For Quick Alerts
ALLOW NOTIFICATIONS  
For Daily Alerts
 

ಭಾರತದ ಪರ ಈ ವರ್ಷ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದವರು ಇವರೇ...

ಟೀಮ್ ಇಂಡಿಯಾ ಪಾಲಿಗೆ ಈ ವರ್ಷ ಸ್ಮರಣೀಯವಾಗಿದೆ. ಈ ವರ್ಷ ಟೀಮ್ ಇಂಡಿಯಾ ಏಕದಿನ ಸ್ವರೂಪದಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದು ಬೀಗಿದೆ. ಅಲ್ಲದೆ ಮಹಿಳಾ ವಿಶ್ವಕಪ್‌ ತನ್ನದಾಗಿಸಿಕೊಂಡಿದೆ. ಈ ವರ್ಷ ಯುವ ಆಟಗಾರರು ಹಾಗೂ ಅನುಭವಿ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಟೀಮ್ ಇಂಡಿಯಾದ ಪರ ಈ ವರ್ಷ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಯಾರು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಭಾರತದ ಪರ ಈ ವರ್ಷ ಯುವ ಆಟಗಾರರು ತಮ್ಮ ಧಮಾಕೆದಾರ್ ಪ್ರದರ್ಶನದಿಂದ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಈ ವೇಳೆ ಎದ್ದು ಕಾಣುವ ಹೆಸರು ಅಭಿಷೇಕ್‌ ಶರ್ಮಾ. ಸದ್ಯ ಇವರು ಟೀಮ್ ಇಂಡಿಯಾದ ಪರ ಟಿ20 ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಇವರ ಸ್ಫೋಟಕ ಬ್ಯಾಟಿಂಗ್‌ಗೆ ಎದುರಾಳಿಗಳು ಸಹ ಬೆಚ್ಚಿ ಬಿದಿದ್ದಾರೆ. ಸದ್ಯ ಟಿ20 ಸ್ವರೂಪದಲ್ಲಿ ಇವರು ನಂಬರ್‌ 1 ಬ್ಯಾಟರ್‌. ತಮ್ಮ ಕಲಾತ್ಮಕ ಆಟದಿಂದ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಕ್ಷಮತೆಯನ್ನು ಇವರು ಹೊಂದಿದ್ದಾರೆ. ಇವರು ಸದ್ಯ ಭಾರತದ ಪರ ಮೂರು ಸ್ವರೂಪದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Abhishek Sharma Leads India s Six-Hitting Charts in 2025 Tops with 50 Maximums

ಅಭಿಷೇಕ್‌ ಶರ್ಮಾ ಈ ವರ್ಷ ಆಡಿದ 19 ಇನಿಂಗ್ಸ್‌ಗಳಲ್ಲಿ 43ರ ಸರಾಸರಿಯಲ್ಲಿ 790 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. ಇವರು ಆರಂಭದಿಂದಲೇ ಬಿಗ್ ಹಿಟ್ ಬಾರಿಸಲು ಹೆಸರುವಾಸಿ. ಸದ್ಯ ಇವರು ಭಾರತದ ಪರ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರ. ಇವರ ಬುಟ್ಟಿಯಲ್ಲಿ ಸದ್ಯ 50 ಸಿಕ್ಸರ್‌ಗಳು ಇವೆ. ಅಭಿಷೇಕ್‌ ಶರ್ಮಾ ಅವರ ಸಮೀಪದಲ್ಲಿ ಯಾವೊಬ್ಬ ಭಾರತೀಯ ಆಟಗಾರನು ಇಲ್ಲ.

ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಯಾರು?

ವಿಶ್ವ ಕ್ರಿಕೆಟ್‌ನಲ್ಲಿ 2035ರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಪಟ್ಟಿಯಲ್ಲಿ, ಮೊದಲ ಸ್ಥಾನದಲ್ಲಿ ಆಸ್ಟ್ರಿಯಾದ ಕರಣ್‌ಬೀರ್‌ ಸಿಂಗ್‌ (Karanbir Singh) ಇದ್ದಾರೆ. ಇವರು ಆಡಿದ 32 ಪಂದ್ಯಗಳಲ್ಲಿ 122 ಸಿಕ್ಸರ್ ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಬಹ್ರೇನ್‌ನ ಫಿಯಾಜ್ ಅಹ್ಮದ್ ಇದ್ದು ಇವರು 69 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಡೆವಾಲ್ಡ್ ಬ್ರೇವಿಸ್ ಇದ್ದು ಇವರ ಖಾತೆಯಲ್ಲಿ 63 ಸಿಕ್ಸರ್‌ಗಳು ಸೇರಿವೆ.

2025ರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು (3 ಸ್ವರೂಪ ಸೇರಿ)

ಅಭಿಷೇಕ್‌ ಶರ್ಮಾ, 19 ಪಂದ್ಯ, 50 ಸಿಕ್ಸರ್
ಶುಭಮನ್‌ ಗಿಲ್‌, 34 ಪಂದ್ಯ, 27 ಸಿಕ್ಸರ್‌
ರಿಷಭ್‌ ಪಂತ್‌, 7 ಪಂದ್ಯ, 26 ಸಿಕ್ಸರ್‌
ರವೀಂದ್ರ ಜಡೇಜಾ, 31 ಪಂದ್ಯ, 25 ಸಿಕ್ಸರ್‌
ರೋಹಿತ್ ಶರ್ಮಾ, 14 ಪಂದ್ಯ, 24 ಸಿಕ್ಸರ್‌

Story first published: Sunday, December 14, 2025, 16:35 [IST]
Other articles published on Dec 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+