ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಟರ್ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೇಘಾಲಯ ನೀಡಿದ್ದ ಸವಾಲನ್ನು ಪಂಜಾಬ್ ಪ್ಲೇಯರ್ ಆರ್ಭಟಿಸಿದ್ದಾರೆ. ಏಕಾಂಗಿಯಾಗಿ ರನ್ ಚೇಸ್ ಮಾಡಿದಂತೆ ಆಡಿದ ಪಂಜಾಬ್ ಕಾ ಪುತ್ತರ್ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸದ ಪುಟ ಸೇರಿದ್ದಾರೆ. ಈ ಇನಿಂಗ್ಸ್ ಕಂಡು ಎಸ್‌ಆರ್‌ಎಚ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ "ಎ" ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೇಘಾಲಯ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 142 ರನ್ ಸಿಡಿಸಿದರು. ಪಂಜಾಬ್ 9.3 ಓವರ್‌ಗಳಲ್ಲಿ 3 ವಿಕೆಟ್‌ಗೆ 144 ರನ್ ಸೇರಿಸಿ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಪಂಜಾಬ್ ಟೂರ್ನಿಯಲ್ಲಿ 5 ಗೆಲುವು ದಾಖಲಿಸಿದೆ.

ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡದ ಆರಂಭಿಕ ಹರ್ನೂರ್ ಸಿಂಗ್ 6 ರನ್‌ಗಳಿಗೆ ಆಟ ಮುಗಿಸಿದರು. ಸೊಹ್ರಾಬ್ ಧಲಿವಾಲ್ 22 ರನ್ ಸಿಡಿಸಿದರು. ಇನ್ನು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಗಮನ ಸೆಳೆದರು.
ಅಭಿಷೇಕ್ 365ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ ಅಬ್ಬರಿಸಿದರು. ಈ ವೇಳೆ ಇವರು 29 ಎಸೆತಗಳಲ್ಲಿ 8 ಬೌಂಡರಿ, 11 ಸಿಕ್ಸರ್ ನೆರವಿನ ಇಂದ ಅಜೇಯ 106 ರನ್ ಸಿಡಿಸಿದರು. ಅಭಿಷೇಕ್ ಶರ್ಮಾ ಅವರ ಬಿರುಸಿನ ಬ್ಯಾಟಿಂಗ್ ಕಂಡು ಸನ್ ತಂಡದ ಫ್ಯಾನ್ಸ್ ಫುಲ್ ಖುಷ್. ಪಂಜಾಬ್ ಏಳು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿದೆ.
ಈ ಮೂಲಕ ಅಭಿಷೇಕ್ ಶರ್ಮಾ ಉರ್ವಿಲ್ ಪಟೇಲ್ ಅವರ ದಾಖಲೆಯನ್ನು ಸಮನನಾಗಿಸಿದ್ದಾರೆ. ಇತ್ತೀಚಿಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಗುಜರಾತ್ ಪರ ಉರ್ವಿಲ್ ಪಟೀಲ್ ಸಹ 28 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಈ ದಾಖಲೆಯನ್ನು ಈಗ ಅಭಿಷೇಕ್ ಶರ್ಮಾ ಸಮನಾಗಿಸಿದ್ದಾರೆ.
ಅಭಿಷೇಕ್ ಶರ್ಮಾ, ಮೇಘಾಲಯ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಈ ಪಂದ್ಯದಲ್ಲಿ ಅಭಿಷೇಕ್ 11 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ತಮ್ಮದೇ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ದಾಖಲೆಯನ್ನು ಅಳಿಸಿ ಹಾಕಿದೆ. 2022ರಲ್ಲಿ ಸೂರ್ಯಕುಮಾರ್ ಯಾದವ್ ಒಟ್ಟು 41 ಟಿ20 ಇನಿಂಗ್ಸ್ ಗಳಲ್ಲಿ ಬ್ಯಾಟ್ ಮಾಡಿ 85 ಸಿಕ್ಸರ್ ದಾಖಲಿಸಿ ಅಬ್ಬರಿಸಿದ್ದರು. ಈ ವೇಳೆ ಈ ದಾಖಲೆಯನ್ನು ಅಭಿಷೇಕ್ ಶರ್ಮಾ ಈ ದಾಖಲೆಯನ್ನು ಅಳಿಸಿದ್ದಾರೆ. ಅಭಿಷೇಕ್ ಶರ್ಮಾ 38 ಇನಿಂಗ್ಸ್‌ಗಳಲ್ಲಿ 87 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಒಂದೇ ಕ್ಯಾಲಿಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲಿಸಿದ ಪ್ಲೇಯರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.