ಅವರು ವೈಭವ್ ಬಗ್ಗೆ ಕೇಳಿಬರುತ್ತಿರುವ ಭಾರಿ ಪ್ರಶಂಸೆಗೆ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿಶೇಷವಾಗಿ ವೈಭವ್ ಅವರ ಮೈದಾನದ ಹೊರಗಿನ ಶಿಸ್ತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವೈಭವ್ ಬ್ಯಾಟಿಂಗ್‌ ಬಗ್ಗೆ ಎಬಿಡಿ ಮೆಚ್ಚುಗೆ

ಎಬಿ ಡಿವಿಲಿಯರ್ಸ್ ಅವರು ವೈಭವ್ ಅವರ ಪ್ರಬುದ್ಧತೆ ಮತ್ತು ವೃತ್ತಿಪರತೆಯನ್ನು ಶ್ಲಾಘಿಸುವ ಮೂಲಕ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ, ಜಿತೇಶ್ ಶರ್ಮಾ ಅವರ ಪ್ರತಿಕ್ರಿಯೆಗಳು ಹಾಸ್ಯಮಯವಾಗಿದ್ದರೂ, ಸಹ ಪರೋಕ್ಷವಾಗಿ ಟೀಕಿಸುವಂತಿದ್ದವು.

"ವೈಭವ್ ಒಬ್ಬ ಅದ್ಭುತ ಆಟಗಾರ, ನಾನು ಅವರನ್ನು ಅಂಡರ್-19 ಪಂದ್ಯಗಳ ಸಮಯದಲ್ಲಿ ಗಮನಿಸಿದ್ದೇನೆ. ಒಮ್ಮೆ ನೀವು ಐಪಿಎಲ್ ಮತ್ತು ದೊಡ್ಡ ಮಟ್ಟದ ಲೀಗ್ ಕ್ರಿಕೆಟ್‌ನ ರುಚಿ ಕಂಡ ಮೇಲೆ, ಅದೇ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಅಂಡರ್ 19 ವಿಶ್ವಕಪ್‌ನಲ್ಲಿ ಅವರು ಆಡಿದ ರೀತಿ ನನಗೆ ತುಂಬಾ ಇಷ್ಟವಾಯಿತು. ಅವರ ವಯಸ್ಸಿಗೆ ಹೋಲಿಸಿದರೆ ಅವರು ಅಸಾಧಾರಣ ಪ್ರದರ್ಶನ ತೋರುತ್ತಾ ಬಂದಿದ್ದಾರೆ," ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರು ತಿಳಿಸಿದ್ದಾರೆ.

'ಬೌಲರ್‌ಗಳ ವಿರುದ್ಧ ಅಹಂಕಾರ ಪ್ರದರ್ಶಿಸಲಿಲ್ಲ'

"ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಆಟದ ಬಗ್ಗೆ ಮಾತನಾಡುತ್ತಿದ್ದೇನೆ. ಅವನು ತನ್ನ ಆಟದ ಯೋಜನೆಯನ್ನೇ ಅನುಸರಿಸಿದ. ಐಪಿಎಲ್‌ನಲ್ಲಿ ಹೇಗೆ ಆಡಿದ್ದರೋ, ಅದೇ ರೀತಿಯಲ್ಲಿಯೇ ಪ್ರದರ್ಶನ ತೋರಿದರು. ಅವನು ಮತ್ಯಾರೋ ಆಗಲು ಪ್ರಯತ್ನಿಸಲಿಲ್ಲ. ಬೌಲರ್‌ಗಳ ವಿರುದ್ಧ ಅಹಂಕಾರ ಪ್ರದರ್ಶಿಸಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವನು ಖಂಡಿತವಾಗಿಯೂ ವೃತ್ತಿಪರನಾಗುತ್ತಾನೆ," ಎಂದು ಹೇಳಿದರು.

ಆದರೆ, ಮೈದಾನದ ಹೊರಗಿನ ವೈಭವ್ ಅವರ ಹವ್ಯಾಸಗಳ ಬಗ್ಗೆ ಜಿತೇಶ್ ಅವರಿಗೆ ಅಷ್ಟೊಂದು ನಂಬಿಕೆ ಇಲ್ಲವಂತೆ. ಈ ಯುವ ಬ್ಯಾಟರ್ ಜೊತೆಗಿನ ತಮ್ಮ ವೈಯಕ್ತಿಕ ಒಡನಾಟದ ಘಟನೆಗಳನ್ನು ಹಂಚಿಕೊಂಡ ಅವರು, ಎಷ್ಟು ಬಾರಿ ಬುದ್ಧಿ ಹೇಳಿದರೂ ಕೇಳದೆ ವೈಭವ್ ತಡರಾತ್ರಿಯಲ್ಲಿ ಐಸ್‌ಕ್ರೀಮ್ ತಿನ್ನುವುದನ್ನು ಮುಂದುವರಿಸುತ್ತಿದ್ದಾರೆ ಎಂಬ ರಹಸ್ಯವನ್ನು ಜಿತೇಶ್ ಬಿಚ್ಚಿಟ್ಟಿದ್ದಾರೆ.

"ಅವನು ವೃತ್ತಿಪರನಲ್ಲ, ಅದನ್ನು ನಾನು ಖಂಡಿತವಾಗಿ ಹೇಳಬಲ್ಲೆ" ಎಂದು ಜಿತೇಶ್ ನಗುತ್ತಾ ಹೇಳಿದರು. "ಪ್ರತಿಯೊಬ್ಬರೂ ಅವನನ್ನು ವೃತ್ತಿಪರನನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಎಂದಿಗೂ ಹಾಗಾಗುತ್ತಾರೆ ಎಂದು ನನಗನ್ನಿಸುವುದಿಲ್ಲ," ಎಂದು ತಮಾಷೆ ಮಾಡುತ್ತಲೇ ನಗುಮುಖದಿಂದ ಹೇಳಿದರು. ಹೀಗೆ ಜಿತೇಶ್ ಶರ್ಮಾ ಅವರು ವೈಭವ್ ಸೂರ್ಯವಂಶಿ ಆಟದ ಬಗ್ಗೆ ತಮಾಷೆ ಮಾಡುತ್ತಾ ತೆಗಳಿದರೆ, ಎಬಿ ಡಿವಿಲಿಯರ್ಸ್‌ ಮಾತ್ರ ಅವರ ಆಟವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

Story first published: Monday, March 23, 2026, 15:17 [IST]
Other articles published on Mar 23, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+