IND vs ZIM: ಸರಣಿ ಆರಂಭಕ್ಕೂ ಮುನ್ನ ಜಿಂಬಾಬ್ವೆಕ್ಕೆ ನಡುಕ ಹುಟ್ಟಿಸಿರುವ ಯುವರಾಜ್ ಸಿಂಗ್ ಶಿಷ್ಯ!
ಜುಲೈ 2 ಮಂಗಳವಾರ, ಭಾರತ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯು ಪ್ರಾರಂಭವಾಗಲಿದೆ.ಮೊದಲ ಪಂದ್ಯ ಜುಲೈ 6 ರಂದು ನಡೆಯಲಿದೆ.
ಇದಕ್ಕಾಗಿ ಯಂಗ್ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸ ಹೊರಟಿದೆ. ಈ ಪ್ರವಾಸದಲ್ಲಿ ಶುಭಮನ್ ಗಿಲ್ ಅವರು ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದು, ವಿವಿಎಸ್ ಲಕ್ಷ್ಮಣ್ ಅವರು ಹೆಡ್ ಕೋಚ್ ತಂಡದಲ್ಲಿದ್ದಾರೆ.

ಟಿ20 ವಿಶ್ವಕಪ್ 2024ರ ಟೂರ್ನಿ ನಡೆಯುವಾಗಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲಾಗಿದೆ. ಕೆಲವು ಅನ್‌ಕ್ಯಾಪ್ಡ್ ಆಟಗಾರರನ್ನು ಸಹ ಸೇರಿಸಲಾಗಿದೆ.
ಈ ಅನ್‌ಕ್ಯಾಪ್ಡ್ ಆಟಗಾರರು ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವಾಡುವುದು ಬಹುತೇಕ ಖಚಿತವಾಗಿದೆ. ಆದರೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಸ್ಪೋಟಕ ಬ್ಯಾಟರ್ ತಂಡದಲ್ಲಿರುವುದು ಟೀಮ್ ಇಂಡಿಯಾಗೆ ಆನೆ ಬಲ ಸಿಕ್ಕಂತಾಗಿದೆ. ಈ ಬ್ಯಾಟರ್ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2024ರಲ್ಲಿ ಅದ್ಭುತ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಟೀಮ್ ಇಂಡಿಯಾ ಪರ ಚೊಚ್ಚಲ ಪಾದರ್ಪಣೆ ಪಂದ್ಯವಾಡಲು ಸಿದ್ದವಾಗಿರುವ 23 ವರ್ಷದ ಎಡಗೈ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಸರಣಿಗೂ ಮುನ್ನ ಜಿಂಬಾಬ್ವೆ ಬೌಲರ್‌ಗಳಿಗೆ ಭಯ ಹುಟ್ಟಿಸಿದ್ದಾರೆ.
ಈ ಯುವ ಬ್ಯಾಟರ್ ಐಪಿಎಲ್ 2024 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಅಭಿಷೇಕ್, ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ಅವರೊಂದಿಗೆ ಓಪನಿಂಗ್ ಮಾಡುವಾಗ ಬೌಲರ್‌ಗಳನ್ನು ಬೆಂಡೆತ್ತಿದ್ದರು.
ಇನ್ನಿಂಗ್ಸ್ ಆರಂಭದ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ಸಿಕ್ಸರ್ ಬಾರಿಸಿದ್ದರು. ಈ ಆರಂಭಿಕ ಜೋಡಿಯ ಭರ್ಜರಿ ಪ್ರದರ್ಶನದಿಂದಲ್ಲೇ ಹೈದರಾಬಾದ್ ಫೈನಲ್ ತಲುಪಿತ್ತು.
ಐಪಿಎಲ್ 2024ರಲ್ಲಿ 16 ಪಂದ್ಯಗಳನ್ನು ಆಡಿದ ಅಭಿಷೇಕ್ 200 ಸ್ಟ್ರೈಕ್ ರೇಟ್‌ನಲ್ಲಿ 484 ರನ್ ಗಳಿಸಿದರು. ಈ ಋತುವಿನಲ್ಲಿ ಅಭಿಷೇಕ್ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 75* ರನ್.
ಐಪಿಎಲ್ 2024ರ ಫಾರ್ಮ್‌ನಲ್ಲಿ ಅಭಿಷೇಕ್ ಅಬ್ಬರಿಸಿದರೆ ಟೀಮ್ ಇಂಡಿಯಾ ಸರಣಿ ಗೆಲ್ಲುವುದರಲ್ಲಿ ಅನುಮಾನವೇ ಬೇಡ. ಆದರೆ ಅಭಿಷೇಕ್ ಶರ್ಮಾ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವಾಡುತ್ತಿದ್ದು, ಯಾವ ರೀತಿ ಆ ಒತ್ತಡವನ್ನು ನಿಭಾಯಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಭಾರತ vs ಜಿಂಬಾಬ್ವೆ ಟಿ20 ವೇಳಾಪಟ್ಟಿ
ಮೊದಲ ಟಿ20 - ಶನಿವಾರ, ಜುಲೈ 6
ಎರಡನೇ ಟಿ20 - ಭಾನುವಾರ, ಜುಲೈ 7
ಮೂರನೇ ಟಿ20 - ಬುಧವಾರ, ಜುಲೈ 10
ನಾಲ್ಕನೇ ಟಿ20 - ಶನಿವಾರ, ಜುಲೈ 13
ಐದನೇ ಟಿ20 - ಭಾನುವಾರ, ಜುಲೈ 14
ಭಾರತ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿವಂ ದುಬೆ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್ ,ತುಷಾರ್ ದೇಶಪಾಂಡೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications