For Quick Alerts
ALLOW NOTIFICATIONS  
For Daily Alerts
 

Abhishek Sharma: ಅಭಿಷೇಕ್ ಶರ್ಮಾ ಅದ್ಭುತ ಇನ್ನಿಂಗ್ಸ್ ಬಗ್ಗೆ ತಂದೆಯ ಪ್ರತಿಕ್ರಿಯೆ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ಬೌಲರ್‌ಗಳಿಗೆ ಬೆವರಿಳಿಸಿದ ಅಭಿಷೇಕ್ ಶರ್ಮಾ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದ್ದರು. ಇದೀಗ ಅಭಿಷೇಕ್ ಶರ್ಮಾ ಆಡಿದ 135 ರನ್‌ಗಳ ಅದ್ಭುತ ಇನ್ನಿಂಗ್ಸ್‌ಗೆ ಅವರ ತಂದೆ ರಾಜ್‌ಕುಮಾರ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ನನ್ನ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಪುರುಷರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಎರಡನೇ ಅತ್ಯಧಿಕ ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದ ಪುತ್ರ ಅಭಿಷೇಕ್ ಶರ್ಮಾ ಬಗ್ಗೆ ಹೆಮ್ಮೆಯ ತಂದೆ ಮತ್ತು ತರಬೇತುದಾರ ರಾಜ್‌ಕುಮಾರ್ ಶರ್ಮಾ ಸಂತೋಷ ವ್ಯಕ್ತಪಡಿಸಿದರು. ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಅಭಿಷೇಕ್ ಶರ್ಮಾ ಅವರ ತಾಯಿ ಮತ್ತು ಸಹೋದರಿ ಹಾಜರಿದ್ದಾಗ, ಅವರು ತಮ್ಮ ಮಗನ ಅಬ್ಬರವನ್ನು ಟಿವಿ ಮೂಲಕ ನೋಡಿರುವುದಾಗಿ ಬಹಿರಂಗಪಡಿಸಿದ್ದಾರೆ.

Abhishek Sharma father s reaction to his brilliant innings

ಹೆಮ್ಮೆಯ ಕ್ಷಣ

ಮಾಜಿ ರಣಜಿ ಟ್ರೋಫಿ ಆಟಗಾರ ಮತ್ತು ಅಭಿಷೇಕ್ ಶರ್ಮಾ ಅವರ ತಂದೆ ರಾಜ್‌ಕುಮಾರ್, 'ನನ್ನ ಮಗಳು ಮತ್ತು ಪತ್ನಿ ಅಭಿಷೇಕ್ ಬ್ಯಾಟಿಂಗ್ ವೀಕ್ಷಿಸಲು (ಮುಂಬೈನಲ್ಲಿ) ಹಾಜರಿದ್ದರು. ನಾನು ಅಭಿಷೇಕ್ ಆಟವನ್ನು ಟಿವಿಯಲ್ಲಿ ನೋಡಿದೆ. ಅದು ನಮಗೆ ನಿಜಕ್ಕೂ ಹೆಮ್ಮೆಯ ಕ್ಷಣವಾಗಿತ್ತು. ನನ್ನ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅವರನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ನುಡಿದ್ದಾರೆ.

ವಾಂಖೆಡೆ ವೀರ

ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಅಭಿಷೇಕ್ 228.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಅವರು 54 ಎಸೆತಗಳಲ್ಲಿ 7 ಬೌಂಡರಿಗಳು ಮತ್ತು 13 ಸಿಕ್ಸರ್‌ಗಳ ನೆರವಿನಿಂದ 135 ರನ್ ಗಳಿಸಿದರು. ಇದು ಪುರುಷರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಬ್ಯಾಟರ್‌ವೊಬ್ಬರು ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಈ ಮೂಲಕ ಅಭಿಷೇಕ್ ಶರ್ಮಾ 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ ಶುಭಮನ್ ಗಿಲ್ ಗಳಿಸಿದ 126* ರನ್‌ಗಳ ದಾಖಲೆಯನ್ನು ಹಿಂದಿಕ್ಕಿದರು. ಅಭಿಷೇಕ್ ಅವರ 135 ರನ್‌ಗಳ ಇನ್ನಿಂಗ್ಸ್ ಇಂಗ್ಲೆಂಡ್ ವಿರುದ್ಧ ಯಾವುದೇ ಬ್ಯಾಟರ್ ಗಳಿಸಿದ ಎರಡನೇ ಅತ್ಯಧಿಕ ಸ್ಕೋರ್ ಆಗಿತ್ತು. 2013 ರಲ್ಲಿ ಆರನ್ ಫಿಂಚ್ ಅವರ 156 ರನ್‌ಗಳ ದಾಖಲೆಯ ರನ್ ಬಾರಿಸಿದ್ದರು.

ಅಭಿಷೇಕ್ ತಮ್ಮ ಶತಕ ಪೂರ್ಣಗೊಳಿಸಲು 37 ಎಸೆತಗಳನ್ನು ತೆಗೆದುಕೊಂಡರೆ, 2017 ರಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ 35 ಎಸೆತಗಳನ್ನು ಆಡಿದ್ದರು. ಅಭಿಷೇಕ್ 37 ಎಸೆತಗಳಲ್ಲಿ ಶತಕ ಗಳಿಸಿದ್ದು, ಪುರುಷರ ಟಿ20 ಕ್ರಿಕೆಟ್‌ನಲ್ಲಿ ಎಂಟನೇ ವೇಗದ ಶತಕವಾಗಿದೆ.

Story first published: Tuesday, February 4, 2025, 13:30 [IST]
Other articles published on Feb 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+