ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಬಿ ಡಿವಿಲಿಯರ್ಸ್ ವಿದಾಯ


ನವದೆಹಲಿ, ಮೇ 23: ಕ್ರಿಕೆಟ್ ಪ್ರೀಮಿಗಳಿಗೆ ಇದು ನಿಜಕ್ಕೂ ಬೇಸರದ ಸಂಗತಿ. ಆರ್ಸಿಬಿ ತಂಡದಲ್ಲಿ ಮಿಂಚಿದ್ದ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಬ್ಯಟ್ಸ್ಮನ್ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಬುಧವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಎಬಿಡಿ ಇನ್ನುಮುಂದೆ ದೇಶಿ ಪಂದ್ಯವನ್ನು ಹೊರತುಪಡಿಸಿ ಅಂತರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್ ಆಟಕ್ಕೆ ವಿದಾಯ ಹೇಳಿದ್ದಾರೆ.
34ರ ಹರೆಯದ ಎಬಿಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈವರೆಗೆ 114 ಟೆಸ್ಟ್, 228 ಏಕದಿನ ಮತ್ತು 78 ಟಿ-20 ಪಂದ್ಯಗಳನ್ನಾಡಿದ್ದಾರೆ. ಸುಮಾರು 14 ವರ್ಷಗಳ ಕಾಲ ವೃತ್ತಿ ಬದುಕನ್ನು ಕ್ರಿಕೆಟ್ ಮೈದಾನದಲ್ಲಿ ಕಳೆದಿರುವ ಸ್ಫೋಟಕ ಬ್ಯಾಟ್ಸ್ಮನ್ ಡಿವಿಲಿಯರ್ಸ್, ನಿವೃತ್ತಿ ನೀಡಲು ಇದು ಸಕಾಲ ಎಂದಿದ್ದಾರೆ.
ನಿವೃತ್ತಿ ಘೋಷಿಸಿದ ಬಳಿಕ ಮಾತನಾಡಿರುವ ಎಬಿಡಿ, 'ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಾನು ಈಗಿಂದೀಗಲೇ ದೂರ ಸರಿಯುತ್ತಿದ್ದೇನೆ. 114 ಟೆಸ್ಟ್, 228 ಏಕದಿನ ಮತ್ತು 78 ಟಿ-20 ಪಂದ್ಯಗಳನ್ನು ಆಡಿದ್ದೇನೆ. ಕ್ರಿಕೆಟ್ ಬದುಕಿನಿಂದ ಕೆಳಗಿಳಿಯಲು ಇದು ಸರಿಯಾದ ಕಾಲ. ಹಿಂದೆ ಸರಿಯಬೇಕಾದುದು ನನ್ನ ಸರದಿಯೂ ಕೂಡ. ನಾನೀಗ ದಣಿದಿದ್ದೇನೆ' ಎಂದು ಭಾವನಾತ್ಮಕವಾಗಿ ನುಡಿದರು.
'ಅಂತಾರಾಷ್ಟ್ರೀಯ ಪಂದ್ಯಗಳನ್ನು ಇನ್ನು ಆಡುವ ಯೋಚನೆಯಿಲ್ಲ. ಆದರೆ ಸೌತಾಫ್ರಿಕಾದ ಖ್ಯಾತ ಕ್ರಿಕೆಟ್ ಫ್ರಾಂಚೈಸಿ 'ಟೈಟಾನ್ಸ್' ನಡೆಸುವ ಪಂದ್ಯಗಳಿಗೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದ್ದೇನೆ. ನೆಚ್ಚಿನ ಸ್ನೇಹಿತ ಫಾ ಡುಪ್ಲೆಸಿಸ್ ಮತ್ತು ನನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಯಾವತ್ತೂ ಬೆಂಬಲವಾಗಿ ಇರಲಿದ್ದೇನೆ' ಎಂದು ಎಬಿಡಿ ತಿಳಿಸಿದರು.
ಐಪಿಎಲ್ ಸಮಯದಲ್ಲಿ ಹೆಚ್ಚು ಮಿಂಚಿದ್ದ ಎಬಿಡಿ ನಿವೃತ್ತಿ ನಿಜಕ್ಕೂ ಕ್ರಿಕೆಟ್ ಪ್ರೇಮಿಗಳಿಗೆ ಅಘಾತ ತಂದಿದೆ. ಆರ್ಸಿಬಿ ತಂಡದಲ್ಲಿ ಆಡಿದ್ದ ಡಿವಿಲಿಯರ್ಸ್ ಇತ್ತೀಚೆಗೆ ಸಿಕ್ಸ್ ಲೈನ್ ನಲ್ಲಿ ಅದ್ಭುತ ಕ್ಯಾಚೊಂದನ್ನು ಹಿಡಿದು ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಎಂದೆಲ್ಲ ಅಭಿಮಾನಿಗಳಿಂದ ಕರೆಸಿಕೊಂಡು ಸಕ್ಕತ್ ಫೇಮಸ್ ಆಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications