ಅಭಿಷೇಕ್ ಶರ್ಮಾ ಆಸ್ಪತ್ರೆಯಿಂದ ಡಿಸ್ಚಾರ್ಜ್: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್
Abhishek Sharma: ಟೀಂ ಇಂಡಿಯಾ ಆರಂಭಿಕ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಅನಾರೋಗ್ಯದಿಂದ ಸಂಪೂರ್ಣ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ ನಡೆಯಲಿರುವ ಟಿ20 ವಿಶ್ವಕಪ್ ವಿಶ್ವಕಪ್ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಅವರು ಚೇತರಿಸಿಕೊಂಡಿರುವುದು ತಂಡಕ್ಕೆ ಆನೆಬಲ ಬಂದಾಂತಾಗಿದೆ. ಇದರಿಂದ ಪಾಕ್ ಬೌಲರ್‌ಗಳಿಗೆ ನಡುಕ ಶುರುವಾಗಿದೆ.
ಪಾಕಿಸ್ತಾನವು ಇತ್ತೀಚೆಗಷ್ಟೇ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಡುವುದಿಲ್ಲ ಎನ್ನುವ ನಿಲುವನ್ನು ಬದಲಾಯಿಸಿಕೊಂಡಿದೆ. ಐಸಿಸಿ ಜೊತೆ ಪಿಸಿಬಿ ಸಭೆ ನಡೆಸಿದ ಬಳಿ ಈ ಬದಲಾವಣೆಗಳು ಆದ್ವು. ಅದರಂತೆಯೇ ಫೆಬ್ರವರಿ 15ರಂದು ಭಾರತ-ಪಾಕಿಸ್ತಾನ ನಡುಚೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ತಿಲಕ್ ವರ್ಮಾ ಹೇಳಿದ್ದೇನು?: ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರವನ್ನು ಸಹ ಆಟಗಾರ ತಿಲಕ್ ವರ್ಮಾ ಮಾಧ್ಯಮಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ. "ಅಭಿಷೇಕ್ ಈಗ ಡಿಸ್ಚಾರ್ಜ್ ಆಗಿದ್ದಾರೆ. ಅವರು ಚೇತರಿಸಿಕೊಂಡಿದ್ದು, ಮುಂದಿನ ಪಂದ್ಯಗಳಿಗೆ ಅವರ ಫಿಟ್‌ನೆಸ್ ಪರಿಶೀಲಿಸಿ ಆಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ," ಎಂದು ತಿಲಕ್ ವರ್ಮಾ ತಿಳಿಸಿದ್ದಾರೆ.
ಆತಂಕಕ್ಕೆ ಒಳಗಾಗಿದ್ದ ಟೀಂ ಇಂಡಿಯಾ: 2026ರ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧದ ಮೊದಲ ಪಂದ್ಯದ ಬಳಿಕ ಅಭಿಷೇಕ್‌ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ಸಮಸ್ಯೆ ಹೆಚ್ಚಾಗಿದ್ದರಿಂದ ದೆಹಲಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಫೆಬ್ರವರಿ 15ರಂದು ಪಾಕಿಸ್ತಾನ ವಿರುದ್ಧ ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯ ಸಮೀಪಿಸುತ್ತಿದ್ದ ಸಂದರ್ಭದಲ್ಲೇ ಹೀಗೆ ಆಗಿರುವುದು ತಂಡದ ಆತಂಕಕ್ಕೆ ಕಾರಣವಾಗಿತ್ತು.
ನಮೀಬಿಯಾ ವಿರುದ್ಧ ಆಡುವುದು ಅನುಮಾನ: ಭಾರತ ತಂಡ ನಮೀಬಿಯಾ ವಿರುದ್ಧ ಇಂದು (ಫೆಬ್ರವರಿ 12ರ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಈಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಅಭಿಷೇಕ್ ಶರ್ಮಾ ಅವರು ಆಡುವುದು ಬಹುತೇಕ ಅನುಮಾನವಾಗಿದೆ. ಯಾಕಂದ್ರೆ, ಸದ್ಯ ತಂಡದ ಮ್ಯಾನೇಜ್‌ಮೆಂಟ್ ಯಾವುದೇ ಆತುರ ತೋರದೆ, ಅವರ ಚೇತರಿಕೆಯ ಸ್ಥಿತಿಯತ್ತ ಗಮನಹರಿಸಲಾಗಿದೆ ಎಂದು ತಿಳಿಸಿದೆ.
ಆದ್ದರಿಂದ ಇಂದು ಸಂಜೆ ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಆದರೆ, ಮುಂಬರುವ ಪಾಕಿಸ್ತಾನ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರು ಕಣಕ್ಕಿಳಿಯುವುದು ಮಾತ್ರ ಪಕ್ಕಾ ಆದಂತಾಗಿದೆ. ಇದರಿಂದ ಪಾಕ್ ಬೌಲರ್‌ಗಳಿಗೆ ಆತಂಕ ಭಯ ಶುರುವಾಗಿದೆ ಎನ್ನಲಾಗುತ್ತಿದೆ.
