Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್‌ ಕೊಹ್ಲಿ ಬಗ್ಗೆ ಎಬಿಡಿ ಹೇಳಿದ್ದೇನು? ಈ ಆವೃತ್ತಿಯಲ್ಲಿ ಕೊಹ್ಲಿ ಹೇಗೆ ಆಡಬೇಕು?

ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಮೆಗಾ ಲೀಗ್‌ನ ಕಾರ್ಯಗಳು ಈಗ ಭರದಿಂದ ಸಾಗಿವೆ. ಎಲ್ಲ ತಂಡಗಳು ತಮ್ಮ ತಮ್ಮ ಅನ್‌ಬಾಕ್ಸಿಂಗ್ ಈವೇಂಟ್‌ಗಳನ್ನು ಮಾಡಿಕೊಂಡಿವೆ. ಆರ್‌ಸಿಬಿ ಸಹ ಇತ್ತೀಚಿಗೆ ತನ್ನ ಅನ್‌ ಬಾಕ್ಸಿಂಗ್ ಇವೆಂಟ್‌ನ್ನು ಭರ್ಜರಿಯಾಗಿ ಮಾಡಿ ಮುಗಿಸಿತು. ಈ ವೇಳೆ ತಂಡದ ಶಕ್ತಿಯನ್ನು ಅನವಾವರಣ ಗೊಳಿಸಲಾಯಿತು. ಅನ್‌ಬಾಕ್ಸ್ ವೇಳೆ ತಂಡದ ಪ್ರತಿ ಆಟಗಾರರೂ ಸಹ ವೇದಿಕೆ ಮೇಲೆ ಹಾಜರಿದ್ದರು.

17 ಆವೃತ್ತಿಗಳಲ್ಲಿ ಆಡಿರುವ ಆರ್‌ಸಿಬಿ ಒಮ್ಮೆಯೂ ಕಪ್‌ ಗೆದ್ದಿಲ್ಲ. ಹೀಗಾಗಿ ಈ ಬಾರಿ ಈ ತಂಡದ ಮೇಲೆ ಹೆಚ್ಚಿನ ಒತ್ತಡವಿದೆ. ಈ ಬಾರಿ ತಂಡ ಹೆಚ್ಚು ಬ್ಯಾಲೆನ್ಸ್ ಆಗಿ ಕಾಣಿಸಿಕೊಳ್ಳುತ್ತಿದೆ. ತಂಡದಲ್ಲಿ ಹಲವಾರು ಬದಲಾವಣೆಗಳು ನೋಡಲು ಸಿಕ್ಕಿವೆ. ಈ ಬಾರಿ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ. 18ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುನ್ನವೇ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್‌ ತಂಡದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 18ನೇ ಆವೃತ್ತಿ ಆರ್‌ಸಿಬಿಗೆ ಉತ್ತಮವಾಗಿರಲಿದೆ ಎಂಬ ವಿಶ್ವಾಸವನ್ನು ಎಬಿಡಿ ಹೊಂದಿದ್ದಾರೆ. ಅಲ್ಲದೆ ಈ ಬಾರಿ ಕಪ್‌ ಗೆಲ್ಲುವ ಅವಕಾಶ ಇರುವುದಾಗಿ ತಿಳಿಸಿದ್ದಾರೆ.

ABD Advice to Virat Kohli Play Smart Cricket in IPL 2025 Phil Salt Take the Attacking Role

ಪಾಕಿಸ್ತಾನ ಆಯೋಜಿಸಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಅಮೋಘ ಫಾರ್ಮ್‌ನಲ್ಲಿದ್ದರು. ಇದೇ ಲಯವನ್ನು ವಿರಾಟ್‌ ಮುಂದುವರೆಸಲಿ. ಆಕ್ರಮಣಕಾರಿ ಆಟಗಾರ ಫಿಲ್‌ ಸಾಲ್ಟ್‌ ಅವರೊಂದಿಗೆ ಆಡುವುದರಿಂದ ವಿರಾಟ್‌ ಅವರ ಸ್ಟ್ರೈಕ್‌ ರೇಟ್‌ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂದಿನ ಐಪಿಎಲ್‌ನಲ್ಲಿ ವಿರಾಟ್ ತಮ್ಮ ಸ್ಟ್ರೈಕ್‌ ರೇಟ್‌ ಹೆಚ್ಚಿಸುವ ಬದಲು ಸ್ಮಾರ್ಟ್‌ ಕ್ರಿಕೆಟ್ ಆಡಿದ್ರೆ ಬೆಸ್ಟ್‌ ಎಂದು ಎಬಿಡಿ ನಂಬಿದ್ದಾರೆ.

ಫಿಲ್‌ ಸಾಲ್ಟ್‌ ಆರಂಭಿಕರಾಗಿ ಕಣಕ್ಕೆ ಇಳಿಯುವುದಿಂದ ವಿರಾಟ್ ಕೊಹ್ಲಿ ಅವರ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಎಂಬ ನಂಬಿಕೆಯನ್ನು ಎಬಿಡಿ ಹೊಂದಿದ್ದಾರೆ.

ABD Advice to Virat Kohli Play Smart Cricket in IPL 2025 Phil Salt Take the Attacking Role

ವಿರಾಟ್‌ ಕೊಹ್ಲಿ ಸದ್ಯ ತಮ್ಮ ಆಟವನ್ನು ಆನಂದಿಸುತ್ತಿದ್ದಾರೆ ಎಂದು ಎಬಿಡಿ ತಿಳಿಸಿದ್ದಾರೆ. ಸಾಲ್ಟ್ ಒಬ್ಬ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಮತ್ತು ವಿರಾಟ್‌ ಮೇಲಿನ ಒತ್ತಡವನ್ನು ಅವರು ಕಡಿಮೆ ಮಾಡುತ್ತಾರೆ ಎಂದು ಅವರು ಭಾವಿಸುತ್ತಾರೆ.

Take a Poll

ವಿರಾಟ್ ಐಪಿಎಲ್‌ನಲ್ಲಿ ಇಷ್ಟು ವರ್ಷಗಳಿಂದ ಆಡುತ್ತಾ ಬಂದಿರುವ ಆಟವನ್ನೇ ಮುಂದುವರೆಸಲಿ. ಕೊಹ್ಲಿಗೆ ಯಾವಾಗ ಒತ್ತಡ ಹೇರಬೇಕು ಮತ್ತು ಯಾವಾಗ ಕಡಿಮೆ ಮಾಡಬೇಕು. ಕೊಹ್ಲಿ ತಂಡವನ್ನು ಬ್ಯಾಟಿಂಗ್‌ನಲ್ಲಿ ಈ ಬಾರಿ ಬೆನ್ನೆಲುಬಾಗಿ ನಿಂತು ನಡೆಸಬೇಕು. ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಿರಾಟ್ ಅವರ ಮೇಲಿದೆ ಎಂದು ಎಬಿಡಿ ಸ್ಪಷ್ಟ ಪಡಿಸಿದ್ದಾರೆ.

Story first published: Tuesday, March 18, 2025, 23:06 [IST]
Other articles published on Mar 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+