For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ದಾಖಲೆ ಸರಿಗಟ್ಟಲು ಅಭಿಷೇಕ್‌ ಶರ್ಮಾಗೆ ಕೊನೆಯ ಚಾನ್ಸ್‌

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಟಿ20 ಸರಣಿಯ ನಾಲ್ಕನೇ ಪಂದ್ಯ ಗುರುವಾರ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದ್ದರಿಂದ ಸರಣಿ ರೋಚಕತೆ ಹೆಚ್ಚಿಸಿದೆ. ಇನ್ನು ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಅಭಿಷೇಕ್‌ ಶರ್ಮಾ ಅವರು, ವಿರಾಟ್‌ ಕೊಹ್ಲಿ ಅವರ ದಾಖಲೆಯ ಸಮಕ್ಕೆ ನಿಲ್ಲಲು ಲಾಸ್ಟ್‌ ಚಾನ್ಸ್‌ ಸಿಗಲಿದೆ. ಹಾಗಿದ್ದರೆ ಆ ದಾಖಲೆ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆಯುತ್ತಿರುವ ಟಿ20 ಸರಣಿಯಲ್ಲಿ ಅಭಿಷೇಕ್‌ ಶರ್ಮಾ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇವರು ಈಗಾಗಲೇ ಆಡಿದ 3 ಪಂದ್ಯಗಳಲ್ಲಿ 37.33 ಸರಾಸರಿ ಮತ್ತು 167.16 ಸ್ಟ್ರೈಕ್ ರೇಟ್‌ನಲ್ಲಿ 112 ರನ್ ಸಿಡಿಸಿದ್ದಾರೆ. ಈ ಸರಣಿಯಲ್ಲಿ ಇವರು ಭಾರತದ ಪರ ಟಾಪ್‌ ರನ್‌ ಸ್ಕೋರರ್‌ ಆಗಿದ್ದಾರೆ. ನಾಲ್ಕನೇ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾಗಿ ರನ್‌ ಗಳನ್ನು ಬಾರಿಸಿದ್ದೇ ಆದಲ್ಲಿ ವಿರಾಟ್‌ ಕೊಹ್ಲಿ ಅವರ ದೊಡ್ಡ ದಾಖಲೆಯ ಸಮಕ್ಕೆ ನಿಲ್ಲಲಿದ್ದಾರೆ.

Abhishek Sharma Chases Kohli s T20 Record Bumrah Nears 100 Wickets Milestone

ವಿರಾಟ್‌ ಕೊಹ್ಲಿ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್‌ ಕಲೆ ಹಾಕಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ದಾಖಲೆಯ ಸಮಕ್ಕೆ ನಿಲ್ಲಲು ಅಭಿಷೇಕ್ ಶರ್ಮಾ ಅವರಿಗೆ ಇನ್ನು 39 ಅವಶ್ಯಕತೆ ಇದೆ. ಈಗಾಗಲೇ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 961 ರನ್ ಸಿಡಿಸಿದ್ದಾರೆ. ವಿರಾಟ್‌ ಕೊಹ್ಲಿ ಚುಟುಕು ಕ್ರಿಕೆಟ್‌ನಲ್ಲಿ 1 ಸಾವಿರ ರನ್‌ ಕಲೆ ಹಾಕಲು 27 ಇನಿಂಗ್ಸ್‌ ತೆಗೆದುಕೊಂಡಿದ್ದರು. ಅಭಿಷೇಕ್‌ 961 ರನ್‌ ಬಾರಿಸಲು 26 ಇನಿಂಗ್ಸ್‌ ಪಡೆದಿದ್ದಾರೆ. ನಾಲ್ಕನೇ ಪಂದ್ಯದಲ್ಲಿ ಅಭಿಷೇಕ್‌ 39 ರನ್‌ ಬಾರಿಸುವಲ್ಲಿ ಸಫಲರಾದರೆ, ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 1 ಸಾವಿರ ರನ್ ಕಲೆ ಹಾಕಿದ ವಿರಾಟ್‌ ಕೊಹ್ಲಿಯ ದಾಖಲೆಯ ಸಮಕ್ಕೆ ನಿಲ್ಲಲಿದ್ದಾರೆ.

ಬುಮ್ರಾ ಚಿತ್ತ ದಾಖಲೆಯತ್ತ

ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಸಹ ನಾಲ್ಕನೇ ಪಂದ್ಯದಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಲಿದ್ದಾರೆ. ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿರುವ ಬುಮ್ರಾ, ಆಡಿದ 78 ಪಂದ್ಯಗಳಲ್ಲಿ 98 ರನ್‌ ಕಲೆ ಹಾಕಿದ್ದಾರೆ. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಇನ್ನು 2 ವಿಕೆಟ್‌ ಪಡೆಯುವಲ್ಲಿ ಸಫಲರಾದರೆ, ಭಾರತದ ಪರ ಚುಟುಕು ಕ್ರಿಕೆಟ್‌ನಲ್ಲಿ ನೂರು ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಲಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಈ ಸಾಧನೆ ಮಾಡಿದ ಎರಡನೇ ಬೌಲರ್‌ ಆಗಲಿದ್ದಾರೆ. ಈ ಮೊದಲು ಈ ಸಾಧನೆಯನ್ನು ಅರ್ಷದೀಪ್ ಸಿಂಗ್ ಮಾಡಿದ್ದರು. ಅರ್ಷದೀಪ್ ಟಿ20 ಕ್ರಿಕೆಟ್‌ನಲ್ಲಿ 104 ವಿಕೆಟ್‌ ಕಬಳಿಸಿದ್ದಾರೆ.

Story first published: Wednesday, November 5, 2025, 15:10 [IST]
Other articles published on Nov 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+