ಪ್ರತಿಷ್ಠಿತ ಪ್ರಶಸ್ತಿ ರೇಸ್‌ನಲ್ಲಿ ಅಭಿಷೇಕ್, ಕುಲ್‌ದೀಪ್
ಟೀಮ್ ಇಂಡಿಯಾದ ಭರವಸೆಯ ಆಟಗಾರ ಅಭಿಷೇಕ್ ಶರ್ಮಾ, ಇತ್ತೀಚಿಗೆ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇವರ ಕ್ಲಾಸಿಕ್ ಪ್ರದರ್ಶನದ ಫಲವಾಗಿ ಇವರಿಗೆ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯೂ ಲಭಿಸಿದೆ. ಈಗ ಈ ಸ್ಟಾರ್ ಪ್ಲೇಯರ್ ಹಾಗೂ ಟೀಮ್ ಇಂಡಿಯಾ ಇನ್ನೋರ್ವ ಆಟಗಾರ ಕುಲ್ ದೀಪ್ ಯಾದವ್ ಐಸಿಸಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಈ ಪ್ರಶಸ್ತಿ ಯಾವುದು ? ಮತ್ತೆ ಈ ಪ್ರಶಸ್ತಿ ರೇಸ್‌ನಲ್ಲಿ ಯಾರೆಲ್ಲಾ ಇದ್ದಾರೆ? ಎಂಬ ವರದಿ ಇಲ್ಲಿದೆ.
ಪ್ರತಿ ತಿಂಗಳು ಐಸಿಸಿ ನೀಡುವ ತಿಂಗಳ ಆಟಗಾರ ಪ್ರಶಸ್ತಿಗೆ ಅಭಿಷೇಕ್ ಶರ್ಮಾ, ಕುಲ್‌ದೀಪ್ ಯಾದವ ಸೇರಿಂದತೆ ಜಿಂಬಾಬ್ವೆಯ ಬ್ರಿಯಾನ್ ಬೆನೆಟ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಸೆಪ್ಟಂಬರ್‌ನಲ್ಲಿ ಈ ಆಟಗಾರರು ನೀಡಿದ ಪ್ರದರ್ಶನದ ಆಧಾರದ ಮೇಲೆ ಈ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ.

ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅಬ್ಬರಿಸಿದ್ದರು. ಇವರು ಈ ಟೂರ್ನಿಯಲ್ಲಿ ಆಡಿದ 7 ಪದ್ಯಗಳಲ್ಲಿ 314 ರನ್ ಸಿಡಿಸಿದ್ದಾರೆ. ಅಲ್ಲದೆ ಸೂಪರ್ 4 ಹಂತದ ಮೂರು ಪಂದ್ಯಗಳಲ್ಲಿ ಇವರು 200ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಇವರ ಅಮೋಘ ಬ್ಯಾಟಿಂಗ್ ಬಲದಿಂದ ಇವರು ಐಸಿಸಿ ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನವನ್ನು ಪಡೆದಿದ್ದಾರೆ. ವರು 931 ರೇಟಿಂಗ್ ಪಾಯಿಂಟ್‌ಗಳ್ನು ಹೊಂದಿದ್ದು, ಯಾರು ಮಾಡದ ಸಾಧನೆಯನ್ನು ಮಾಡಿ ಬೀಗಿದ್ದಾರೆ. ಅಭಿಷೇಕ್ ತಮ್ಮ ರೇಟಿಂಗ್ ಅನ್ನು ಇನ್ನಷ್ಟು ಹೆಚ್ಚಿಸಿಕೊಳ್ಳವ ಸಾಧ್ಯತೆ ಇದೆ. ಈ ತಿಂಗಳ ಅಂತ್ಯದಲ್ಲಿ ಟೀಮ್ ಇಂಡಿಯಾ ಆಸೀಸ್ ವಿರುದ್ಧ ಟಿ20 ಪಂದ್ಯಗಳನ್ನು ಆಡಲಿದೆ.
ರೇಸ್‌ನಲ್ಲಿ ಕುಲ್‌ದೀಪ್
ಈ ಪ್ರಶ್ತಗೆ ನಾಮ ನಿರ್ದೇಶನಗೊಂಡ ಎರಡನೇ ಆಟಗಾರ ರಿಸ್ಟ್ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್. ಇವರು ಏಷ್ಯಾಕಪ್‌ನಲ್ಲಿ ಬೆಂಕಿಯ ಪ್ರದರ್ಶನ ನೀಡಿದ್ದಾರೆ. ಇವರು 7 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದು, ಒಂದೇ ಆವೃತ್ತಿಯ ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇವರು ಫೈನಲ್ ಪಂದ್ಯದಲ್ಲೂ ಪಾಕ್ ವಿರುದ್ಧ ಸ್ಥಿರ ಪ್ರದರ್ಶನ ನೀಡಿ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ದರು.

ಈ ಪ್ರಶಸ್ತಿಯ ರೇಸ್‌ನಲ್ಲಿ ಜಿಂಬಾಬ್ವೆಯ ಬ್ರಿಯಾನ್ ಬೆನೆಟ್ ಅವರನ್ನು ಸಹ ಇದ್ದಾರೆ. ಇವರು ಸೆಪ್ಟಂಬರ್ ತಿಂಗಳಿನಲ್ಲಿ 165.66 ಸ್ಟ್ರೈಕ್ ರೇಟ್ ನಲ್ಲಿ 497 ರನ್ ಕಲೆ ಹಾಕಿದ್ದಾರೆ. ಅಂತಿಮ ವಿಜೇತರನ್ನು ಐಸಿಸಿ ಶೀಘ್ರದಲ್ಲೇ ಘೋಷಿಸಲಿದೆ.
ಟೀಮ್ ಇಂಡಿಯಾ ಆಟಗಾರರಿಗೆ ಈ ಪ್ರಶಸ್ತಿ ಲಭಿಸಿದ್ದೇ ಆದಲ್ಲಿ ಈ ತಿಂಗಳು ಈ ಆಟಗಾರರಿಗೆ ಸ್ಮರಣೀಯವಾಗಲಿದೆ. ಹೀಗಾಗಿ ಈ ಪ್ರಶಸ್ತಿ ಯಾರ ಪಾಲಾಗುತ್ತದೆ ಎಂಬ ಕುತೂಹಲ ಮೂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications