For Quick Alerts
ALLOW NOTIFICATIONS  
For Daily Alerts
 

ವಿರಾಟ್‌, ಸೂರ್ಯ ಮಾಡಲಾಗದ ಸಾಧನೆ ಮಾಡಿದ ಅಭಿಷೇಕ್‌ ವಿಶ್ವ ದಾಖಲೆ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ಅಭಿಷೇಕ್ ಶರ್ಮಾ, ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಬ್ಯಾಕ್‌ ಟು ಬ್ಯಾಕ್ ಅರ್ಧಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಇವರು ಮೊದಲ ಎಸೆತದಿಂದಲೇ ಎದುರಾಳಿ ಬೌಲರ್‌ಗಳನ್ನು ಕಟ್ಟಿಹಾಕುವಲ್ಲಿ ನಿಸ್ಸೀಮರು. ಇವರ ತಂತ್ರವನ್ನು ಅರಿತು ಬೌಲ್‌ ಮಾಡುವಲ್ಲಿ ಬೌಲರ್‌ಗಳು ಎಡುವುದು ಸಹಜ. ತಮ್ಮ ಗುರು ಯುವರಾಜ್‌ ಸಿಂಗ್ ಧಾಟಿಯಲ್ಲೇ ಬ್ಯಾಟ್ ಮಾಡುವ ಅಭಿಷೇಕ್‌ ಶರ್ಮಾ ಮತ್ತೊಂದು ವಿಶ್ವದಾಖಲೆಯನ್ನು ಬರೆದಿದ್ದಾರೆ. ಅವರು ಬರೆದಿರುವ ಆ ವಿಶ್ವ ದಾಖಲೆ ಯಾವುದು ಎಂಬ ಬಗ್ಗೆ ಕಂಪ್ಲೀಟ್ ವರದಿ ಇಲ್ಲಿದೆ.

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅಜೇಯ ಓಟವನ್ನು ಮುನ್ನಡೆಸಿದರ ಹಿಂದೆ ಅಭಿಷೇಕ್‌ ಶರ್ಮಾ ಅವರ ಕೊಡುಗೆ ಅಪಾರ. ಇವರು ಆಡಿದ 7 ಪಂದ್ಯಗಳಲ್ಲಿ 44.85ರ ಸರಾಸರಿಯಲ್ಲಿ 314 ರನ್‌ ಸಿಡಿಸಿದ್ದಾರೆ. ಅಲ್ಲದೆ 32 ಬೌಂಡರಿ, 19 ಸಿಕ್ಸರ್ ಬಾರಿಸಿದ್ದಾರೆ. ಈ ವೇಳೆ 3 ಅರ್ಧಶತಕವನ್ನು ಸಹ ಸಿಡಿಸಿದ್ದಾರೆ. ಇವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಐಸಿಸಿ ಪುರುಷರ ಟಿ20 ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಇವರು ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಇತಿಹಾಸವನ್ನು ನಿರ್ಮಿಸಿದ್ದಾರೆ.

Abhishek Sharma Breaks David Malan s All-Time T20I Highest Rating Points Record

ಅಭಿಷೇಕ್‌ ಶರ್ಮಾ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತಿ ಹೆಚ್ಚು ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇವರು 931 ಅಂಕಗಳನ್ನು ಕಲೆ ಹಾಕುವ ಮೂಲಕ ತಮ್ಮ ಸ್ಥಾನವನ್ನು ಭಧ್ರ ಪಡಿಸಿಕೊಂಡಿದ್ದಾರೆ ಅಲ್ಲದೆ, ದಾಖಲೆ ಬರೆದಿದ್ದಾರೆ. ಈ ಮೂಲಕ ಅಭಿಷೇಕ್‌ ಶರ್ಮಾ ಇಂಗ್ಲೆಂಡ್ ತಂಡದ ಸ್ಟಾರ್ ಪ್ಲೇಯರ್ ಡೇವಿಡ್‌ ಮಲಾನ್‌ ಅವರ ರೇಟಿಂಗ್ ಪಾಯಿಂಟ್‌ ಮೀರಿದ್ದಾರೆ. ಡೇವಿಡ್ ಮಲಾನ್‌ 919 ಅಂಕಗಳನ್ನು ಕಲೆ ಹಾಕಿ ದಾಖಲೆ ಬರೆದಿದ್ದರು. ಇನ್ನು ಟೀಮ್ ಇಂಡಿಯಾದ ಪರ ನಾಯಕ ಸೂರ್ಯಕುಮಾರ್ ಯಾದವ್ 912, ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್‌ ಕೊಹ್ಲಿ 909 ಅಂಕವನ್ನು ಕಲೆ ಹಾಕಿ ಬೀಗಿದ್ದರು. ಈಗ ಅಭಿಷೇಕ್‌ ಈ ಎಲ್ಲ ದಾಖಲೆಗಳನ್ನು ಮೀರಿ ನಿಂತಿದ್ದಾರೆ.

ತಿಲಕ್‌ಗೆ 3ನೇ ಸ್ಥಾನ

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ಫಿಲ್ ಸಾಲ್ಟ್‌ ಇದ್ದಾರೆ. ಇನ್ನು ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ, ತಿಲಕ್‌ ವರ್ಮಾ 819 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ. ಭಾರತ ವಿರುದ್ಧದ ಸೂಪರ್‌ 4 ಹಂತದ ಕೊನೆಯ ಪಂದ್ಯದಲ್ಲಿ ಆರ್ಭಟಿಸಿದ್ದ ಶ್ರೀಲಂಕಾ ಪತನು ನಿಸ್ಸಂಕಾ ಅವರ ಶ್ರೇಯಾಂಕದಲ್ಲೂ ಏರಿಕೆ ಆಗಿದೆ. ಇವರು ಸದ್ಯ 2 ಸ್ಥಾನ ಏರಿಕೆ ಕಂಡಿದ್ದು, 5ನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದು ಸದ್ಯ 8ನೇ ಸ್ಥಾನದಲ್ಲಿದ್ದಾರೆ. ವಿಕೆಟ್‌ ಕೀಪರ್ ಬ್ಯಾಟರ್‌ ಸಂಜು, ಸ್ಯಾಮ್ಸನ್‌ ಅವರಿಗೆ ಈ ಶ್ರೇಯಾಂಕದಲ್ಲಿ ಲಾಭವಾಗಿದೆ. ಸದ್ಯ ಸಂಜು 31ನೇ ಸ್ಥಾನದಲ್ಲಿದ್ದಾರೆ.

Story first published: Thursday, October 2, 2025, 7:50 [IST]
Other articles published on Oct 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+