For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾಕ್ಕೆ ಡವಡವ ಶುರು: ಅಭಿಷೇಕ್‌ ಶರ್ಮಾ 16 ಸಿಕ್ಸರ್‌ ವೀರಾವೇಶದ ಆಟ

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸದ್ಯ ಏಕದಿನ ಪಂದ್ಯಗಳನ್ನು ಆಡುತ್ತಿದೆ. ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಸರಣಿ ಮುಗಿದ ಬಳಿಕ ಟಿ20 ಸರಣಿ ಆರಂಭವಾಗುತ್ತವೆ. ಈ ಸರಣಿ ಆರಂಭಕ್ಕೂ ಮುನ್ನವೇ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಭಯ ಆರಂಭವಾಗಿದೆ. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ದೇಶೀಯ ಟೂರ್ನಿಯಲ್ಲಿ ಅಬ್ಬರದ ಶತಕ ಸಿಡಿಸಿದ್ದಾರೆ. ಈ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಭಾನುವಾರ ಸೈಯುದ್‌ ಮುಷ್ತಾಕ್ ಅಲಿ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ನಡೆದವು. ಈ ವೇಳೆ ಪಂಜಾಬ್ ಹಾಗೂ ಬಂಗಾಳ ತಂಡಗಳು ಕಾದಾಟ ನಡೆಸಿದವು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡದ ಪರ ನಾಯಕ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ನಡೆಸಿ, ಎದುರಾಳಿ ಬೌಲರ್‌ಗಳ ಮೈಚಳಿ ಬಿಡಿಸಿದರು. ಅಭಿಷೇಕ್‌, ಬಂಗಾಳ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, 32 ಎಸೆತಗಳಲ್ಲಿ ಇವರು ಮೂರಂಕಿ ಮುಟ್ಟಿ ಸಂಭ್ರಮಿಸಿದರು.

Abhishek Sharma Blasts 148 Equals Rohit s T20 Ton Record Punjab Posts 310 5

ಬಂಗಾಳ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಒಟ್ಟಾರೆಯಾಗಿ 52 ಎಸೆತಗಳಲ್ಲಿ 8 ಬೌಂಡರಿ, 16 ಸಿಕ್ಸರ್ ನೆರವಿನಿಂದ 148 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರು ಆರಂಭಿಕ ಆಟಗಾರ ಪ್ರಭಸಿಮ್ರನ್ ಸಿಂಗ್ ಜೊತೆಗೂಡಿ ಮೊದಲ ವಿಕೆಟ್‌ಗೆ 12.3 ಓವರ್‌ಗಳಲ್ಲಿ 205 ರನ್‌ಗಳ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಪ್ರಭಸಿಮ್ರನ್ ಸಿಂಗ್ 35 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸೇರಿದಂತೆ 70 ರನ್‌ ಬಾರಿಸಿ ಔಟ್ ಆದರು. ಅಭಿಷೇಕ್‌ ಶರ್ಮಾ ಬಂಗಾಳ ತಂಡದ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದರು.

ರಮಣದೀಪ್ ಸಿಂಗ್‌ 39, ಸನ್ವೀರ್ ಸಿಂಗ್ 22 ರನ್‌ ಬಾರಿಸಿದರು. ಅಂತಿಮವಾಗಿ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 310 ರನ್‌ ಸೇರಿಸಿತು. ಈ ಮೂಲಕ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಎರಡನೇ ಗರಿಷ್ಠ ರನ್ ಬಾರಿಸಿದ ದಾಖಲೆ ಪಂಜಾಬ್ ತನ್ನದಾಗಿಸಿಕೊಂಡಿದೆ. ಇದಕ್ಕೂ ಮೊದಲು ಕಳೆದ ವರ್ಷ ಬರೋಡಾ 349 ರನ್‌ ಸೇರಿಸಿದ್ದು, ದಾಖಲೆ.

ಅಭಿಷೇಕ್ ದಾಖಲೆ

ಅಭಿಷೇಕ್‌ ಶರ್ಮಾ ಅವರ ಅಮೋಘ ಫಾರ್ಮ್‌ ದೇಶೀಯ ಟೂರ್ನಿಯಲ್ಲಿ ಮುಂದುವರೆದಿದೆ. ಇವರು ಪ್ರಸಕ್ತ ವರ್ಷ ಟಿ20 ಕ್ರಿಕೆಟ್‌ನಲ್ಲಿ ಈ ವರೆಗೆ 91 ಸಿಕ್ಸರ್‌ಗಳನ್ನು ಬಾರಿಸಿದ್ದು, ತಮ್ಮದೇ ದಾಖಲೆಯನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ 8ನೇ ಶತಕ ಬಾರಿಸಿದರು. ಈ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ 9 ಶತಕ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಗುರಿಯನ್ನು ಬೆನ್ನಟ್ಟಿದ ಬಂಗಾಳ ತಂಡದ ನಾಯಕ ಅಭಿಮನ್ಯ ಈಶ್ವರನ್‌ 66 ಎಸೆತಗಳಲ್ಲಿ 130 ರನ್ ಬಾರಿಸಿದರೂ ಸಹ ತಂಡಕ್ಕೆ ಗೆಲುವಿನ ಮಾಲೆ ತೊಡಿಸಲು ವಿಫಲರಾದರು.

Story first published: Monday, December 1, 2025, 0:14 [IST]
Other articles published on Dec 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+