ಪಾಕ್ ಬೌಲರ್‌ಗಳ ಚಳಿ ಬಿಡಿಸಿದ್ದ ಅಭಿಷೇಕ್: ಪಾಕಿಸ್ತಾನ ವಿರುದ್ಧದ ಈ ಹಿಂದಿನ ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದ ದಾಖಲೆ ಹೊಂದಿದ್ದಾರೆ. ಏಷ್ಯಾಕಪ್ 2025ರಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಶಾಹೀನ್ ಅಫ್ರಿದಿ ಸೇರಿದಂತೆ ಇತರೆ ಪಾಕಿಸ್ತಾನ ಬೌಲರ್‌ಗಳ ಬೆವರಿಳಿಸುವ ಕೆಲಸವನ್ನು ಮಾಡಿದ್ದರು.
ಫೆಬ್ರವರಿ 15ರಂದು ನಡೆಯಲಿರುವ ಟಿ 20 ವಿಶ್ವಕಪ್ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಅವರು ಪಾಕ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಆಡುವ ಭರವಸೆಯಲ್ಲಿ ಟೀಂ ಇಂಡಿಯಾ ಇದೆ. ಅಭಿಷೇಕ್ ಶರ್ಮಾ ನೀಡುವ ವೇಗದ ಆರಂಭ ತಂಡಕ್ಕೆ ಅತ್ಯಂತ ಮಹತ್ವದ್ದು. ವಿಶೇಷವಾಗಿ ಪಾಕಿಸ್ತಾನದಂತಹ ಬಲಿಷ್ಠ ತಂಡದ ವಿರುದ್ಧ ಅವರು ಭಾರತಕ್ಕೆ ದೊಡ್ಡ ಬಲ ನೀಡಲಿದ್ದಾರೆ ಎನ್ನುವ ನಿರೀಕ್ಷೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.
ಈ ಹೈವೋಲ್ಟೇಜ್ ಪಂದ್ಯ ಕೊಲಂಬೊದಲ್ಲಿ ನಡೆಯಲಿದ್ದು, ಈ ಕ್ಷಣಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಭಿಷೇಕ್ ಶರ್ಮಾ ಆ ಪಂದ್ಯದಲ್ಲಿ ಬಹುತೇಕ ಕಣಕ್ಕಿಳಿಯುತ್ತಿದ್ದು, ಇದರಿಂದ ಪಾಕ್ ಬೌಲರ್‌ಗಳಿಗೆ ಮತ್ತೊಂದು ದೊಡ್ಡ ಸವಾಲು ಎದುರಾಗಿದೆ. ಒಟ್ಟಿನಲ್ಲಿ ಅಭಿಷೇಕ್ ಶರ್ಮಾ ಅವರು ಪಾಕಿಸ್ತಾನ ಬೌಲರ್‌ಗಳಿಗೆ ಚಳಿ ಬಿಡಿಸುವುದಂತೂ ಪಕ್ಕಾ ಎನ್ನುವ ಭರವಸೆಯಮನ್ನು ಅಭಿಮಾನಿಗಳು ಹೊಂದಿದ್ದಾರೆ.
ಅಭಿಷೇಕ್ ಶರ್ಮಾ ಅನಾರೋಗ್ಯಕ್ಕೆ ಕಾರಣ ಏನು?
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಫೆಬ್ರವರಿ 6ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ನೆಟ್ ಪ್ರಕ್ಟೀಸ್ ನಂತರವೇ ಅವರಿಗೆ ಅನಾರೋಗ್ಯವಾಗಿದೆ. ಆ ವೇಳೆ ಅವರು ಸೇವಿಸಿದ ಯಾವುದೋ ಆಹಾರದಿಂದ ಹೊಟ್ಟೆನೋವು ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ.
ಆ ದಿನ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದರೂ ಸಹ, ಅಭಿಷೇಕ್ ಧೈರ್ಯದಿಂದ ಮೈದಾನಕ್ಕಿಳಿಯಲು ನಿರ್ಧರಿಸಿದರು. ಆದರೆ, ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಅವರು ತುಂಬಾ ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕೇವಲ ಒಂದು ಎಸೆತ ಮಾತ್ರ ಎದುರಿಸಿ ಔಟಾದರು. ಆಗಲೇ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿದೆ ಎಂದು ತಿಳಿದುಬಂದಿತು.
ಅಭಿಷೇಕ್ ಶರ್ಮಾ ಪೆವಿಲಿಯನ್‌ನಲ್ಲೂ ಕೂಡ ಹೆಚ್ಚು ಸಮಯ ಕಾಣಿಸಿಕೊಳ್ಳಲಿಲ್ಲ. ಭಾರತ 29 ರನ್‌ಗಳಿಂದ ಯುಎಸ್‌ಎ ವಿರುದ್ಧ ಜಯ ಸಾಧಿಸಿದ್ದರೂ ಸಹ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡಲು ಕೂಡ ಅವರು ಆಗಮಿಸಲು ಸಾಧ್ಯವಾಗಲಿಲ್ಲ. ಅಷ್ಟರ ಮಟ್ಟಿಗೆ ಅವರು ಸುಸ್ತಾಗಿದ್ದರು ಎಂದು ತಿಳಿದುಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications