ಸದ್ಯ ಟೀಮ್ ಇಂಡಿಯಾ ಆಟಗಾರರು ಐಪಿಎಲ್‌ನಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಈ ಲೀಗ್ ಮುಗಿದ ಬಳಿಕ ಟೀಮ್ ಇಂಡಿಯಾ ಸಾಲು ಸಾಲು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಪ್ರಸಕ್ತ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಟೀಮ್ ಇಂಡಿಯಾ ಫೈನಲ್ ತಲುಪಲು ವಿಫಲವಾಗಿದೆ. ಅಲ್ಲದೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ತವರಿನಲ್ಲಿ ಟೀಮ್ ಇಂಡಿಯಾ 0-3 ರಿಂದ ಸರಣಿ ಸೋಲು ಕಂಡಿದೆ. ಇದಾದ ಬಳಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಕೈ ಗೊಂಡಿದೆ. ಈ ವೇಳೆಯೂ ಟೀಮ್ ಇಂಡಿಯಾ ಪ್ರದರ್ಶನ ಸ್ಥಿರವಾಗಿರಲಿಲ್ಲ.
ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದ ಮೊದಲ ಟೆಸ್ಟ್‌ನಲ್ಲಿ ಗೆಲುವು ದಾಖಲಿಸಿದ್ದು ಬಿಟ್ಟರೆ, ಉಳಿದೆಲ್ಲಕಡೆ ಸೋಲು ತಂಡವನ್ನು ಅಪ್ಪಿಕೊಂಡಿದೆ. ಈ ಸರಣಿ ಸೋಲುಗಳ ಬೆನ್ನಲ್ಲೆ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳ ಮೇಲೆ ಪ್ರಶ್ನೆಗಳು ಎದ್ದಿದ್ದವು. ಇದಾದ ಬಳಿಕ ಟೀಮ್ ಇಂಡಿಯಾವನ್ನು ಹಲವು ಜನರು ಟೀಕಿಸಿದ್ದಾರೆ. ಈಗ ಬಿಸಿಸಿಐ ದೊಡ್ಡ ಕ್ರಮಕ್ಕೆ ಮುಂದಾಗಿದೆ.

ಭಾರತ ತಂಡದ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಹಾಗೂ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರನ್ನು ವಜಾಗೊಳಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಅಭಿಷೇಕ್ ನಾಯರ್ ಕಳೆದ 8 ತಿಂಗಳ ಹಿಂದೆ ಬ್ಯಾಟಿಂಗ್ ಕೋಚ್ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಇವರ ಅವಧಿಯಲ್ಲಿ ಬ್ಯಾಟರ್‌ಗಳ ಹೀನಾಯ ಪ್ರದರ್ಶನ ನೀಡಿದರು. ಇವರ ಕಾರ್ಯದ ಮೇಲೆ ಸಾಲು ಸಾಲು ಪ್ರಶ್ನೆಗಳು ಏಳಲು ಆರಂಭವಾದವು.
ಈಗಾಗಲೇ ಬಿಸಿಸಿಐ ಹೊಸ ಬ್ಯಾಟಿಂಗ್ ಕೋಚ್ ಆಗಿ ಸೀತಾಂಶು ಕೊಟಕ್ ಅವರನ್ನು ನೇಮಕ ಮಾಡಿದೆ. ಹೀಗಾಗಿ ಮತ್ತೆ ಬದಲಾವಣೆ ಮಾಡುವ ಸಾಧ್ಯತೆ ತೀರಾ ಕಡಿಮೆ. ರಯಾನ್ ಟೆನ್ ಡೋಸ್ಚೇಟ್ ಸಹಾಯಕ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಪಾತ್ರದಲ್ಲಿ ಬದಲಾವಣೆ ಆಗಬಹುದು. ಇವರು ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಳ್ಳಬಹುದು. ಈಗಾ ಕಾರ್ಯ ನಿರ್ವಹಿಸುತ್ತಿದ್ದ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರನ್ನೂ ತೆಗೆದು ಹಾಕಲಾಗಿದೆ. ಆದರೆ ಇವರ ಸ್ಥಾನಕ್ಕೆ ಬದಲ ಆಟಗಾರರನ್ನು ಇನ್ನು ಘೋಷಣೆ ಮಾಡಿಲ್ಲ.
ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ಅವರ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ತರಬೇತುದಾರ ಆಡ್ರಿಯನ್ ಲೆ ರೌಕ್ಸ್ ನೇಮಿಸುವ ಸಾಧ್ಯತೆ ಇದೆ. ಇವರು ಸದ್ಯ ಪಂಜಾಬ್ ಕಿಂಗ್ಸ್ ತಂಡದ ಪರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಐಪಿಎಲ್ ಮುಗಿದ ಬಳಿಕ ಜೂನ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳಸಲಿದೆ. ಇದಕ್ಕೂ ಮೊದಲು ಬಿಸಿಸಿಐ ಕೋಚಿಂಗ್ ಸಿಬ್ಬಂದಿಯ ಬದಲಾವಣೆ ಮಾಡಿದೆ. ಈ ಸರಣಿಗಾಗಿ ಭಾರತ ತಂಡವನ್ನು ಮೇ ಕೊನೆಯ ವಾರದಲ್ಲಿ ಘೋಷಿಸುವ ಸಾಧ್ಯತೆ ಇದೆ. ಇಂಗ್ಲೆಂಡ್ ಪ್ರವಾಸದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಆಡಲಿದೆ.