ಹೈದರಾಬಾದ್, ಡೆಲ್ಲಿ ವಿರುದ್ಧ ಗೆಲ್ಲಲು ಏನು ಕಾರಣ?
19ನೇ ಆವೃತ್ತಿ ಐಪಿಎಲ್‌ನ 31ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಆಸೆ ಉಭಯ ತಂಡಗಳದ್ದೂ ಆಗಿತ್ತು. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಮಾಡಲು ಮುಂದಾಯಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಆರಂಭಿಕ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಸ್ಫೋಟಕ ಆಟವಾಡಿದರು. ಅಭಿಷೇಕ್ ತಮ್ಮ ವೃತ್ತಿ ಜೀವನದ 2ನೇ ಐಪಿಎಲ್ ಶತಕ ಬಾರಿಸಿದರು. ಕ್ಲಾಸೆನ್ ಸಹ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಅಂತಿಮವಾಗಿ ಹೈದರಾಬಾದ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 242 ರನ್ ಸೇರಿಸಿತು.

ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ನಿತೀಶ್ ರಾಣಾ ಅರ್ಧಶತಕ ಬಾರಿಸಿದರು. ಉಳಿದಂತೆ ಕೆಎಲ್ ರಾಹುಲ್ 37, ಸಮೀರ್ ರಿಜ್ವಿ 41, ಟ್ರಿಸ್ಟನ್ ಸ್ಟಬ್ಸ್ 27 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಡಿಸಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 195 ರನ್ ಸೇರಿಸಿ ಸೋಲು ಕಂಡಿತು.
ಗೆಲುವಿಗೆ ಇವರ ಆಟವೇ ಕಾರಣ
ಈ ಪಂದ್ಯದಲ್ಲಿ ಸನ್ ತಂಡ ದೊಡ್ಡ ಅಂತರದಿಂದ ಗೆಲ್ಲಲು ಹಲವು ಆಟಗಾರರ ಕಾಣಿಕೆ ಇದೆ. ಅದರಲ್ಲಿ ವೇಗದ ಬೌಲರ್ ಇಶಾನ್ ಮಲಿಂಗ್ ಅವರ ಕಾಣಿಕೆ ಸಹ ದೊಡ್ಡದು. ಇವರು ಇನಿಂಗ್ಸ್‌ನ 11ನೇ ಓವರ್‌ನ ಮೊದಲ ಎಸೆತದಲ್ಲಿ ಸ್ಥಿರ ಬ್ಯಾಟಿಂಗ್ ನಡೆಸುತ್ತಿದ್ದ ರಾಣಾ ಹಾಗೂ ಎರಡನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರಿಗೆ ಖೆಡ್ಡಾ ತೋಡಿದರು. ಇದು ಸಹ ಪಂದ್ಯ ಎಸ್‌ಆರ್‌ಎಚ್ ಗೆಲ್ಲಲು ಪ್ರಮುಖ ಕಾರಣವಾಯಿತು. ಅಲ್ಲದೆ ಮಲಿಂಗ 4 ಓವರ್ ಬೌಲ್ ಮಾಡಿ 32 ರನ್ ನೀಡಿ 4 ವಿಕೆಟ್ ಪಡೆದರು.

ಆದರೆ ಸನ್ ತಂಡ ಇಷ್ಟು ದೊಡ್ಡ ಅಂತರದಿಂದ ಗೆಲುವು ದಾಖಲಿಸಲು ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಕಾರಣ. ಇವರು ತಮ್ಮ ನೈಜ ಆಟವನ್ನು ಆಡಿ ಶತಕ ಸಿಡಿಸಿದರು. ಇವರು 68 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್ ಸಹಾಯದಿಂದ ಅಜೇಯ 135 ರನ್ ಸಿಡಿಸಿ ಅಬ್ಬರಿಸಿದರು. ಇವರ ದೊಡ್ಡ ಇನಿಂಗ್ಸ್‌ನಿಂದ ಹೈದರಾಬಾದ್ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು. ಅಲ್ಲದೆ 47 ರನ್‌ಗಳಿಂದ ಗೆದ್ದ ರನ್ ರೇಟ್ ಸುಧಾರಿಸಿಕೊಂಡು ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಲು ನೆರವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications