For Quick Alerts
ALLOW NOTIFICATIONS  
For Daily Alerts
 

ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದರೂ ಇಲ್ಲ ಟೆಸ್ಟ್ ತಂಡದಲ್ಲಿ ಸ್ಥಾನ

ಭಾರತ ಹಾಗೂ ನ್ಯುಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ ರೋಹಿತ್ ಪಡೆಯನ್ನು ಘೋಷಿಸಲಾಗಿದೆ. ಬಾಂಗ್ಲಾ ವಿರುದ್ಧ ಕಣಕ್ಕೆ ಇಳಿದ ಆಟಗಾರರಿಗೆ ಮಣೆ ಹಾಕಲಾಗಿದ್ದು, ಯುವ ಆಟಗಾರರನ್ನು ಕಡೆಗಣಿಸಲಾಗಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಪರ ಆಡುವ ಕನಸು ಹೊಂದಿದ್ದ ಒಬ್ಬ ಪ್ಲೇಯರ್‌ಗೆ ಇನ್ನು ಅವಕಾಶ ಸಿಕ್ಕಿಲ್ಲ.

ದೇಶೀಯ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದರೂ ಸಹ ಅವರನ್ನು ಬಿಸಿಸಿಐ ಆಯ್ಕೆ ಮಾಡಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಸಿಕ್ಕ ಅವಕಾಶದಲ್ಲಿ ಅಬ್ಬರದ ಪ್ರದರ್ಶನ ನೀಡಿ ಪದೆ ಪದೆ ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿದರೂ ಸಹ ಅವಕಾಶ ವಂಚಿತನಾಗಿದ್ದಾರೆ. ನ್ಯುಜಿಲೆಂಡ್ ವಿರುದ್ಧ ಸರಣಿಯಲ್ಲಿ ಇವರನ್ನು ಪರಿಗಣಿಸಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಅದು ನುಚ್ಚ ನೂರಾಗಿದೆ.

Abhimanyu Easwaran Snubbed Again as India Announces Squad for Test Series Against New Zealand

ಅವಕಾಶ ವಂಚಿನ ಓಪನರ್‌

ಅವಕಾಶದಿಂದ ವಂಚಿರಾಗಿರುವ ಈ ಆಟಗಾರ ಬೇರೆ ಯಾರೂ ಅಲ್ಲ, ಅಭಿಮನ್ಯು ಈಶ್ವರನ್. ಅಭಿಮನ್ಯು ಈಶ್ವರನ್ ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಫಾರ್ಮ್‌ ತೋರಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ತಮ್ಮನ್ನು ಪರಿಗಣಿಸಿ ಎಂದು ಒತ್ತಾಯಿಸಿದ್ದರು. ಅಭಿಮನ್ಯು ಈಶ್ವರನ್ ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಅಭಿಮನ್ಯ ಈಶ್ವರನ್ ಆರ್ಭಟ ಜೋರಾಗಿದೆ. ಇವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 98 ಪಂದ್ಯಗಳ 167 ಇನ್ನಿಂಗ್ಸ್‌ಗಳಲ್ಲಿ 49.38ರ ಸರಾಸರಿಯಲ್ಲಿ 7506 ರನ್ ಸಿಡಿಸಿದ್ದಾರೆ. ಇದರಲ್ಲಿ 26 ಶತಕ ಮತ್ತು 29 ಅರ್ಧ ಶತಕಗಳ ಸೇರಿವೆ.

ಇರಾನಿ ಕಪ್ ನಲ್ಲೂ ಅಭಿಮನ್ಯು ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಈ ಪ್ರದರ್ಶನ ಕಂಡವರು ಇವರಿಗೆ ಈ ಬಾರಿ ಅವಕಾಶ ಲಭಿಸುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಇವರಿಗೆ ಇನ್ನು ಟೀಮ್ ಇಂಡಿಯಾ ಜೆರ್ಸಿ ತೊಡುವ ಅವಕಾಶ ಲಭಿಸಲೇ ಇಲ್ಲ.

Abhimanyu Easwaran Snubbed Again as India Announces Squad for Test Series Against New Zealand

ಮುಂದಿನ ತಿಂಗಳು ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ರೋಹಿತ್ ಶರ್ಮಾ ಆಡುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಅಭಿಮನ್ಯು ಈಶ್ವರನ್ ಈ ಸ್ಲಾಟ್‌ ಮೇಲೆ ಕರ್ಚಿಫ್‌ ಹಾಕಿದ್ದಾರೆ. ಆಸೀಸ್‌ ವಿರುದ್ಧ ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಾದ್ರೂ ಇವರಿಗೆ ಅವಕಾಶ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ. ಇವರು ಯಾವುದೇ ಪಿಚ್‌ನಲ್ಲಿ ಕಲಾತ್ಮಕ ಆಟವನ್ನು ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ನ್ಯುಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

Story first published: Saturday, October 12, 2024, 18:05 [IST]
Other articles published on Oct 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+