Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ತಂಡಕ್ಕೆ ಅಭಿಷೇಕ್‌ ಶರ್ಮಾ ಭಯ; ಇಲ್ಲಿದೆ ಅಂಕಿ ಅಂಶ

ಟೀಮ್ ಇಂಡಿಯಾ, ಐರ್ಲೆಂಡ್‌ ಪ್ರವಾಸದಲ್ಲಿ ಹೀನಾಯ ಸೋಲು ಕಂಡಿದೆ. ಈ ಸೋಲಿನ ನೋವು ಇನ್ನು ಅಭಿಮಾನಿಗಳು ಹಾಗೂ ಆಟಗಾರರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ, ಮತ್ತೊಂದು ದೊಡ್ಡ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಬುಧವಾರ ಟೀಮ್ ಇಂಡಿಯಾ ಇಂಗ್ಲೆಂಡ್‌ ಪ್ರವಾಸದಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ಸ್ಟಾರ್ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ಎದುರಾಳಿ ತಂಡಕ್ಕೆ ಶಾಕ್ ನೀಡುವ ಅನಿವಾರ್ಯತೆ ಇದೆ. ಈ ವೇಳೆ ಎಲ್ಲರ ಕಣ್ಣುಗಳು ವಿಶ್ವದ ನಂಬರ್ ಒನ್ ಬ್ಯಾಟರ್ ಅಭಿಷೇಕ್‌ ಶರ್ಮಾ ಅವರ ಮೇಲೆ ನೆಟ್ಟಿದೆ. ಇವರು ಐರ್ಲೆಂಡ್‌ ವಿರುದ್ಧದ ಸರಣಿಯಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇವರ ಮೇಲೆ ಒತ್ತಡ ಹೆಚ್ಚಾಗಿದೆ. ಇವರು ಇಂಗ್ಲೆಂಡ್‌ ವಿರುದ್ಧ ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

Abhishek Sharma

ಫೆಬ್ರವರಿ 2025 ರಲ್ಲಿ, ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಂಡಾಗ ಅಭಿಷೇಕ್ ಅಬ್ಬರಿಸಿದ್ದರು. ಈ ಸರಣಿಯ ಐದನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ್ದರು. ಈ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಕೇವಲ 54 ಎಸೆತಗಳಲ್ಲಿ 7 ಬೌಂಡರಿ, 13 ಸಿಕ್ಸರ್‌ ಸಹಾಯದಿಂದ 135 ರನ್ ಬಾರಿಸಿ ಅಬ್ಬರಿಸಿದ್ದರು. ಉಭಯ ತಂಡಗಳು ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಯಾವೊಬ್ಬ ಬ್ಯಾಟರ್ ಕೂಡ ಈ ಮೊತ್ತಕ್ಕಿಂತ ಹೆಚ್ಚು ರನ್ ಬಾರಿಸಿಲ್ಲ.

ಇಂಗ್ಲೆಂಡ್‌ ವಿರುದ್ಧ ಹೇಗಿದೆ ಅಭಿಷೇಕ್‌ ಅಂಕಿ ಅಂಶ

25 ವರ್ಷದ ಅಭಿಷೇಕ್ ಶರ್ಮಾ ಅವರು ಭಾರತದ ಪರ ಆಡಿದ 48 ಟಿ20 ಪಂದ್ಯಗಳಲ್ಲಿ 1487 ರನ್‌ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 10 ಅರ್ಧಶತಕಗಳು ಸೇರಿವೆ. ಇನ್ನು ಇಂಗ್ಲೆಂಡ್‌ ವಿರುದ್ಧ ಇವರ ಪ್ರದರ್ಶನ ಭರ್ಜರಿಯಾಗಿದೆ. ಇವರು ಆಂಗ್ಲರ ವಿರುದ್ಧ ಆಡಿದ 6 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 288 ರನ್‌ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 1 ಅರ್ಧಶತಕ ಸೇರಿವೆ.

ಐರ್ಲೆಂಡ್‌ ವಿರುದ್ಧ ಟೀಮ್ ಇಂಡಿಯಾ ನೀಡಿದ್ದ ಪ್ರದರ್ಶನವನ್ನು ಮರೆತು ಮತ್ತೊಂದು ಸರಣಿಗೆ ಸಿದ್ಧತೆ ನಡೆಸಬೇಕಿದೆ. ಈ ವೇಳೆ ಆರಂಭಿಕರು ಬಿಗ್ ಇನಿಂಗ್ಸ್‌ ಕಟ್ಟಿದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.

ಜುಲೈ 1 ರಂದು ಮೊದಲ ಪಂದ್ಯ

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 10ಕ್ಕೆ ನಡೆಯಲಿದೆ.

Story first published: Tuesday, June 30, 2026, 22:40 [IST]
Other articles published on Jun 30, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+