Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IML 2025: ಕರ್ನಾಟಕದ ಅಭಿಮನ್ಯು ಮಿಥುನ್‌, ಸ್ಟುವರ್ಟ್‌ ಅಬ್ಬರ: ಭಾರತ ಮಾಸ್ಟರ್ಸ್‌ಗೆ ರೋಚಕ ಜಯ

ಮುಂಬೈನಲ್ಲಿ ನಡೆಯುತ್ತಿರುವ ಇಂಟರ್‌ನ್ಯಾಷನಲ್‌ ಮಾಸ್ಟರ್ಸ್ ಲೀಗ್‌ನಲ್ಲಿ ಭಾರತ, ಶ್ರೀಲಂಕಾ ವಿರುದ್ಧ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಭಾರತದ ಪರ ಕರ್ನಾಟಕದ ಸ್ಟಾರ್ ಆಟಗಾರರಾ ಅಭಿಮನ್ಯು ಮಿಥನ್‌ ಹಾಗೂ ಸ್ಟುವರ್ಟ್‌ ಬಿನ್ನಿ ಅಮೋಘ ಆಟದ ಪ್ರದರ್ಶನ ನೀಡಿ ಜಯದಲ್ಲಿ ಮಿಂಚಿದರು. ಮಿಥುನ್‌ ಕೊನೆಯ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದರೆ, ಸ್ಟುವರ್ಟ್‌ ಬಿನ್ನಿ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರು.

ಮೊದಲು ಬ್ಯಾಟ್ ಮಾಡಿದ ಭಾರತ ಮಾಸ್ಟರ್ಸ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ ಗೆ 222 ರನ್‌ ಸೇರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಶ್ರೀಲಂಕಾ ಮಾಸ್ಟರ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 218 ರನ್‌ ಸೇರಿಸಿತು. ಈ ಮೂಲಕ ಭಾರತ ಮೊದಲ ಗೆಲುವು ದಾಖಲಿಸಿತು.

Karnataka Stars Abhimanyu Mithun Stuart Binny Shine in India Masters Thrilling Win Over Sri Lanka in IML 2025

ರೋಚಕ ಕೊನೆಯ ಓವರ್‌

ಕೊನೆಯ ಓವರ್‌ನಲ್ಲಿ ಭಾರತ ಮಾಸ್ಟರ್ಸ್ 9 ರನ್‌ ಡಿಫೆಂಡ್‌ ಮಾಡಿಕೊಳ್ಳಬೇಕಿತ್ತು. ಈ ಕಾರ್ಯವನ್ನು ಕರ್ನಾಟಕದ ಅಭಿಮನ್ಯು ಮಿಥುನ್‌ ಅಮೋಘವಾಗಿ ಮಾಡಿದರು. ಇವರು ಮೊದಲ ಎಸೆತದಲ್ಲಿ 1 ರನ್‌, ಎರಡನೇ ಎಸೆತದಲ್ಲಿ 1 ರನ್‌, ಮೂರನೇ ಎಸೆತದಲ್ಲಿ ವಿಕೆಟ್‌ ಪಡೆದರು. ನಾಲ್ಕನೇ ಎಸೆತದಲ್ಲಿ 1 ರನ್‌, ಐದನೇ ಎಸೆತದಲ್ಲಿ ಔಟ್‌. ಕೊನೆಯ ಓವರ್‌ನಲ್ಲಿ ಒಂದು ರನ್‌ ನೀಡಿ ಜಯದಲ್ಲಿ ಅಬ್ಬರಿಸಿತು.

ಶ್ರೀಲಂಕಾ ಮಾಸ್ಟರ್ಸ್‌ ಪರ ಆರಂಭಿಕರಾದ ಕುಮಾರ್ ಸಂಗಾಕ್ಕರ್ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 51 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಉಳಿದಂತೆ ಜೀವನ್ ಮೆಂಡೀಸ್ 42, ಅಸೇಲ ಗುಣರತ್ನೆ 37, ಲಹೀರು ತಿರುಮನ್ನೆ 24, ಇಸ್ರು ಉದಾನ 23 ರನ್‌ ಸಿಡಿಸಿದರು.

ಭಾರತ ಮಾಸ್ಟರ್ಸ್‌ ಪರ ಇರ್ಫಾನ್ ಪಠಾಣ್‌ 3, ಧವಳ್ ಕುಲ್ಕಕರ್ಣಿ, ಅಭಿಮನ್ಯು ಮಿಥುನ್‌, ವಿನಯ್ ಕುಮಾರ್ ತಲಾ ಎರಡು ವಿಕೆಟ್‌ ಕಬಳಿಸಿದರು.

Karnataka Stars Abhimanyu Mithun Stuart Binny Shine in India Masters Thrilling Win Over Sri Lanka in IML 2025

ಸ್ಟುವರ್ಟ್‌ ಬಿನ್ನಿ ಅರ್ಧಶತಕ

ಮೊದಲು ಬ್ಯಾಟ್ ಮಾಡಿದ ಭಾರತದ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಅಂಬಟಿ ರಾಯುಡು (5), ನಾಯಕ ಸಚಿನ್ ತೆಂಡೂಲ್ಕರ್ (10) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗುರುಕೀರ್ತ ಸಿಂಗ್ ಉತ್ತಮ ಬ್ಯಾಟಿಂಗ್ ನಡೆಸಿದರು. ಇವರು 32 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 44 ರನ್‌ ಸಿಡಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸ್ಟುವರ್ಟ್‌ ಬಿನ್ನಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 31 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಹಾಯದಿಂದ 68 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಸಿಕ್ಸರ್‌ ಸಿಂಗ್ ಖ್ಯಾತಿಯ ಯುವರಾಜ್ ಸಿಂಗ್ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ 31 ರನ್‌ ಬಾರಿಸಿ ಔಟ್ ಆದರು. ಯೂಸುಫ್ ಫಠಾಣ್ ತಮ್ಮ ನೈಜ ಆಟವನ್ನು ಆಡಿದರು. ಇವರು 22 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ ಸಹಾಯದಿಂದ 56 ರನ್‌ ಬಾರಿಸಿ ಮಿಂಚಿದರು.

ಶ್ರೀಲಂಕಾದ ಪರ ಸುರಂಗ ಲಕ್ಮಲ್‌ 2, ಇಸ್ರು ಉದಾನ್ ಹಾಗೂ ಚತುರಂಗ್ ಡಿಸಿಲ್ವಾ ತಲಾ ಒಂದು ವಿಕೆಟ್ ಕಬಳಿಸಿದರು.

Story first published: Saturday, February 22, 2025, 23:59 [IST]
Other articles published on Feb 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+