Abhishek Sharma: ಸನತ್ ಜಯಸೂರ್ಯ ದಾಖಲೆ ಅಳಿಸಿದ ಅಭಿಷೇಕ್
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇವರ ಕ್ಲಾಸಿಕ್ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಪಂದ್ಯಗಳನ್ನು ಸಹ ಗೆದ್ದಿದೆ. ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧವೂ ಅಭಿಷೇಕ್ ಶರ್ಮಾ ಅಬ್ಬರಿಸಿದರು. ಇವರ ಆಟಕ್ಕೆ ಬಾಂಗ್ಲಾದೇಶ ಬೌಲರ್‌ಗಳು ಕಡಿವಾಣ ಹಾಕುವಲ್ಲಿ ವಿಫಲರಾದರು. ಇವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಸಫಲವಾಯಿತು.
ಅಭಿಷೇಕ್ ಶರ್ಮಾ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 75 ರನ್ ಬಾರಿಸಿದರು. ಈ ವೇಳೆ ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆದರು. ಇವರ ಈ ಕ್ಲಾಸಿಕ್ ಇನಿಂಗ್ಸ್ ಪರಿಣಮಾ ಪಂಜಾಬ್ ಪುತ್ತರ್ ಹಲವು ದಾಖಲೆಗಳನ್ನು ಬರೆದರು. ಇವರು ಒಂದೇ ಏಷ್ಯಾ ಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ಬರೆದರು. ಈ ಮೂಲಕ ಇವರು ಶ್ರೀಲಂಕಾದ ಸ್ಟಾರ್ ಬ್ಯಾಟರ್ ಸನತ್ ಜಯಸೂರ್ಯ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಸನತ್ ಅವರು ಒಂದೇ ಏಷ್ಯಾ ಕಪ್‌ನಲ್ಲಿ 16 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಈಗ ಈ ದಾಖಲೆಗೆ ಅಭಿಷೇಕ್ ಶರ್ಮಾ ತಮ್ಮ ಹೆಸರನ್ನು ನಮೂದಿಸಿದರು.

ಪ್ರಸಕ್ತ ಏಷ್ಯಾ ಕಪ್‌ನಲ್ಲಿ ಅಭಿಷೇಕ್ ಶರ್ಮಾ ಬಿರುಸಿನ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಧಾರವಾಗಿದ್ದಾರೆ. ಸದ್ಯ ಆಡಿರುವ 5 ಪಂದ್ಯಗಳಲ್ಲಿ ಅಭಿಷೇಕ್ 17 ಸಿಕ್ಸರ್ ಬಾರಿಸಿ ಅಬ್ಬರಿಸಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 5 ಸಿಕ್ಸರ್ ಬಾರಿಸುತ್ತಲೇ ಅಭಿಷೇಕ್ ಶರ್ಮಾ ಅವರು, ಭಾರತದ ಪರವೂ ಒಂದೇ ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮೀರಿ ನಿಂತರು. ರೋಹಿತ್ ಶರ್ಮಾ 2018ರಲ್ಲಿ ನಡೆಸಿದ್ದ ಏಕದಿನ ಏಷ್ಯಾ ಕಪ್‌ನಲ್ಲಿ 13 ಸಿಕ್ಸರ್ ಬಾರಿಸಿದ್ದರು. ಈಗ ಈ ದಾಖಲೆಯೂ ಸಹ ಟೀಮ್ ಇಂಡಿಯಾದ ಯಂಗ್ ಓಪನರ್ ಪಾಲಾಯಿತು.
ಅಭಿಷೇಕ್ ಮತ್ತೊಂದು ದಾಖಲೆ
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತೊಂದು ದಾಖಲೆಯನ್ನು ಬರೆದರು. ಇವರು ಭಾರತದ ಪರ 25ಕ್ಕೂ ಕಡಿಮೆ ಎಸೆತಗಳಲ್ಲಿ ಅರ್ಧಶತಕಗಳನ್ನು ಬಾರಿಸಿದ ಬ್ಯಾಟರ್‌ಗಳ ಪಟ್ಟಿಗೆ ಸ್ಥಾನ ಪಡೆದಿದ್ದಾರೆ.
25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಹೆಚ್ಚಿನ ಭಾರತೀಯ ಆಟಗಾರರು
ಸೂರ್ಯಕುಮಾರ್ ಯಾದವ್ - 7 ಬಾರಿ
ರೋಹಿತ್ ಶರ್ಮಾ - 6 ಬಾರಿ
ಅಭಿಷೇಕ್ ಶರ್ಮಾ - 5 ಬಾರಿ
ಯುವರಾಜ್ ಸಿಂಗ್ - 4 ಬಾರಿ
ಕೆಎಲ್ ರಾಹುಲ್ - 3 ಬಾರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications